ಕಾಯಕಯೋಗಿಗಳಿಗೆ ನೆರವಾಗುವುದು ಎಲ್ಲರ ಕರ್ತವ್ಯ: ದೇವೇಗೌಡ

| Published : Mar 30 2025, 03:00 AM IST

ಕಾಯಕಯೋಗಿಗಳಿಗೆ ನೆರವಾಗುವುದು ಎಲ್ಲರ ಕರ್ತವ್ಯ: ದೇವೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರಲ್ಲೂ ಅದಮ್ಯ ಚೈತನ್ಯ ಶಕ್ತಿ ಅಂತರ್ಗತವಾಗಿದೆ. ಅದು ಸಮಾಜಮುಖಿಯಾಗಿ ಎಲ್ಲರನ್ನೂ ದೈವ್ಯತ್ವದೆಡೆಗೆ ಸೆಳೆಯುವ ಶಕ್ತಿಯನ್ನು ಉದ್ದೀಪನಗೊಳಿಸುವ ಶಕ್ತಿ ಸಾಮಾಜಿಕ ಸಂಸ್ಥೆಗಳಿವೆ. ನಿಸ್ವಾರ್ಥ ಸೇವಾ ಮನೋಭಾವ ಸಮಾಜಗ್ರಾಹ್ಯ ಚಟುವಟಿಕೆಗಳನ್ನು ಗಮನ ಸೆಳೆಯುವಂತೆ ಮಾಡುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪೌರ ಕಾರ್ಮಿಕರು ಹಾಗೂ ಸಮಾಜದ ಕೆಳ ಸ್ಥರದಲ್ಲಿ ಕೆಲಸ ಮಾಡುವ ಕಾಯಕ ಯೋಗಿಗಳಿಗೆ ಸಹಾಯ ಮಾಡುವುದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಲಯನ್ಸ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ಎಂದು ಲಯನ್ಸ್ ಜಿಲ್ಲಾ ಸಂಪುಟ ಸಲಹೆಗಾರ ದೇವೇಗೌಡ ಶ್ಲಾಘಿಸಿದರು.

ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ ನಗರದ ಹೊರ ವಲಯದಲ್ಲಿರುವ ಎ ಅಂಡ್‌ ಎ ಸಭಾಂಣದಲ್ಲಿ ನಡೆದ ಪ್ರಾಂತೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರು ಒಂದೆರಡು ದಿನಗಳ ಕಾಲ ಚಳವಳಿ ನಡೆಸಿದರೆ ನಗರದ ಪರಿಸ್ಥಿತಿ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಊಹಿಸಲಾಗದು ಎಂದರು.

ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸೇವಾ ಕಾರ್ಯದಲ್ಲಿ ತೊಡಗುವರು. ಜೊತೆಗೆ ಶ್ರಮಿಕರು ಸಹ ಸಮಾಜಕ್ಕಾಗಿ ಕೆಲಸ ಮಾಡುತ್ತಾರೆ. ಅವರಿಗೂ ವಿವಿಧ ಸೌಲಭ್ಯಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.

ಪ್ರಾಂತೀಯ ಅಧ್ಯಕ್ಷ ಎಸ್.ಪಿ.ಆದರ್ಶ ಮಾತನಾಡಿ, ಪ್ರತಿಯೊಬ್ಬರಲ್ಲೂ ಅದಮ್ಯ ಚೈತನ್ಯ ಶಕ್ತಿ ಅಂತರ್ಗತವಾಗಿದೆ. ಅದು ಸಮಾಜಮುಖಿಯಾಗಿ ಎಲ್ಲರನ್ನೂ ದೈವ್ಯತ್ವದೆಡೆಗೆ ಸೆಳೆಯುವ ಶಕ್ತಿಯನ್ನು ಉದ್ದೀಪನಗೊಳಿಸುವ ಶಕ್ತಿ ಸಾಮಾಜಿಕ ಸಂಸ್ಥೆಗಳಿವೆ. ನಿಸ್ವಾರ್ಥ ಸೇವಾ ಮನೋಭಾವ ಸಮಾಜಗ್ರಾಹ್ಯ ಚಟುವಟಿಕೆಗಳನ್ನು ಗಮನ ಸೆಳೆಯುವಂತೆ ಮಾಡುತ್ತದೆ ಎಂದರು.

ಪಿಡಿಜಿ ಮತ್ತು ಮಲ್ಟಿಪಲ್ ಕೌನ್ಸಿಲ್ ಛೇರ್ಮನ್ ಡಾ.ಎನ್.ಕೃಷ್ಣೇಗೌಡ, ಜಿಲ್ಲಾ ಗೌರ್ನರ್ ಎನ್.ಸುಬ್ರಮಣ್ಯ, ಮತಿದೇವಕುಮಾರ್, ಸಿ.ಡಿ.ಕೃಷ್ಣ , ಡಾ.ಜಿ.ಎ.ರಮೇಶ್, ಕೆ.ಎಸ್.ಸುನಿಲ್ ಕುಮಾರ್, ದೇವರಸೇಗೌಡ, ಚಂದ್ರಶೇಖರ್, ಸುರೇಶ, ಜಗದೇಶ್, ಕೆಂಪೇಗೌಡ, ರೇವಣ್ಣ , ನಿಂಗರಾಜು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಪತ್ರಾಭಿಯಾನ

ಮಂಡ್ಯ: ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತಿ ಅಂಗವಾಗಿ ಏ.14 ರಂದು ಶಾಲಾ ವಿದ್ಯಾರ್ಥಿಗಳಿಗೆ ಡಾ. ಬಿ.ಆರ್ ಅಂಬೇಡ್ಕರ್ ರವರ ಆದರ್ಶಗಳನ್ನು ಕುರಿತು ಪತ್ರದ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಪತ್ರಾಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ತಹಸೀಲ್ದಾರ್ ಅಧ್ಯಕ್ಷರು, ತಾಪಂ ಇಒ, ಆಯಾ ತಾಲೂಕಿನ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ, ಟಿ.ಸಿ.ಒ ಸದಸ್ಯರು ಹಾಗೂ ಸಮಾಜ ಕಲ್ಯಾಣ ಇಲಾಖೆಯ, ಸಹಾಯಕ ನಿರ್ದೇಶಕರು, ಸದಸ್ಯ ಕಾರ್ಯರ್ಶಿ ಇವರನ್ನು ಒಳಗೊಂಡಂತೆ ತಾಲೂಕು ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.