ಜಾನಪದ ಕಲೆ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ: ಮಡಿವಾಳಪ್ಪ ಬೀದರಗಡ್ಡಿ

| Published : Jan 10 2025, 12:46 AM IST

ಜಾನಪದ ಕಲೆ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ: ಮಡಿವಾಳಪ್ಪ ಬೀದರಗಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಜನರ ಬಾಯಿ ಮಾತಿನ ಮೂಲಕ ಹರಡಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದ್ದು, ಇದು ಪ್ರತಿಯೊಬ್ಬರ ಕರ್ತವ್ಯ ಆಗಬೇಕು. ವಚನ ಚಳವಳಿ, ದಾಸ ಸಾಹಿತ್ಯ, ಸೂಫಿ ಪರಂಪರೆ ಜಾನಪದದ ಕೊಡುಗೆ ಆಗಿದೆ ಎಂದು ಬಿಜೆಪಿ ಮುಖಂಡ ಮಡಿವಾಳಪ್ಪ ಬೀದರಗಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಜನರ ಬಾಯಿ ಮಾತಿನ ಮೂಲಕ ಹರಡಿರುವ ಜಾನಪದ ಕಲೆ ಉಳಿಸಿ ಬೆಳೆಸಬೇಕಾಗಿದ್ದು, ಇದು ಪ್ರತಿಯೊಬ್ಬರ ಕರ್ತವ್ಯ ಆಗಬೇಕು. ವಚನ ಚಳವಳಿ, ದಾಸ ಸಾಹಿತ್ಯ, ಸೂಫಿ ಪರಂಪರೆ ಜಾನಪದದ ಕೊಡುಗೆ ಆಗಿದೆ ಎಂದು ಬಿಜೆಪಿ ಮುಖಂಡ ಮಡಿವಾಳಪ್ಪ ಬೀದರಗಡ್ಡಿ ಹೇಳಿದರು.

ಸಮೀಪದ ತಾವಲಗೇರಿ ಗ್ರಾಮದ ಅಂಬೇಡ್ಕರ್‌ ಗಲ್ಲಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಹಾಗೂ ಡಾ.ಬಿ.ಆರ್. ಅಂಬೇಡ್ಕರ್‌ ಜಾನಪದ ಕಲಾ ಪೋಷಕ ಸಂಘ, ತಾವಲಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಾನಪದ ಕಲಾ ಸೌರಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಕಲೆ ಸಮಾಜದ ಒಳಿತಿಗೆ, ಮನುಷ್ಯನ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಬೇಕು. ಆಗಲೇ ಕಲೆಗೆ ಒಂದು ಸಾರ್ಥಕತೆ ಮತ್ತು ಅರ್ಥ ಬರುತ್ತದೆ ಎಂದರು.

ಕೆಡಿಪಿ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಡಾ.ರಮೇಶ ಹರಿಜನ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಶಿವಾನಂದ ಮಾದರ, ಪ್ರಕಾಶ ಹರಿಜನ, ಸಂತೋಷ ಅವಜಪ್ಪಗೋಳ, ದ್ಯಾಮಣ್ಣ ಬಂಡಿವಡ್ಡರ, ಲಖಪ್ಪ ಕುರಿ, ಮಹಾದೇವ ಗಡ್ಡಿ, ಗೌಡಪ್ಪ ತಳನಟ್ಟಿ ಇತರರು ಇದ್ದರು.

ಜಾನಪದ ಗೀತೆ, ಜಾನಪದ ನೃತ್ಯ, ಕೋಲಾಟ, ಭಜನೆ, ಡೊಳ್ಳಿನ ಪದಗಳು, ಲಾವಣಿ, ಸೋಬಾಣ, ಸಂಪ್ರದಾಯ ಪದಗಳು, ಸಂಗ್ಯಾ-ಬಾಳ್ಯಾ ಸಣ್ಣಾಟ ಜರುಗಿದವು. ಬಸವರಾಜ ಹರಿಜನ ನಿರೂಪಿಸಿದರು. ಯಮನವ್ವ ಜೋಕಾನಟ್ಟಿ ವಂದಿಸಿದರು.