ಹುತಾತ್ಮ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ

| Published : Jul 27 2025, 12:00 AM IST

ಹುತಾತ್ಮ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಗಿಲ್ ವಿಜಯ ದಿವಸ ನೆನಪಿನ ಜೊತೆಗೆ ಯುದ್ಧದಲ್ಲಿ ವೀರ ಮರಣ ಅಪ್ಪಿದ ಸೈನಿಕರ ಶ್ರಮವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಶಾಸಕ ಎಚ್.ಪಿ. ಸ್ವರೂಪ್ ತಿಳಿಸಿದರು. ಚೈನ ದೇಶವು ಈ ಹಿಂದೆ ಬಂದಂತಹ ಕೋವಿಡ್ ವೈರಾಣುವನ್ನು ದೇಶಾದ್ಯಂತ ಹರಡಿಸಿ ಯುದ್ಧ ಸಾರಿತ್ತು. ಆದರೆ ಭಾರತ ಯಾವುದಕ್ಕೂ ಕಡಿಮೆ ಇಲ್ಲ. ತಡೆಯುವ ಶಕ್ತಿ ನಮ್ಮಲ್ಲೂ ಇದೆ ಎಂಬುದಕ್ಕೆ ಸಾಬೀತು ಮಾಡಿದೆ. ಭಾರತೀಯ ಸೇನೆ ಆಪರೇಷನ್ ಸಿಂದೂರ ಮೂಲಕ ಮಾಡಿ ಎದುರಾಳಿಯನ್ನು ಮೆಟ್ಟಿ ನಿಲ್ಲಿಸುವ ಕೆಲಸವನ್ನು ಭಾರತೀಯ ಯೋಧರು ಮಾಡಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಕಾರ್ಗಿಲ್ ವಿಜಯ ದಿವಸ ನೆನಪಿನ ಜೊತೆಗೆ ಯುದ್ಧದಲ್ಲಿ ವೀರ ಮರಣ ಅಪ್ಪಿದ ಸೈನಿಕರ ಶ್ರಮವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಶಾಸಕ ಎಚ್.ಪಿ. ಸ್ವರೂಪ್ ತಿಳಿಸಿದರು. ನಗರದ ಕುವೆಂಪು ರಸ್ತೆ ಬಳಿ ಇರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಉದ್ಯಾನವನದ ಆವರಣದಲ್ಲಿ ಮಾಜಿ ಸೈನಿಕರ ಸಂಘದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಆಚರಣೆಯನ್ನು ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ, ನಮನ ಸಲ್ಲಿಸಿ ಎರಡು ನಿಮಿಷ ಮೌನ ಆಚರಿಸಿ ಸಿಹಿ ಹಂಚುವುದರ ಮೂಲಕ ಗೌರವಿಸಿ ನಂತರ ಮಾತನಾಡಿದ ಶಾಸಕರು, ವಾರ್ ಮೆಮೋರಿಯಲ್ ಹಾಲ್ ಬೆಂಗಳೂರು ಬಿಟ್ಟರೆ ಹಾಸನದಲ್ಲಿ ಮಾತ್ರ ಇದೆ. ರಾಜ್ಯದ ಎಲ್ಲೂ ಕೂಡ ಇರುವುದಿಲ್ಲ. ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಹಾಸನ ಜಿಲ್ಲೆಯಲ್ಲಿ ಮಾಜಿ ಯೋಧರು ಇದ್ದು, ಆದರೇ ೧೮೦೦ ಜನರು ಮಾತ್ರ ಸಂಘದಲ್ಲಿ ಸದಸ್ಯತ್ವ ಪಡೆದಿದ್ದಾರೆ. ಯಾರು ಮಾಜಿ ಯೋಧರು ಇದ್ದೀರಾ ಎಲ್ಲರೂ ಕೂಡ ಸಂಘಕ್ಕೆ ಬಂದು ಸದಸ್ಯತ್ವ ಪಡೆಯುವಂತೆ ಮನವಿ ಮಾಡಿದರು. ಚೈನ ದೇಶವು ಈ ಹಿಂದೆ ಬಂದಂತಹ ಕೋವಿಡ್ ವೈರಾಣುವನ್ನು ದೇಶಾದ್ಯಂತ ಹರಡಿಸಿ ಯುದ್ಧ ಸಾರಿತ್ತು. ಆದರೆ ಭಾರತ ಯಾವುದಕ್ಕೂ ಕಡಿಮೆ ಇಲ್ಲ. ತಡೆಯುವ ಶಕ್ತಿ ನಮ್ಮಲ್ಲೂ ಇದೆ ಎಂಬುದಕ್ಕೆ ಸಾಬೀತು ಮಾಡಿದೆ. ಭಾರತೀಯ ಸೇನೆ ಆಪರೇಷನ್ ಸಿಂದೂರ ಮೂಲಕ ಮಾಡಿ ಎದುರಾಳಿಯನ್ನು ಮೆಟ್ಟಿ ನಿಲ್ಲಿಸುವ ಕೆಲಸವನ್ನು ಭಾರತೀಯ ಯೋಧರು ಮಾಡಿದ್ದಾರೆ ಎಂದರು.

ಜಮ್ಮು ಕಾಶ್ಮೀರ ಸಿಯಾಚೀನನಲ್ಲಿಯೂ ಕೂಡ ಮನುಷ್ಯರು ಯಾರು ಜೀವನ ಮಾಡದಂತಹ ಸ್ಥಳವಾಗಿತ್ತು. ಆಕ್ಸಿಜನ್ ಕಡಿಮೆ ಇರುವುದರಿಂದ ಉಸಿರು ಆಡುವುದೇ ಕಷ್ಟವಾಗಿತ್ತು, ಅಂತಹ ಸ್ಥಳಕ್ಕೆ ನಮ್ಮ ಯೋಧರು ಹೋಗಿ ಯುದ್ಧ ಮಾಡಿ ನಮ್ಮನ್ನೆಲ್ಲಾ ಮತ್ತು ದೇಶವನ್ನು ಕಾಯುವ ಕೆಲಸ ನಮ್ಮ ಯೋಧರು ಮಾಡಿದ್ದಾರೆ. ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ ಎಂದು ಕಿವಿಮಾತು ಹೇಳಿದರು.

ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ ಸಾಗರ್ ಮಾತನಾಡಿ, ೨೦೧೬ರಲ್ಲಿ ಶಾಸಕರಾಗಿದ್ದ ದಿವಂಗತ ಎಚ್.ಎಸ್. ಪ್ರಕಾಶ್ ಅವರು ಖಾಯಿಲೆ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅಂದಿನ ಅಧ್ಯಕ್ಷರಾಗಿದ್ದ ಕರ್ನಲ್ ನಟೇಶ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನೋಡಲು ಹೋದಾಗ ಹಾಸನದಲ್ಲೂ ಒಂದು ವಾರ್ ಮೆಮೋರಿಯಲ್ ಹಾಲ್ ಮಾಡಬೇಕು ಎನ್ನುವ ವಿಚಾರ ಪ್ರಸ್ತಾಪಿಸಿದರು. ಆಸ್ಪತ್ರೆಯಲ್ಲಿದ್ದಾಗಲು ದೇಶ ಭಕ್ತಿ ಮೆರೆದಿದ್ದಾರೆ ಎಂದು ನೆನಪಿಸಿಕೊಂಡರು. ಇಲ್ಲಿರುವ ಸೈನಿಕ ಭವನಕ್ಕೆ ಮಾಜಿ ಯೋಧರ ಅನೇಕರ ಶ್ರಮಗಳಿದೆ. ಮೇಡಿನ್ ಇನ್ ಇಂಡಿಯಾ ಎಂದು ದೇಶದ ಪ್ರಧಾನಿ ನರೇಂದ್ರ ಮೋದಿ ಯಾವಾಗಲು ಹೇಳುತ್ತಿರುತ್ತಾರೆ. ಭಾರತಕ್ಕೆ ಶತ್ರು ರಾಷ್ಟ್ರ ಎಂದರೇ ಪಾಕಿಸ್ತಾನ ಎಂದು ಹೇಳುತ್ತಾರೆ. ಆದರೇ ಅದಕ್ಕಿಂತ ಖತರ್ನಾಕ್ ಶತ್ರು ರಾಷ್ಟ್ರ ಎಂದರೇ ಚೈನಾ. ಚೈನಾವು ಮುಂದೆ ಬಾರದೇ ನಮ್ಮ ಅಕ್ಕಪಕ್ಕದ ರಾಷ್ಟ್ರದ ಜೊತೆ ಸೇರಿ ಎತ್ತುಗಟ್ಟುವ ಕುತಂತ್ರ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಇದೆ ವೇಳೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ನಿವೃತ್ತ ಯೋಧರ ಮಕ್ಕಳನ್ನು ಅಭಿನಂಧಿಸಿ ಗೌರವ ಧನ ನೀಡಿ ಗೌರವಿಸಿದರು. ಇದೆ ವೇಳೆ ವಿಜಯೋತ್ಸವವನ್ನು ಜೈಕಾರ ಹಾಕುವುದರ ಮೂಲಕ ಗೌರವಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಯೋಧರ ಸಂಘದ ಗುರುತಿನ ಕಾರ್ಡ್ ಬಿಡುಗಡೆ ಮಾಡಿದರು. ಕಾರ್ಯಕ್ರಮದ ಸ್ಥಳದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿ ಹೆಚ್ಚೆಚ್ಚು ಜನರು ರಕ್ತದಾನ ಮಾಡಲು ಮುಂದಾಗುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಕಾರ್ಪರೇಟರ್‌ ವಾಸುದೇವ್, ೧೫ನೇ ಬೆಟಾಲಿಯನ್ ಅಧಿಕಾರಿ ಬೆಳಗಾವಿಯ ಮೇಜರ್ ಶಂಕರ್ ಬೋರ್ಗಲ್, ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಲೆಪ್ಟನ್ ಕರ್ನಲ್ ದೊರೆರಾಜು, ಸಂಘದ ಅಧ್ಯಕ್ಷ ಪ್ರದೀಪ್ ಸಾಗರ್‌, ಉಪಾಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಸ್ವಾಮಿ, ಪ್ರಭಾಕರ್‌, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್. ರಮೇಶ್, ಖಜಾಂಚಿ ಎಚ್.ಆರ್‌. ಚನ್ನೇಗೌಡ, ಮಾಜಿ ಅಧ್ಯಕ್ಷ ಎಚ್.ಕೆ. ನಾಗೇಶ್, ತಿಮ್ಮರಾಯಶೆಟ್ಟಿ, ಇನ್ನರ್‌ವ್ಹೀಲ್‌ ಕ್ಲಬ್ ನೂತನ ಅಧ್ಯಕ್ಷೆ ವನಿತಾ, ತನುಜಾ, ಲಯನ್ಸ್ ಹಾಸನಾಂಬ ಕ್ಲಬ್ ಕೆ.ಕೆ. ಮೋಹನ್ ಕುಮಾರ್ ಇತರರು ಉಪಸ್ಥಿತರಿದ್ದರು.