ರಾಷ್ಟ್ರಧ್ವಜಕ್ಕೆ ಗೌರವ ಕೊಡೋದು ಎಲ್ಲರ ಕರ್ತವ್ಯ: ಮಲ್ಲಪ್ಪ ಪರನಂಟಿ

| Published : Feb 05 2025, 12:33 AM IST

ರಾಷ್ಟ್ರಧ್ವಜಕ್ಕೆ ಗೌರವ ಕೊಡೋದು ಎಲ್ಲರ ಕರ್ತವ್ಯ: ಮಲ್ಲಪ್ಪ ಪರನಂಟಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ನಮ್ಮ ದೇಶದ ರಾಷ್ಟ್ರ ಧ್ವಜಕ್ಕಗೆ ಗೌರವ ಕೋಡಲೆಬೇಕು. ದೇಶದಲ್ಲಿ ವಾಸಿಸುವ ಪ್ರತಯೊಬ್ಬರ ಕರ್ತವ್ಯ ಎಂದು ಶಾಲಾ ಸುಧಾರಣೆ ಸಮಿತಿ ಅಧ್ಯಕ್ಷ ಮಲ್ಲಪ್ಪ ಪರನಂಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ನಮ್ಮ ದೇಶದ ರಾಷ್ಟ್ರ ಧ್ವಜಕ್ಕಗೆ ಗೌರವ ಕೋಡಲೆಬೇಕು. ದೇಶದಲ್ಲಿ ವಾಸಿಸುವ ಪ್ರತಯೊಬ್ಬರ ಕರ್ತವ್ಯ ಎಂದು ಶಾಲಾ ಸುಧಾರಣೆ ಸಮಿತಿ ಅಧ್ಯಕ್ಷ ಮಲ್ಲಪ್ಪ ಪರನಂಟಿ ತಿಳಿಸಿದರು.

ತಾಲೂಕಿನ ಹಿರೇಕೊಡಗಲಿ ಶಾಲೆಯಲ್ಲಿ ಶಾಲಾ ಹಂತದ ಸೇವಾದಳದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಭಾರತ ಸೇವಾದಳ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ರಾಷ್ಟ್ರ ರಕ್ಷಣೆಯ ಜಾಗೃತಿ ಮೂಡಿಸಲು ನಮ್ಮ ಶಾಲೆಯಲ್ಲಿ ಒಂದು ದಿನದ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸಲು ಭಾರತ ಸೇವಾದಳ ಅವಿರತವಾಗಿ ಶ್ರಮಿಸುತ್ತಿದೆ ಎಂದರು.

ಮುಖ್ಯ ಶಿಕ್ಷಕ ಡಿ.ಎಚ್. ಮುಕ್ಕಣ್ಣನವರು ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಶಿಸ್ತು ಕಲಿಸಲು ಶಾಲೆಗಳಲ್ಲಿ ಸ್ಕೌಟ್ಸ್, ಗೈಡ್ಸ್, ಎನ್.ಸಿ.ಸಿ, ಎನ್.ಎಸ್.ಎಸ್ ಘಟಕ ತೆರೆಯಲಾಗಿದೆ. ರಾಷ್ಟ್ರಧ್ವಜವನ್ನು ಗೌರವಿಸಬೇಕು. ಸಹೋದರತೆ, ಭಾವೈಕ್ಯತೆ, ನಾಯಕತ್ವ ಗುಣ, ಸಮಾನತೆ, ಸರಳತೆ, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶಾಲೆಯ ಹಳೆಯ ವಿದ್ಯಾರ್ಥಿ ಸಚಿನ್ ಸಂಯೋಜನೆಯಲ್ಲಿ ಮೂಡಿ ಬಂದ ಸೇವಾದಳ ಹಾಗೂ ನೃತ್ಯಗಳು ಊರಿನ ಜನರು ಪಾಲಕರು ಮನಸೂರೆಗೊಂಡವು. ಅತ್ಯಂತ ಶಿಸ್ತುಬದ್ಧವಾಗಿ ಮೂಡಿ ಬಂದ ಸೇವಾದಳದ ಪಥ ಸಂಚಲನ ಆಕರ್ಷಕವಾಗಿತ್ತು. ಅನುಪಮಾ ಪಾಡಮುಖಿ ನಿರೂಪಿಸಿ ವಂದಿಸಿದರು.