ಸಾರಾಂಶ
ಶಹಾಪುರ ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದನಾ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ಶಹಾಪುರ
ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಇವುಗಳನ್ನು ಉಳಿಸಿ, ಬೆಳೆಸಿ ಅಭಿವೃದ್ಧಿಪಡಿಸಲು ಸದಾ ಶ್ರಮಿಸುವೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಅಭಿನಂದನಾ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡು-ನುಡಿ, ರೈತರ ಬಗ್ಗೆ ಹೋರಾಟಗಳು ಸಂಘ-ಸಂಸ್ಥೆಗಳಿಂದ ನಿರಂತರವಾಗಿರಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಪರಿಷತ್ತಿನ ಕಟ್ಟಡ ಹಾಗೂ ನಿವೇಶನದ ಸುತ್ತ ಕಂಪೌಂಡ್ ನಿರ್ಮಿಸಲು 10 ಲಕ್ಷ ರು. ಒದಗಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಸಿದ್ಧಲಿಂಗಣ್ಣ ಆನೆಗುಂದಿ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳ ಕುರಿತು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ, ಸಾಹಿತಿ ಸಿದ್ಧರಾಮ ಹೊನ್ಕಲ್, ಶರಣು ಬಿ. ಗದ್ದುಗೆ, ವಿವಿಧ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ದೇವಿಂದ್ರಪ್ಪ ಹಡಪದ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ್, ಮಲ್ಲಣ್ಣ ಹೊಸ್ಮನಿ, ಮಹೇಶ ಪತ್ತಾರ, ಡಾ. ನಾಗರಾಜ ದೊರೆ, ಶರಣಬಸವ ಪೊಲೀಸ್ ಬಿರಾದಾರ್, ಹುಸೇನಪ್ಪ ಕಟ್ಟಿಮನಿ, ಬಸವರಾಜ ಹಿರೇಮಠ, ಸಾಯಬಣ್ಣ ಪುರ್ಲೆ, ಶಂಕರ ಹುಲ್ಕಲ್, ಕಾವೇರಿ ಪಾಟೀಲ್, ಸುರೇಶ ಅರುಣಿ, ನಿಂಗಣ್ಣ ತಿಪ್ಪನಹಳ್ಳಿ ಇತರರಿದ್ದರು.ಅಭಿನಂದನಾ ಸಮಾರಂಭನಗರದ ಕನ್ನಡ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಡಾ. ಶಿವರಂಜನ್ ಸತ್ಯಂಪೇಟ, ಡಾ. ಮಲ್ಲಿಕಾರ್ಜುನ ಮಾನ್ಪಡೆ, ಡಾ. ಬಸವರಾಜ ಕಲೆಗಾರ, ಸಣ್ಣ ನಿಂಗಪ್ಪ ನಾಯ್ಕೋಡಿ, ಪ್ರಕಾಶ ದೊರೆ, ಈರಣ್ಣ ಹಾದಿಮನಿ, ಈರಣ್ಣ ಮೌರ್ಯ, ಮೀನಾಕ್ಷಿ ಹೊಸ್ಮನಿ, ಪರಸಪ್ಪ ಅಜಗಪ್ಪನವರ್, ಸಂಗೀತಾ ದೇಸಾಯಿ, ಶಕುಂತಲಾ ಹಡಗಲಿ, ಅಶೋಕ ಚೌಧರಿ, ಅಮೃತ ಸಾಹು, ಉದಯ ಮುಂತಾದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.