ಹೊಸಕೋಟೆ: ನಗರದ ಸಮೀಪ ನಿಂಬೆಕಾಯಿಪುರದ ಜನಪದರು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು, ಜನಪದರು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ನವಚೇತನ ನೃತ್ಯ ಅಕಾಡೆಮಿ ಸಹಯೋಗದಲ್ಲಿ ನಾದ ನೃತ್ಯ ವೈಭವ ಹೆಸರಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಗೀತ ನೃತ್ಯೋತ್ಸವ ಅದ್ಧೂರಿಯಾಗಿ ನೆರವೇರಿತು
ಹೊಸಕೋಟೆ: ನಗರದ ಸಮೀಪ ನಿಂಬೆಕಾಯಿಪುರದ ಜನಪದರು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು, ಜನಪದರು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ನವಚೇತನ ನೃತ್ಯ ಅಕಾಡೆಮಿ ಸಹಯೋಗದಲ್ಲಿ ನಾದ ನೃತ್ಯ ವೈಭವ ಹೆಸರಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಗೀತ ನೃತ್ಯೋತ್ಸವ ಅದ್ಧೂರಿಯಾಗಿ ನೆರವೇರಿತು.
ಜನಪದರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕಾಟಂನಲ್ಲೂರು ವೆಂಕರಮಣಪ್ಪ ಮಾತನಾಡಿ, ಕಲೆ, ಸಂಸ್ಕೃತಿ, ನಾಡು ನುಡಿ ಉಳಿಸಿ ಬೆಳೆಸುವ ಕೆಲಸ ಎಲ್ಲರೂ ಮಾಡಬೇಕು ಎಂದರು.ಸಿದ್ಧರಾಮ ಕೊಪ್ಪರ್ ರಚನೆ ಹಾಗೂ ಮಧುರ ಶೆಟ್ಟಿ ನಿರ್ದೇಶನದಲ್ಲಿ ಜೀವನಗಾಥೆ ಆಧಾರಿತ "ಖಾಕಿಯೊಳಗಿನ ಸಂತ " ನಾಟಕ ಬೆಂಗಳೂರಿನ ಸಾರಿಗೆ ಸಂಸ್ಥೆಯ ನೌಕರರ ಸಾಂಸ್ಕೃತಿಕ ಕಲಾ ಕುಟೀರ ತಂಡದ ಕಲಾವಿದರು ಪ್ರದರ್ಶಿಸಿದರು.
ಈ ವೇಳೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾದ ಶುಭಾ ಧನಂಜಯ, ಕೋಲಾರ ರಾಜಪ್ಪ, ಕಲ್ಪನಾ, ಡಿ.ಆರ್. ನಿರ್ಮಲ, ಮಂಜುನಾಥ್, ವಿದುಷಿ ಎಂ.ಕೆ.ವಾಸವಿ, ರಾಮಕೃಷ್ಣ ಬೆಳ್ತೂರು, ಕೋಲಾರ ರಮೇಶ್, ಸಿದ್ಧೇಶ್ವರ ನನಸುಮನೆ, ಎಂ.ಸುರೇಶ್, ಆರ್.ಶಿವಕುಮಾರ್, ವೆಂಕಟಾಚಲಪತಿ, ಶಿವಕುಮಾರ್, ಕೃಷ್ಣ ಸುರೇಶ, ರಾಜಣ್ಣ, ಕೆ.ಮುನಿರಾಜು, ನಿತಿನ್, ಸಾಗರ್, ನಾಗೇಶ್ ರೂಪ, ಮಧುಸೂದನ್ ಇತರರಿದ್ದರು.ಫೋಟೋ: 9 ಹೆಚಎಸ್‌ಕೆ 4
ಹೊಸಕೋಟೆ ಜನಪದರು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಜನಪದರು ಸಾಂಸ್ಕೃತಿಕ ವೇದಿಕೆ, ಶ್ರೀ ನವಚೇತನ ನೃತ್ಯ ಅಕಾಡೆಮಿ ಸಹಯೋಗದಲ್ಲಿ ನಾದ ನೃತ್ಯ ವೈಭವ ಕಾರ್ಯಕ್ರಮವನ್ನು ಜನದಪರು ರಂಗಮಂದಿರ ಅಧ್ಯಕ್ಷ ವೆಂಕಟರಮಣಪ್ಪ ಉದ್ಘಾಟಿಸಿದರು.