ಕೋಲಾರ:
ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗೆ ಗೌರವ ನೀಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಹಾಗೂ ಧ್ವಜದ ನಿರ್ವಹಣೆ ಕುರಿತು ಅರಿವು ಇರಬೇಕು ಎಂದು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.ತಾಲೂಕಿನ ನರಸಾಪುರ ಕೆಪಿಎಸ್ ಶಾಲೆ ಆವರಣದಲ್ಲಿ ಭಾರತ ಸೇವಾದಳದಿಂದ ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಲಕ್ಷಾಂತರ ಮಂದಿಯ ತ್ಯಾಗ ಮತ್ತು ಬಲಿದಾನಗಳಿಂದ ಪಡೆದುಕೊಂಡ ಸ್ವಾತಂತ್ರ್ಯ ಉಳಿಸಿ ಸಂರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ದೇಶವಾಸಿಗಳದಾಗಿದ್ದು, ಅದರಲೂ ಯುವ ಪೀಳಿಗೆ ದೇಶಾಭಿಮಾನವನ್ನು ಬೆಳೆಸಿಕೊಂಡು ದೇಶದ ಸಂರಕ್ಷಕರಾಗಬೇಕೆಂದು ಸಲಹೆ ನೀಡಿದರು.
ಅಖಂಡ ಭಾರತವು ಜಾತಿ ಧರ್ಮ ಗಡಿ ಭಾಷೆ ಬೇಧಭಾವ ಮೀರಿ ರಾಷ್ಟ್ರಧ್ವಜಕ್ಕೆ ಗೌರವ ನೀಡುತ್ತೇವೆ, ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಅಖಂಡ ಭಾರತ ಗೌರವಿಸುವ ರಾಷ್ಟ್ರ ಧ್ವಜ ರೂಪಿಸಿ ಅಂಗೀಕರಿಸಿದ ದಿನವನ್ನು ಆಚರಿಸುತ್ತಿದ್ದೇವೆ ಎಂದರು.ವೇದಿಕೆಯಲ್ಲಿ ಕೆಪಿಎಸ್ ಶಾಲೆ ಮುಖ್ಯ ಶಿಕ್ಷಕ ಜಗನ್ನಾಥ್, ಭಾರತ ಸೇವಾದಳ ಜಿಲ್ಲಾ ಸಂಘಟಕ ದಾನೇಶ್, ಪತ್ರಕರ್ತ ಚಾಂದ್ ಪಾಷಾ, ಶಿಕ್ಷಕರಾದ ಅಮೃತ ಬಿ.ಪಿ.ಭಾರತಿ, ಹನುಮಾನ್ ಸಿಂಗ್, ಅರ್.ಹೇಮಾವತಿ, ವಿಜಯಮ್ಮ, ಶ್ರೀರಾಮಯ್ಯ, ಪರ್ವೀನ್‌ತಾಜ್, ಡಿ.ಭಾರತಿ, ನಾರಾಯಣಮ್ಮ, ಚಂದ್ರಕಲಾ, ಹಂಸವೇಣಿ, ಕುಸುಮ, ವೆಂಕಟರಮಣ, ಮುಜಾಹಿದ್ ಉಲ್ಲಾ ಷರೀಫ್, ಸೌಮ್ಯ, ಮನುಜ, ಲತಾ, ಕೋಮಲ, ಶೈಲಜ, ಕವಿತಾ ಇದ್ದರು.