ಶೋಷಿತ ಸಮುದಾಯಗಳು ಒಗ್ಗಟ್ಟು ಪ್ರದರ್ಶನ ಮಾಡುವುದು ಅನಿವಾರ್ಯ

| Published : Jan 19 2024, 01:47 AM IST

ಸಾರಾಂಶ

ಚಾಮರಾಜನಗರ: ಶೋಷಿತ ಸಮುದಾಯಗಳಿಂದ ಬಂದ ನಾವುಗಳು ಒಂದಾಗಿ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಸವಲತ್ತುಗಳನ್ನು ಪಡೆದುಕೊಳ್ಳಲು ಬಲಾಡ್ಯ ಸಮುದಾಯಗಳ ವಿರುದ್ದ ಹೋರಾಟ ಮಾಡುವ ಅನಿರ್ವಾಯತೆ ಸೃಷ್ಠಿಯಾಗಿದೆ ಎಂದು ಶೋಷಿತ ವರ್ಗಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ರಾಮಚಂದ್ರಪ್ಪ ತಿಳಿಸಿದರು. ನಗರ ಸಮೀಪದ ಮಲ್ಲಯ್ಯನಪುರ ಗ್ರಾಮದಲ್ಲಿ ಶ್ರೀ ಕನಕ ರಾಯಣ್ಣ ಬಳಗದ ನೂತನ ಸಂಘ ಉದ್ವಾಟನೆ ಹಾಗೂ ನಾಮಫಲಕವನ್ನು ಅನಾವರಣ ಮಾಡಿ ಅವರು ಮಾತನಾಡಿದರು.

ಚಾಮರಾಜನಗರ: ಶೋಷಿತ ಸಮುದಾಯಗಳಿಂದ ಬಂದ ನಾವುಗಳು ಒಂದಾಗಿ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಸವಲತ್ತುಗಳನ್ನು ಪಡೆದುಕೊಳ್ಳಲು ಬಲಾಡ್ಯ ಸಮುದಾಯಗಳ ವಿರುದ್ದ ಹೋರಾಟ ಮಾಡುವ ಅನಿರ್ವಾಯತೆ ಸೃಷ್ಠಿಯಾಗಿದೆ ಎಂದು ಶೋಷಿತ ವರ್ಗಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ರಾಮಚಂದ್ರಪ್ಪ ತಿಳಿಸಿದರು. ನಗರ ಸಮೀಪದ ಮಲ್ಲಯ್ಯನಪುರ ಗ್ರಾಮದಲ್ಲಿ ಶ್ರೀ ಕನಕ ರಾಯಣ್ಣ ಬಳಗದ ನೂತನ ಸಂಘ ಉದ್ವಾಟನೆ ಹಾಗೂ ನಾಮಫಲಕವನ್ನು ಅನಾವರಣ ಮಾಡಿ ಅವರು ಮಾತನಾಡಿದರು.

ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹಾಗೂ ಚುನಾವಣೆಗಳನ್ನು ನೋಡಿದರೆ, ಬಲಾಢ್ಯ ಸಮುದಾಯಗಳು ಶೋಷಿತ ಸಮುದಾಯಗಳನ್ನು ಮತ್ತಷ್ಟು ಶೋಷಣೆ ಮಾಡಲು ಮುಂದಾಗಿವೆ. ರಾಜ್ಯದಲ್ಲಿರುವ ಎರಡು ಪ್ರಬಲ ಸಮುದಾಯಗಳು ರಾಜಕೀಯವಾಗಿ ಅಧಿಕಾರ ಪಡೆದುಕೊಳ್ಳಲು ಶೋಷಿತ ಸಮುದಾಯಗಳನ್ನು ತುಳಿಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ. ಇದರ ಹೊರತಾಗಿಯೂ ಹಿಂದುಳಿದ ವರ್ಗಗಳ ನೇತಾರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಅದರೆ, ಅವರು ೨೦೧೩ ರಲ್ಲಿ ಕೊಟ್ಟಂತಹ ಆಡಳಿತವನ್ನು ಈಗ ನೀಡಲು ಬಿಡುತ್ತಿಲ್ಲ. ಅವರ ಯೋಜನೆಗಳು ಹಾಗೂ ಕಾರ್ಯಕ್ರಮಗಳು ಅನುಷ್ಠಾನಗೊಳ್ಳದಂತೆ ತಡೆಯುತ್ತಿರುವ ಮನುವಾದಿ ಮನಸ್ಥಿತಿಗಳು ನಿರಂತರವಾಗಿ ಕಿರುಕುಳ ನೀಡುತ್ತಾ ಬಂದಿದೆ. ಇದರ ವಿರುದ್ದ ಶೋಷಿತ ವರ್ಗಗಳೂ ಜಾಗೃತಿಗೊಳ್ಳಬೇಕಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಶೋಷಿತ ಸಮುದಾಯಗಳಾದ ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರು ಒಗ್ಗಟ್ಟು ಪ್ರದರ್ಶನ ಮಾಡಿ ಜಾಗೃತಿರಾಗೋಣ. ಸದ್ಯದಲ್ಲಿಯೇ ರಾಜ್ಯ ಮಟ್ಟದಲ್ಲಿ ಶೋಷಿತ ಸಮುದಾಯಗಳ ಸಮಾವೇಶವನ್ನು ಆಯೋಜನೆ ಮಾಡಲಿದ್ದು, ಎಲ್ಲರು ಭಾಗವಹಿಸುವ ಮೂಲಕ ಮುಂಬರುವ ಚುನಾವಣೆಗಳಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡೋಣ ಎಂದು ರಾಮಚಂದ್ರಪ್ಪ ತಿಳಿಸಿದರು.

ತಾಲೂಕು ಕುರುಬರ ಸಂಘ ಅಧ್ಯಕ್ಷ ಆರ್. ಉಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವನ್ನು ಅಸ್ತಿತ್ವಕ್ಕೆ ತರುವುದು ದೊಡ್ಡದಲ್ಲ. ಅದನ್ನು ಸಂಘಟನೆ ಮಾಡುವ ಜೊತೆಗೆ ಕಾಲ ಕಾಲಕ್ಕೆ ಲೆಕ್ಕಪತ್ರಗಳನ್ನು ಮಂಡಿಸಿ, ಸದಾ ಚಟುವಟಿಕೆಗಳಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮದಲ್ಲಿ ಕನಕ ರಾಯಣ್ಣ ಬಳಗ ಆರಂಭವಾಗಿರುವುದು ಗ್ರಾಮದ ಅಭಿವೃದ್ದಿಯ ಸಂಕೇತವಾಗಿದೆ. ಸಂಘದ ಸದಸ್ಯರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೋಗುವ ಜೊತೆಗೆ ಸರ್ಕಾರ ಸವಲತ್ತುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಈಗಾಗಲೇ ಗ್ರಾಮದಲ್ಲಿ ಕನಕ ಭವನ ನಿರ್ಮಾಣವಾಗಿದ್ದು, ಇನ್ನುಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಉದ್ಗಾಟನೆ ಗೆ ಅನುವು ಮಾಡಲು ಸ್ಥಳೀಯ ಶಾಸಕರಾದ ಸಿ. ಪುಟ್ಟರಂಗಶೆಟ್ಟರ ಗಮನ ಸೆಳೆಯುವುದಾಗಿ ಉಮೇಶ್ ತಿಳಿಸಿದರು. ಅಲ್ಲದೇ ವೇದಿಕೆಯಲ್ಲಿದ್ದ ಶಾಸಕರ ಪುತ್ರ ಕುಸುಮರಾಜ್ ಅವರಿಗೂ ಸಹ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಎಂ. ಈರಣ್ಣ, ಮಾಜಿ ಅಧ್ಯಕ್ಷ ಸುಬ್ರಮಣ್ಯ, ಬಿಇಓ ಡಿ. ಸೋಮಣ್ಣೇಗೌಡ, ಮುಖಂಡರಾದ ಮಲ್ಲೇದೇವರು, ಯಜಮಾನರಾದ ಎಂ.ಎನ್.ಮಹದೇವ್, ಸಂಪತ್ತುಕುಮಾರ್, ಶಿವಪುರ ಗ್ರಾ.ಪಂ. ಪಿಡಿಓ ರವಿ, ಕಾರ್ಯದರ್ಶಿ ಮಂಜುನಾಥ್, ಗ್ರಾಮ ಆಡಳಿತಾಧಿಕಾರಿ ಆನಂದ್ದೂಳಪ್ಪ, ಶ್ರೀ ಕನಕ ರಾಯಣ್ಣ ಸಂಘದ ಅಧ್ಯಕ್ಷ ಎಂ.ಸಿ. ರಾಜು, ಉಪಾಧ್ಯಕ್ಷ ರಾಜೇಂದ್ರ, ಕಾರ್ಯದರ್ಶಿ ಮರಿಸ್ವಾಮಿ, ಸಹ ಕಾರ್ಯದರ್ಶಿ ರಮೇಶ್, ಖಜಾಂಚಿ ರಾಜೇಶ್, ಗ್ರಾ.ಪಂ. ಸದಸ್ಯರಾದ ಶಿವು, ಶಿವಣ್ಣ, ಎಂ.ಸಿ. ಮಹದೇವಮ್ಮ, ಶೋಭಾ ಶಿವಕುಮಾರ್, ಪದಾದಿಕಾರಿಗಳಾದ ಕುಂಡೇಗೌಡ, ರವಿ, ನಾಗಣ್ಣಗೌಡ, ಕರಿನಂಜನಪುರ ಸ್ವಾಮಿ, ಮಹೇಶ್ ಹಾಗೂ ಮಲ್ಲಯ್ಯನಪುರ ಗ್ರಾಮಸ್ಥರು ಉಪಸ್ಥಿತರಿದ್ದರು.