ಮಕ್ಕಳು ಉತ್ತಮ ಶಿಕ್ಷಣದ ಆಸಕ್ತಿ ಹೊಂದುವುದು ಅಗತ್ಯ

| Published : Nov 16 2024, 12:34 AM IST

ಸಾರಾಂಶ

It is important for children to be interested in a good education.

-ಬಾಲೇನಹಳ್ಳಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಬಿ.ಟಿ. ಶ್ರೀಧರ್‌

ಕನ್ನಡಪ್ರಭ ವಾರ್ತೆ ಹಿರಿಯೂರು

ಮಕ್ಕಳು ಉತ್ತಮ ಶಿಕ್ಷಣ ಪಡೆಯುವತ್ತ ಆಸಕ್ತಿ ಹೊಂದಬೇಕು ಎಂದು ಬಾಲೇನಹಳ್ಳಿ ಎಸ್‌ಡಿಎಂಸಿ ಅಧ್ಯಕ್ಷ ಬಿ.ಟಿ. ಶ್ರೀಧರ್ ಹೇಳಿದರು.

ತಾಲೂಕಿನ ಬಾಲೇನಹಳ್ಳಿ ಶಾಲೆಯಲ್ಲಿ ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ವತಿಯಿಂದ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಇಂದಿನ ಮಕ್ಕಳು ಸುಶಿಕ್ಷಿತರಾಗುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಎಂ.ಬಿ. ಲಿಂಗಪ್ಪ ಮಾತನಾಡಿ, ಪಂಡಿತ್ ಜವಾಹರ್ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಅತೀವ ಪ್ರೀತಿಯಿತ್ತು. ಆದ್ದರಿಂದ ಅವರ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಜೆ.ನಿಜಲಿಂಗಪ್ಪ, ಕೆ.ಮಂಜುನಾಥ್, ರುದ್ರಮ್ಮ, ಅಭಿಲಾಷ , ಭಾಗ್ಯಜ್ಯೋತಿ, ಅರುಣಾಕ್ಷಿ ಹಾಗೂ ಪೋಷಕರು ಹಾಜರಿದ್ದರು.

-----------------

ಹಿರಿಯೂರು ತಾಲೂಕಿನ ಬಾಲೇನಹಳ್ಳಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.