ಸಾರಾಂಶ
ರಾಣಿಬೆನ್ನೂರು: ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಓದಿನ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಸಹ ಮುಖ್ಯವಾಗಿದೆ ಎಂದು ನಗರಸಭೆ ಪೌರಾಯುಕ್ತ ಎಫ್.ಐ. ಇಂಗಳಗಿ ಹೇಳಿದರು.ತಾಲೂಕಿನ ಕಮದೋಡ ಗ್ರಾಮದ ರೇನ್‌ಬೋ ವಸತಿಯುತ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ೩ ದಿನಗಳ ವಾರ್ಷಿಕ ಇಂಟರ್ ಹೌಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಗಳು ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ಸಮಯ ಪಾಲನೆಯನ್ನು ಕಲಿಸುತ್ತೇವೆ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಎಲ್ಲಾ ರಂಗದಲ್ಲಿ ಸಾಧನೆ ಮಾಡಬೇಕಾದರೆ ಕ್ರೀಯಾಶಿಲತೆ ರೂಢಿಸಿಕೊಳ್ಳಬೇಕು ಆಗ ಮಾತ್ರ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು. ಪಿಎಸ್‌ಐ ಗದಿಗೆಪ್ಪ ಗುಂಜಟಗಿ, ವರ್ತಕರ ಸಂಘದ ಅಧ್ಯಕ್ಷ ಬಿ.ಎಸ್. ಪಟ್ಟಣಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಬಿ. ಗುರಿಕಾರ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಸುರೇಶ ಸಿ.ಟಿ., ಉಪಾಧ್ಯಕ್ಷ ಲಲಿತಾ ಸುರೇಶ್, ಪ್ರೊ.ಎಸ್.ಎನ್. ಕಟ್ಟೀಮನಿ, ಖಜಾಂಚಿ ನಾಗರಾಜ ಎಸ್.ಕೆ., ಕಾರ್ಯದರ್ಶಿ ಮಾಲತೇಶ ಐ.ಕೆ., ಆಡಳಿತ ಮಂಡಳಿಯ ಸದಸ್ಯರಾದ ವೀರಣ್ಣ ಸಿ.ಟಿ, ಶಾರದ ವೀರಣ್ಣ, ಬಸವರಾಜ್ ಎನ್.ಟಿ., ಶಾಂತಮ್ಮ ಕಟ್ಟೀಮನಿ, ರಾಘವೇಂದ್ರ ಐ.ಕೆ., ಶಿಲ್ಪಾ ಎಂ.ಕೆ., ಭುವನಾ ಬಿ., ಶ್ರೀಕಾರ, ಭಕ್ತಿ, ವರುಣ್, ಮುಸ್ತಫಾ ಸೇರಿದಂತೆ ಮತ್ತಿತರು ಇದ್ದರು.