ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ

| Published : Sep 04 2025, 02:00 AM IST

ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಪ್ರಭ ವಾರ್ತೆ ಮುಧೋಳ ಯುಕೆಪಿ ಯೋಜನೆಗೆ ಭೂಮಿ ನೀಡುವ ಎಲ್ಲ ರೈತರ ಹಿತ ಕಾಪಾಡುವುದು ಸರ್ಕಾರದ ಮೊದಲು ಆದ್ಯತೆಯಾಗಬೇಕು. ಯುಕೆಪಿ ಮೂರನೇ ಹಂತದ ಅನುಷ್ಠಾನಕ್ಕೆ ಕಾನ್ಸೆಂಟ್ ಅವಾರ್ಡ್ (ಒಪ್ಪಿಗೆ ಆಯಿ ತೀರ್ಪು ಬೆಲೆ) ರೀತಿ ಬೆಲೆ ನಿಗದಿ ಮಾಡಿದ ಮೇಲೆ ಯೋಜನೆ ಪೂರ್ಣಗೊಳ್ಳುವ ವಿಳಂಬದ ಅವಧಿಗೆ ಪ್ರತಿವರ್ಷ ಭೂಮಿಗೆ ಶೇ.10 ರಷ್ಟು ಬೆಲೆ ಹೆಚ್ಚಿಗೆ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಹನುಮಂತ ಆರ್. ನಿರಾಣಿ ಆಗ್ರಹಿಸಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ಯುಕೆಪಿ ಯೋಜನೆಗೆ ಭೂಮಿ ನೀಡುವ ಎಲ್ಲ ರೈತರ ಹಿತ ಕಾಪಾಡುವುದು ಸರ್ಕಾರದ ಮೊದಲು ಆದ್ಯತೆಯಾಗಬೇಕು. ಯುಕೆಪಿ ಮೂರನೇ ಹಂತದ ಅನುಷ್ಠಾನಕ್ಕೆ ಕಾನ್ಸೆಂಟ್ ಅವಾರ್ಡ್ (ಒಪ್ಪಿಗೆ ಆಯಿ ತೀರ್ಪು ಬೆಲೆ) ರೀತಿ ಬೆಲೆ ನಿಗದಿ ಮಾಡಿದ ಮೇಲೆ ಯೋಜನೆ ಪೂರ್ಣಗೊಳ್ಳುವ ವಿಳಂಬದ ಅವಧಿಗೆ ಪ್ರತಿವರ್ಷ ಭೂಮಿಗೆ ಶೇ.10 ರಷ್ಟು ಬೆಲೆ ಹೆಚ್ಚಿಗೆ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಹನುಮಂತ ಆರ್. ನಿರಾಣಿ ಆಗ್ರಹಿಸಿದರು.

ಉಪ-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಈ ಕುರಿತಾಗಿ ಅವರು ಮುಧೋಳದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಪ್ರತಿ ಎಕರೆಗೆ ₹50 ಲಕ್ಷ ಬೆಲೆ ನಿಗದಿ ಮಾಡಿ ಪರಿಹಾರ ನೀಡಬೇಕು. ಪುನರ್ವಸತಿ, ಕಾಲುವೆಗಳ ನಿರ್ಮಾಣ ಎಲ್ಲ ಸೇರಿ ಒಟ್ಟು ಅಂದಾಜು ₹92 ಸಾವಿರ ಕೋಟಿ ವೆಚ್ಚ ಬರುತ್ತದೆ. ಸರ್ಕಾರ ವಿಳಂಬ ಮಾಡದೆ ಈ ಯೋಜನೆ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.

ಯುಕೆಪಿಯ ಎಲ್ಲ ಪ್ರಕರಣಗಳು ಕಾನೂನು ಚೌಕಟ್ಟಿನಲ್ಲಿ ಇತ್ಯರ್ಥಗೊಂಡಿವೆ. ನ್ಯಾಯಾಲಯ ಸೂಕ್ತ ಬೆಲೆ ನಿಗದಿ ಮಾಡಿದೆ 2013ರ ಭೂಸ್ವಾಧೀನ ಕಾನೂನು ಬಹಳ ಸಮರ್ಪಕವಾಗಿದೆ. ನ್ಯಾಯಾಲಯ ನಿಗದಿ ಮಾಡಿದ ಬೆಲೆಗೆ ಸರ್ಕಾರ ಬದ್ಧವಾಗಿರಬೇಕು ಎಂದು ಹೇಳಿದರು.

ಮೂರನೇ ಹಂತದ ಕಾರ್ಯದಲ್ಲಿ ಬಾಗಲಕೋಟ, ವಿಜಯಪುರ ಜಿಲ್ಲೆಯ 20 ಹಳ್ಳಿಗಳು ಮುಳುಗಡೆಯಾಗಲಿವೆ. ಗ್ರಾಮದ ಜನರಿಗೆ ನೋಟಿಸ್ ಕೊಡಲಾಗಿದೆ. ಯೋಜನೆಯ ವಿಳಂಬ ಧೋರಣೆಯಿಂದ ಈ ಹಳ್ಳಿಗಳ ಜನರು ಬಹಳ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಗ್ರಾಮದ ಅಭಿವೃದ್ಧಿ ಹಾಗೂ ಕೃಷಿ ಅಭಿವೃದ್ಧಿ ಕೆಲಸಗಳು ನಿಂತಲ್ಲಿಯೇ ನಿಂತುಬಿಟ್ಟಿವೆ. ಈ ಗ್ರಾಮಗಳಲ್ಲಿ ಮಂಕು ಕವಿದ ವಾತಾವರಣ ಇದೆ. ಇದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರ ಪ್ರತಿ ವರ್ಷ ₹20 ಸಾವಿರ ಕೋಟಿ ಬಿಡುಗಡೆ ಮಾಡಿದರೆ ಐದು ವರ್ಷಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.