ಕನಕಪುರ: ಜಗತ್ತಿಗೆ ಅನ್ನ ಕೊಡುವುದು ರೈತನಾದರೆ, ಮಾನ ಮುಚ್ಚಲು ಬಟ್ಟೆ ಕೊಡುವವರು ನೇಕಾರರು ಎಂದು ನಗರದ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಬ್ಬಾಳೇಗೌಡ ತಿಳಿಸಿದರು

ಕನಕಪುರ: ಜಗತ್ತಿಗೆ ಅನ್ನ ಕೊಡುವುದು ರೈತನಾದರೆ, ಮಾನ ಮುಚ್ಚಲು ಬಟ್ಟೆ ಕೊಡುವವರು ನೇಕಾರರು ಎಂದು ನಗರದ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಬ್ಬಾಳೇಗೌಡ ತಿಳಿಸಿದರು.

ನಗರದಲ್ಲಿ ಕನ್ನಡಾಂಬೆ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ನೇಕಾರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಂದು ನೇಕಾರರ ಬದುಕು ದುಸ್ತರವಾಗಿದ್ದು ಹಿಂದಿನಂತೆ ಕೈಮಗ್ಗಗಳು ನಡೆಯುತ್ತಿಲ್ಲ. ಆಧುನಿಕ ತಂತ್ರ ಜ್ಞಾನಗಳ ಅಳವಡಿಕೆಯಿಂದ ನೇಕಾರರ ಜೀವನ ಸವಾಲಾಗಿದ್ದು, ನೇಕಾರರು ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಬ್ಬಾಳೇಗೌಡರಿಗೆ ನೇಕಾರ ಅಭಿವೃದ್ಧಿ ರತ್ನ ಪ್ರಶಸ್ತಿ ಹಾಗೂ ಐವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 10 ಹಿರಿಯ ನೇಯ್ಗೆ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಪೂರ್ಣಚಂದ್ರ ಹಾಗೂ ಕೆ.ಎನ್.ಶಂಕರ್‌ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ ಅಸ್ಘರ್‌ಖಾನ್‌, ಡಿ.ಮನೋಹರ್, ಸಹಾಯಕ ಉಪ ಆರಕ್ಷಕ ನಿರೀಕ್ಷಕ ಕಾಕೋಡು ಶೈಲೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಮಾಜಿ ಅಧ್ಯಕ್ಷ ಚಿಕ್ಕಕೆಂಪೇಗೌಡ, ಸಾಹಿತಿ ಕೂ. ಗಿ. ಗಿರಿಯಪ್ಪ, ರಾಜ್ಯ ಒಕ್ಕಲಿಗರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಗಬ್ಬಾಡಿ ಕಾಡೇಗೌಡ, ಸ್ವತಂತ್ರ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಎನ್. ಭಾಸ್ಕರ್, ಜಿಹೇಶ್ವರ ನೇಕಾರರ ಸಂಘದ ಕಾರ್ಯದರ್ಶಿ ಕೆ.ಎಂ.ಶಂಕರ್, ದೊಡ್ಡಿಯ ಸಿ.ರಜನೀಶ್ ಹಾಗೂ ನಿರ್ದೇಶಕ ಪರಮೇಶ್‌ ಇತರರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:

ಕನಕಪುರದಲ್ಲಿ ಕನ್ನಡಾಂಬೆ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ನೇಕಾರ ದಿನಾಚರಣೆ ಕಾರ್ಯಕ್ರಮದಲ್ಲಿ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಬ್ಬಾಳೇಗೌಡರಿಗೆ ನೇಕಾರ ಅಭಿವೃದ್ಧಿ ರತ್ನ ಪ್ರಶಸ್ತಿ ನೀಡಿ ಗೌರವಸಲಾಯಿತು.