ಯುವಪೀಳಿಗೆಗೆ ನಾಡಿನ ಇತಿಹಾಸದ ಅರಿವು ಅಗತ್ಯ

| Published : Nov 02 2024, 01:29 AM IST / Updated: Nov 02 2024, 01:30 AM IST

ಸಾರಾಂಶ

ಕನ್ನಡ ರಾಜ್ಯೋತ್ಸವವು ಅತ್ಯಂತ ವಿಶೇಷವಾದ ಸಂದರ್ಭವಾಗಿದ್ದು, ರಾಜ್ಯೋತ್ಸವ ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯ ಗುರುತಿಸುತ್ತದೆ, ರಾಜ್ಯವು ಮಹಾನ್ ವ್ಯಕ್ತಿಗಳನ್ನು ಪಡೆದಿದ್ದು ಅವರ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿ ಮತ್ತು ನವೀನತೆಗೆ ಶಕ್ತಿ ತುಂಬುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ತಾಲೂಕು ಎರಡು ರಾಜ್ಯಗಳ ಗಡಿಭಾಗವಾಗಿದ್ದು, ತಾಲೂಕಿನ ಕನ್ನಡ ಪರ ಸಂಘಟನೆಗಳನ್ನು ಕನ್ನಡ ಸಂಘದ ಅಧ್ಯಕ್ಷರು ಒಟ್ಟುಗೂಡಿಸಿಕೊಂಡು ತಾಲೂಕಿನಲ್ಲಿ ಕನ್ನಡ ರಾಜ್ಯತ್ಸೋವದ ಕಾರ್‍ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಲಿದೆ ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು.ಕೆಜಿಎಫ್ ತಾಲೂಕು ಆಡಳಿತ ಹಾಗೂ ಕನ್ನಡ ಸಂಘದಿಂದ ೬೯ನೇ ವರ್ಷದ ಕನ್ನಡ ರಾಜ್ಯತ್ಸೋವ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ, ನ.೧ರಂದು ಎಲ್ಲೆಡೆ ಕನ್ನಡ ರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಯುವಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಕನ್ನಡ ಕಂಪು ಪಸರಿಸಲಿ

ರಾಜ್ಯ ಏಕೀಕರಣವಾಗಿದ್ದು ನ.೧,೧೯೭೩ ರಂದು, ಕರ್ನಾಟಕ ರಾಜ್ಯವೆಂದು ಮರು ನಾಮಕರಣಗೊಂಡು ೫೦ ವರ್ಷ ಪೂರ್ಣಗೊಂಡಿರುವ ಸುದಿನದಂದು ನ.೧, ೪೯ ವರ್ಷಗಳಿಂದ ಸತತ ಕನ್ನಡದ ಕಾರ್‍ಯಕ್ರಮ ಆಯೋಜನೆ ಮಾಡಿಕೊಂಡು ಬರುತ್ತಿದ್ದು, ಈ ಬಾರಿಯೂ ನಮ್ಮ ಕನ್ನಡದ ಉತ್ಸವ ಅರ್ಥಪೂರ್ಣವಾಗಿ ಗಡಿನಾಡು ಭಾಗದ ಕೆಜಿಎಫ್ ತಾಲೂಕಿನಲ್ಲಿ ಆಚರಿಸುವುದರ ಮೂಲಕ ಕನ್ನಡದ ಕಂಪನ್ನು ಎಲ್ಲಡೆ ಪಸರಿಸಲು ತಾಲೂಕಿನ ಜನತೆಗೆ ಮನವಿ ಮಾಡಿದರು.

ಕನ್ನಡ ಭವನ ಕಟ್ಟಲು ಅನುದಾನ

ನ.೧ ದಿನಕ್ಕೆ ಮಾತ್ರ ಕನ್ನಡ ಕಾರ್‍ಯಕ್ರಮ ಸೀಮಿತವಾಗವಾರದು, ವರ್ಷ ಪೂರ್ತಿ ಕನ್ನಡ ಸಂಘದಲ್ಲಿ ಕಾರ್‍ಯಕ್ರಮಗಳು ನಡೆಯುವಂತಾಗಬೇಕು, ಕನ್ನಡ ಸಂಘದ ಕಟ್ಟಡಕ್ಕೆ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ೨೫ ಲಕ್ಷ ರೂ.ಗಳನ್ನು ನೀಡಿದ್ದು, ಕಟ್ಟಡ ಪ್ರಾರಂಭಸಿದ ನಂತರ ಕನ್ನಡ ಸಂಘಕ್ಕೆ ಅಗತ್ಯವಿರುವ ಅನುದಾನ ನೀಡಲಾಗುವುದೆಂದು ತಿಳಿಸಿದರು.ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ

ಕೆಜಿಎಫ್ ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು ಧ್ವಜಾರೋಹಣ ನೇರವೇರಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವವು ಅತ್ಯಂತ ವಿಶೇಷವಾದ ಸಂದರ್ಭವಾಗಿದ್ದು, ರಾಜ್ಯೋತ್ಸವ ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯ ಗುರುತಿಸುತ್ತದೆ, ರಾಜ್ಯವು ಮಹಾನ್ ವ್ಯಕ್ತಿಗಳನ್ನು ಪಡೆದಿದ್ದು ಅವರ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿ ಮತ್ತು ನವೀನತೆಗೆ ಶಕ್ತಿ ತುಂಬುತ್ತಿದ್ದಾರೆ ಎಂದರು.ಕನ್ನಡ ಸಂಘದ ಅಧ್ಯಕ್ಷರಾದ ಪ್ರಸನ್ನರೆಡ್ಡಿ, ತಹಸೀಲ್ದಾರ್ ನಾಗವೇಣಿ, ಪೌರಾಯುಕ್ತ ಪವನ್‌ಕುಮಾರ್, ಬಿಇಒ ಮುನಿವೆಂಕಟರಾಮಚಾರಿ, ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಸುರೇಶ್‌ಕುಮಾರ್, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಧರ್ಮೇಂದ್ರ, ಡಿವೈಎಸ್ಪಿ ಪಾಂಡುರಂಗ, ಇ.ಒ ಮಂಜುನಾಥ್ ಹರ್ತಿ, ಸಿಡಿಪಿಒ ರಾಜೇಶ್, ಕವಿಯಂತ್ರಿ ರಾಧಪ್ರಕಾಶ್, ಎಇಇ ರಾಜಶೇಖರ್‌ಬಾಬು, ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಸದಸ್ಯ ಮಾಣಿಕ್ಯಂ, ಕೆಜಿಎಫ್ ತಾಲೂಕಿನ ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಅ.ಮು.ಲಕ್ಷ್ಮಿನಾರಾಯಣ್, ವಕೀಲರಾದ ಪದ್ಮನಾಭರೆಡ್ಡಿ, ವೆಂಕಟರಾಮಯ್ಯ ಇದ್ದರು.