ಸಾರಾಂಶ
ಆನಂದಪುರ: ಕೆಳದಿ ಅರಸರ ಕಾಲದಲ್ಲಿ ನಿರ್ಮಿತಗೊಂಡ ದೇವಾಲಯಗಳು, ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಕಾರ್ಯವಾದಾಗ ಮಾತ್ರ ಕೆಳದಿ ಅರಸರ ಗತವೈಭವ ಮತ್ತೆ ಮರುಕಳಿಸಲು ಸಾಧ್ಯ ಎಂದು ಮುರುಘಾ ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿ ಹೇಳಿದರು.

ಸಮೀಪದ ಮಹಂತಿನ ಮಠದ ಚಂಪಕ ಸರಸು ಕೊಳದಲ್ಲಿ, ಮಹಂತಿನ ಮಠ ಚಂಪಕ ಸರಸು ಅಭಿವೃದ್ಧಿ ಟ್ರಸ್ಟ್ ನಿಂದ ಆಯೋಜಿಸಲಾಗಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೆಳದಿ ಅರಸರ ಕಾಲದ ಆಡಳಿತ ಪ್ರದೇಶ ತುಂಬಾ ವಿಶಾಲವಾಗಿದ್ದು, ಆಡಳಿತದ ಅವಧಿಯಲ್ಲಿ ದೇವಸ್ಥಾನ, ಕೋಟೆ, ಪುಷ್ಕರಣಿಗಳು, ಸ್ಮಾರಕಗಳು, ನಿರ್ಮಾಣಗಳಗಿದ್ದು, ಇವುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಳ ಕಾರ್ಯ ನಮ್ಮೆಲ್ಲರದಾಗಿದೆ ಎಂದರು.ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇತಿಹಾಸದ ಕುರುಹುಗಳನ್ನು ನೀಡುವಂತಹ ಸ್ಥಳಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಮುಂದಾಗಬೇಕಾಗಿದೆ. ಇಂತಹ ಸ್ಥಳಗಳ ಅಭಿವೃದ್ಧಿಗೆ ದಾನಿಗಳು ಹೆಚ್ಚಿನ ರೀತಿಯಲ್ಲಿ ಸಹಕರಿಸಿದರೆ ಅರಸರ ಕಾಲದ ಗತವೈಭವವನ್ನು ಮತ್ತೆ ಮರುಕಳಿಸುಲು ಸಾಧ್ಯ ಎಂದರು.
ಕೋಣಂದೂರು ಬ್ರಹ್ಮನ ಮಠದ ಶ್ರೀಪತಿ ಪಂಡಿತಾಚಾರ್ಯ ಶಿವಾಚಾರ್ಯ ಸ್ವಾಮಿ ಮಾತನಾಡಿ, ಕಾರ್ತಿಕ ಮಾಸದ ಈ ಬೆಳಕು ಮನುಷ್ಯನಲ್ಲಿರುವ ಅಂಧಕಾರವನ್ನು ಹೋಗಲಾಡಿಸಿ, ಪ್ರತಿಯೊಬ್ಬರ ಜೀವನದಲ್ಲೂ ಬೆಳಕು ಪ್ರಜ್ವಲಿಸಲಿ ಎಂದರು.ಗುತ್ತಲ ಮಠದ ಪ್ರಭುಸ್ವಾಮಿ ಉಪಸ್ಥಿತರಿದ್ದರು.
ಮಹಂತಿ ಮಠದ ಪಂಪಕ ಸರಸು ಅಭಿವೃದ್ಧಿ ಟ್ರಸ್ಟ್ ನ ಕಾರ್ಯದರ್ಶಿ ಕೆ.ಆರ್.ರಾಜು, ಖಜಾಂಚಿ ಟಾಕಪ್ಪ, ಸದಸ್ಯರಾದ ರಾಜೇಂದ್ರ ಗೌಡ, ಎನ್.ಉಮೇಶ್, ಗಜೇಂದ್ರ ಯಾದವ್, ಅಶ್ವಿನ್, ಭದ್ರಪ್ಪ ಗೌಡ್ರು, ದಾನಿಗಳಾದ ನಿಜಲಿಂಗಪ್ಪ, ಶಿವಮೂರ್ತಿ, ಕಾಳಿಂಗ, ಮುರುಗೇಶಪ್ಪ ಗೌಡ್ರು, ಪುಟ್ಟಸ್ವಾಮಿ ಮತ್ತಿತರರಿದ್ದರು.