ದೇಶದ ಅನ್ನದಾತರಾಗಿರುವ ರೈತರು ಮತ್ತು ದೇಶವನ್ನು ಸುರಕ್ಷಿತವಾಗಿಡಲು, ಗಡಿಯಲ್ಲಿ ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು ಕಾಯುತ್ತಿರುವ ವೀರ ಯೋದರ ಹಿತರಕ್ಷಣೆ ಅತಿ ಮುಖ್ಯವಾಗಿದೆ ಎಂದು ಮಹೀಂದ್ರ ಟ್ರ್ಯಾಕ್ಟರ್ಸ್ ಕಂಪನಿಯ ಮಹಾಲಿಂಗ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ದೇಶದ ಅನ್ನದಾತರಾಗಿರುವ ರೈತರು ಮತ್ತು ದೇಶವನ್ನು ಸುರಕ್ಷಿತವಾಗಿಡಲು, ಗಡಿಯಲ್ಲಿ ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು ಕಾಯುತ್ತಿರುವ ವೀರ ಯೋದರ ಹಿತರಕ್ಷಣೆ ಅತಿ ಮುಖ್ಯವಾಗಿದೆ ಎಂದು ಮಹೀಂದ್ರ ಟ್ರ್ಯಾಕ್ಟರ್ಸ್ ಕಂಪನಿಯ ಮಹಾಲಿಂಗ್ ಹೇಳಿದರು.

ನಗರದ ಈಶ್ವರಿ ಟ್ರ್ಯಾಕ್ಟರ್ ಶೋರೂಂನಲ್ಲಿ ಹಮ್ಮಿಕೊಂಡಿದ್ದ ಮಹೀಂದ್ರಾ ಟ್ರ್ಯಾಕ್ಟರ್ಸ್, ಗಣರಾಜ್ಯೋತ್ಸವವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲು ಹೊರ ತಂದಿರುವ ತ್ರಿವರ್ಣ ಆಧಾರಿತ ಸೀಮಿತ ಆವೃತ್ತಿಯ ಟ್ರ್ಯಾಕ್ಟರ್‌ಗಳ ಬಿಡುಗಡೆ ಹಾಗೂ ನಿವೃತ್ತ ಸೈನಿಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಆವರು ಮಾತನಾಡಿದರು.ಭಾರತದ ಪ್ರಗತಿಯ ಬೆನ್ನೆಲುಬಾಗಿರುವ ರೈತರಿಗೆ ಗೌರವ ಸಲ್ಲಿಸುವ ಸಲುವಾಗಿ, ಕಂಪನಿಯು ವಿಶೇಷ ತ್ರಿವರ್ಣ ಆಧಾರಿತ ಸೀಮಿತ ಆವೃತ್ತಿಯ ಟ್ರ್ಯಾಕ್ಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ರಕ್ಷಣಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿದೆ ಎಂದರು.

ರಾಷ್ಟ್ರಧ್ವಜದ ಬಣ್ಣಗಳಿಂದ ಸ್ಫೂರ್ತಿ ಪಡೆದು ಮೂರು ಆಕರ್ಷಕ ಬಣ್ಣಗಳಲ್ಲಿ ದೇಶದ ಏಳಿಗೆಗೆ ರೈತರು ನೀಡುತ್ತಿರುವ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಈ ವಿನ್ಯಾಸವನ್ನು ರೂಪಿಸಲಾಗಿದೆ. ಈ ತ್ರಿವರ್ಣ ಆಧಾರಿತ ಟ್ರ್ಯಾಕ್ಟರ್‌ಗಳು ನಮ್ಮ ರಾಷ್ಟ್ರೀಯ ಹೆಮ್ಮೆ ಮತ್ತು ಪ್ರಗತಿಯ ಸಂಕೇತವಾಗಿವೆ. ರೈತರನ್ನು ಸಬಲೀಕರಣಗೊಳಿಸುವ ನಮ್ಮ ಬದ್ಧತೆಗೆ ಇದು ಸಾಕ್ಷಿಯಾಗಿದೆ ಎಂದರು.

ಮಹೀಂದ್ರಾ ಕಂಪನಿಯು ದೇಶಪ್ರೇಮ ಮತ್ತು ಕಾರ್ಯಕ್ಷಮತೆಯನ್ನು ಒಂದೇ ವೇದಿಕೆಯಲ್ಲಿ ರೈತರಿಗೆ ಉಡುಗೊರೆಯಾಗಿ ನೀಡಿದ್ದು ಒಂದೇ ಟ್ರಾಕ್ಟರ್‌ನಲ್ಲಿ ೪೨ ಕೆಲಸಗಳನ್ನು ಮಾಡಬಹುದಾದ ದೇಶದ ಹೆಮ್ಮೆಯ ಕಂಪನಿಯಾಗಿದ್ದು ಇದಕ್ಕೆ ರೈತರ ಪ್ರೋತ್ಸಾಹವೇ ಕಾರಣವಾಗಿದೆ ಎಂದರು.

ನಿವೃತ್ತ ವೀರ ಯೋದರಾದ ರವೀಂದ್ರಕುಮಾರ್ ಜೆಟ್ಟಿ, ಬಿ.ಸುರೇಶ್, ವೃಷಬೇಂದ್ರಸ್ವಾಮಿ, ರೈತ ಮುಖಂಡ ಸುರೇಶಣ್ಣ ಹಾಗೂ ಪರಿಸರ ಪ್ರೇಮಿ, ಸಾಲುಮರದ ವೆಂಕಟೇಶ್ ಅವರುನ್ನು ಗೌರವಿಸಿ ಸನ್ಮಾನಿಸಲಾಯಿತು.

ರವೀಂದ್ರಕುಮಾರ್ ಮಾತನಾಡಿ, ದೇಶದ ಜನರಿಗಾಗಿ ರಕ್ಷಣೆಗಾಗಿ ನಮ್ಮಂತಹ ಯೋದರಿಗೆ ದಿನದ ೨೪ ಗಂಟೆಯಲ್ಲು ದುಡಿದು ಅನ್ನ ನೀಡುತ್ತಿರುವ ರೈತರ ಹಿತ ಅತಿ ಮುಖ್ಯವಾಗಿದೆ ಎಂದರು.

ಪರಿಸರ ಪ್ರೇಮಿ ವೆಂಕಟೇಶ್ ಮಾತನಾಡಿ, ನಮ್ಮ ದೇಶದ ಹೆಮ್ಮೆಯ ಕಂಪನಿಯಾದ ಮಹೀಂದ್ರ ಮತ್ತು ಮಹೀಂದ್ರ ದೇಶದ ರೈತರು ಮತ್ತು ದೇಶದ ರಕ್ಷಣಾ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ನೀಡುತ್ತಿದ್ದು ೭೭ನೇ ಗಣರಾಜ್ಯೋತ್ಸವದ ಅಂಗವಾಗಿ ತ್ರಿವರ್ಣ ಆಧಾರಿತ ಸೀಮಿತ ಆವೃತ್ತಿಯ ಟ್ರ್ಯಾಕ್ಟರ್‌ಗಳ ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ನಿವೃತ್ತ ಸೈನಿಕರಾದ ಬಿ.ಸುರೇಶ್, ವೃಷಬೇಂದ್ರಸ್ವಾಮಿ ರೈತ ಮುಖಂಡರಾದ ಸುರೇಶಣ್ಣ ಮಾತನಾಡಿದರು, ಈಶ್ವರಿ ಟ್ರ್ಯಾಕ್ಟರ್ ಷೋ ರೂಂ ಮಾಲೀಕರಾದ ಅಶೋಕ್ ಪ್ರಾಸ್ತಾವಿಸಿದರು, ಹೇಮಂತಕುಮಾರ್ ನಿರೂಪಿಸಿದರು, ಮಾಲೀಕರಾದ ಎನ್, ಜಿ, ಪ್ರಶಾಂತ್ ಉಪಸ್ಥಿತರಿದ್ದರು