ಆಧುನಿಕ ತಂತ್ರಜ್ಞಾನದಲ್ಲಿ ದೇವರ ಮೊರೆ ಹೋಗುವ ಅವಶ್ಯ

| Published : Dec 23 2024, 01:05 AM IST

ಸಾರಾಂಶ

ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ಕುಂಭಮೇಳ, ಡೋಳ್ಳ ಕುಣಿತ, ಕರಡಿ ಮಜಲು, ಭಜನಾ ತಂಡಗಳ ಮೂಲಕ ಭವ್ಯ ಮೆರವಣಿಗೆ

ನರಗುಂದ: ಮನುಷ್ಯ ಆಧುನಿಕವಾಗಿ ಸಾಕಷ್ಟು ಮುಂದುವರೆದಿದ್ದರೂ ದೇವರ ಮೊರೆ ಹೋಗುವುದು ಬಹಳ ಅವಶ್ಯ ಎಂದು ನರಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರವೀಣ ಯಾವಗಲ್‌ ಹೇಳಿದರು.

ಅವರು ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ನಡೆದ ಮಹಾಪೂಜೆ ಕಾರ್ಯಕ್ರಮ ಉದ್ಘಾಟಿಸಿ ಆ ನಂತರ ಮಾತನಾಡಿ, ಆಧುನಿಕ ತಂತ್ರಜ್ಞಾನದಲ್ಲಿ ದೇವರ ಮರೆತು ಹೋಗುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ನಮ್ಮೆಲ್ಲರ ಭಕ್ತಿಯ ಕಡೆಗೆ ಹೋಗುವಂತೆ ಮಾಡುತ್ತದೆ ಎಂದು ಹೇಳಿದರು.

ಬಿಜೆಪಿ ಯುವ ಮುಖಂಡ ಮಹೇಶಗೌಡ ಪಾಟೀಲ ಮಾತನಾಡಿ, ಧಾರ್ಮಿಕ ಮತ್ತು ಅಯ್ಯಪ್ಪ ಸ್ವಾಮಿಗಳು ಯಾವ ರೀತಿಯಲ್ಲಿ ತಮ್ಮ ಕಠಿಣ ವ್ರತ ಮಾಡ್ತೀರಿ ಅದನ್ನು ವರ್ಷ ಪೂರ್ತಿ ಪಾಲನೆ ಮಾಡಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ಕುಂಭಮೇಳ, ಡೋಳ್ಳ ಕುಣಿತ, ಕರಡಿ ಮಜಲು, ಭಜನಾ ತಂಡಗಳ ಮೂಲಕ ಭವ್ಯ ಮೆರವಣಿಗೆ ಮಾಡಲಾಯಿತು.

ಡಾ.ಮೋಹನ ಗುರುಸ್ವಾಮಿಗಳಿಗೆ ಮುತ್ತು ಗುರುಸ್ವಾಮಿಯಿಂದ ನಾಣ್ಯಗಳು ತುಲಾಭಾರ ಮಾಡಿದರು. 18ನೇ ವರ್ಷ ಶಬರಿಮಲೆ ಯಾತ್ರೆ ಮಾಡುವ ಕೊಟ್ರೇಶ್ ಗುರುಸ್ವಾಮಿಗಳಿಗೆ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಡಾ.ಮೋಹನ ಗುರುಸ್ವಾಮಿ, ಡಾ.ಶಿವಕುಮಾರ್ ಶಿವಾಚಾರ್ಯ ಶ್ರೀಗಳು, ಭೈರನಹಟ್ಟಿ ಶಾಂತಲಿಂಗ ಶ್ರೀಗಳು, ಡಾ. ಶಿವಾನಂದ ದೇವರು, ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು, ಅಯ್ಯಪ್ಪ ಮಾಲಾಧಾರಿಗಳು, ರಾಜುಗೌಡ ಕೆಂಚನಗೌಡ್ರ, ಟಿ.ಬಿ. ಶಿರಿಯಪ್ಪಗೌಡ್ರ, ರುದ್ರಗೌಡ ಪಾಟೀಲ, ಶೇಖರಗೌಡ ಸಾಳಿಗೌಡ್ರು, ಬಸವರಾಜ ಯಾಲಿಗಾರ, ಪ್ರಕಾಶಗೌಡ ತಿರುಕುನಗೌಡ್ರ, ಬಿ.ಬಿ. ಅರುಹುಣಸಿ, ನಿಂಗಪ್ಪ ಸೋಮಪುರ, ಸಂಗೀತ ಬಳಗ, ಸೇವಾ ಸಮಿತಿ ಅಧ್ಯಕ್ಷ ರಾಮನಗೌಡ ಸಾಳಿಗೌಡ್ರು, ಮುತ್ತು ಗುರುಸ್ವಾಮಿ, ಈರಣ್ಣ ಗುರುಸ್ವಾಮಿ, ಕೊಟ್ರೇಶ್ ಗುರುಸ್ವಾಮಿ, ಚೀಕೊಪ್ಪ ಗುರುಪಾದ ಗುರುಸ್ವಾಮಿ, ಕಲ್ಲಾಪುರದ ಮಲ್ಲಪ್ಪ ಗುರುಸ್ವಾಮಿ, ಆನಂದ ನರಗುಂದ, ಪ್ರೊ. ಆರ್.ಬಿ. ಚಿನವಾಳರ, ಗ್ರಾಮದ ಮುಖಂಡರು ಇದ್ದರು.