ಕಿಡಿಗೇಡಿಯನ್ನು ಬಂಧಿಸಿದರೆ ಸಾಲದು, ಕಠಿಣ ಶಿಕ್ಷೆಯಾಗಬೇಕು: ಎನ್.ರಾಜಶೇಖರ್

| Published : Dec 09 2024, 12:48 AM IST

ಕಿಡಿಗೇಡಿಯನ್ನು ಬಂಧಿಸಿದರೆ ಸಾಲದು, ಕಠಿಣ ಶಿಕ್ಷೆಯಾಗಬೇಕು: ಎನ್.ರಾಜಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೇ ಎಲ್ಲಾ ಧರ್ಮ, ಜಾತಿಯವರೆಗೂ ಅನ್ನ, ಆಶ್ರಯ, ಶಿಕ್ಷಣ ನೀಡಿದ್ದಾರೆ.

ದಾಬಸ್‍ಪೇಟೆ: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಇಡೀ ದೇಶವೇ ಆರಾಧಿಸುತ್ತದೆ, ಅವರ ಪುತ್ಥಳಿಗೆ ಹಾನಿ ಮಾಡಿದ ಕಿಡಿಗೇಡಿಯನ್ನು ಬಂಧಿಸಿದರೆ ಸಾಲದು, ಕಠಿಣ ಶಿಕ್ಷೆಯಾಗಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ನೆಲಮಂಗಲ ತಾಲೂಕು ಅಧ್ಯಕ್ಷ ಎನ್.ರಾಜಶೇಖರ್ ಆಗ್ರಹಿಸಿದರು. ಸ್ವಾಮೀಜಿ ಪುತ್ಥಳಿ ಹಾನಿಮಾಡಿದ ಕುರಿತು ಮಾತನಾಡಿದ ಅವರು, ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೇ ಎಲ್ಲಾ ಧರ್ಮ, ಜಾತಿಯವರೆಗೂ ಅನ್ನ, ಆಶ್ರಯ, ಶಿಕ್ಷಣ ನೀಡಿದ್ದಾರೆ. ಅಂತಹ ಪೂಜ್ಯರ ಪುತ್ಥಳಿಯನ್ನು ಅನ್ಯಧರ್ಮದ ಕಿಡಿಗೇಡಿಯೊಬ್ಬ ಹಾನಿ ಮಾಡಿರುವುದು ಹೇಯಕೃತ್ಯ, ಆತನಿಗೆ ನ್ಯಾಯಾಲಯ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಯಾರೂ ಸಹ ಆತನ ತಪ್ಪನ್ನು ಕ್ಷಮಿಸುವುದಿಲ್ಲ. ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಇಂತಹ ಹೀನ ಕೃತ್ಯವನ್ನು ಖಂಡಿಸುತ್ತದೆ ಎಂದರು.