ಪಂಚಮಸಾಲಿ ಶ್ರೀ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ

| Published : Nov 22 2023, 01:00 AM IST

ಪಂಚಮಸಾಲಿ ಶ್ರೀ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಯುವ ಸಮೂಹದ ಭವಿಷ್ಯವನ್ನು ಸುಭದ್ರವಾಗಿಸಲು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ನಡೆಸುತ್ತಿರುವ ಹೋರಾಟವನ್ನು ಅಸಮಂಜಸ ಎಂದಿರುವ ಮಾಜಿ ಶಾಸಕ ಕಳಕಪ್ಪ ಬಂಡಿ ಅವರಿಗೆ ಶ್ರೀಗಳ ಹೋರಾಟ ಬಗ್ಗೆ ಮಾತನಾಡಲು ಯಾವುದೇ ನೈತಿಕತೆಯಿಲ್ಲ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಕಿಡಿಕಾರಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಹೇಳಿಕೆ

ಗಜೇಂದ್ರಗಡ:ಸಮಾಜದ ಯುವ ಸಮೂಹದ ಭವಿಷ್ಯವನ್ನು ಸುಭದ್ರವಾಗಿಸಲು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ನಡೆಸುತ್ತಿರುವ ಹೋರಾಟವನ್ನು ಅಸಮಂಜಸ ಎಂದಿರುವ ಮಾಜಿ ಶಾಸಕ ಕಳಕಪ್ಪ ಬಂಡಿ ಅವರಿಗೆ ಶ್ರೀಗಳ ಹೋರಾಟ ಬಗ್ಗೆ ಮಾತನಾಡಲು ಯಾವುದೇ ನೈತಿಕತೆಯಿಲ್ಲ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಕಿಡಿಕಾರಿದರು.ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ಮಾತುಗಳನ್ನು ಪ್ರಸ್ತಾಪಿಸಿದ ಅವರು, ೨ಎ ಮೀಸಲಾತಿಗಾಗಿ ಸ್ವಾಮೀಜಿ ಪಾದಯಾತ್ರೆ, ಸತ್ಯಾಗ್ರಹ ಹಾಗೂ ಉಪವಾಸ ಸೇರಿ ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ಆದರೆ ಈ ಹೋರಾಟದಲ್ಲಿ ಎಂದೂ ಭಾಗವಹಿಸದ ಬಂಡಿ ಶ್ರೀಗಳ ಹೋರಾಟದ ಬಗ್ಗೆ ಅಪಸ್ವರ ಎತ್ತಿದ್ದು ಖಂಡನಾರ್ಹ ಎಂದರು.

ಮುಖಂಡ ಪ್ರಭು ಚವಡಿ ಮಾತನಾಡಿ, ಸಮಾಜದ ನ್ಯಾಯ ಸಮ್ಮತವಾಗಿರುವ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಬೇಡಿಕೆಯನ್ನು ಈಡೇರಿಸಬೇಕು ಎಂದು ಶ್ರೀಗಳು ನಡೆಸುತ್ತಿರುವ ಇಷ್ಟಲಿಂಗ ಪೂಜೆಯನ್ನು ಮಾಜಿ ಸಚಿವರು ಸಮಂಜಸವಲ್ಲ ಎಂಬ ಹೇಳಿಕೆ ಒಪ್ಪುವಂತಹದಲ್ಲ. ಕಳೆದ ಚುನಾವಣೆಯಲ್ಲಿನ ಸೋಲಿನಿಂದಾಗಿ ಅವರು ತಿದ್ದಿಕೊಂಡಿದ್ದಾರೆ ಎಂದುಕೊಂಡಿದ್ದೇವು. ನಮ್ಮ ಸಮಾಜವು ನಿಮ್ಮ ಹಿಂದೆ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ೫ರಿಂದ ೧೦ ಸಾವಿರ ಮತಗಳಿಂದ ಸೋಲುತ್ತಿದ್ದ ನೀವು ೨೫ ಸಾವಿರ ಮತಗಳಿಂದ ಸೋಲಲು ಯಾರ ಮತಗಳು ಬಂದಿಲ್ಲ ಎಂಬ ಕಾರಣವನ್ನು ಕಂಡುಕೊಳ್ಳಬೇಕು. ಸಮಾಜವನ್ನು ನೀವು ಅಪ್ಪಿಕೊಂಡರೆ, ಸಮಾಜ ನಿಮ್ಮನ್ನು ಅಪ್ಪಿಕೊಳ್ಳಲಿದೆ. ಸಮಾಜದ ವಿರುದ್ಧ ಮಾತನಾಡಿದರೆ ಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಸಮಾಜವು ನಿಮಗೆ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.

ಪುರಸಭೆ ಸದಸ್ಯ ಸುಭಾಸ ಮ್ಯಾಗೇರಿ, ಮುತ್ತಣ್ಣ ಮ್ಯಾಗೇರಿ, ಟಿ.ಎಸ್. ರಾಜೂರ, ವೀರೇಶ ಸಂಗಮದ ಸೇರಿ ಇತರರು ಇದ್ದರು.

.