ಸಾರಾಂಶ
ಹಾವೇರಿ: ಸೌಜನ್ಯ ಕೇಸ್ ವಿಚಾರವಾಗಿ ಎಸ್‌ಐಟಿ ತನಿಖೆಗೆ ಸರ್ಕಾರ ಆದೇಶ ಮಾಡಿದ ಮೇಲೆ ಯಾರೂ ಅಸಮ್ಮತಿ ಸೂಚಿಸಲು ಆಗಲ್ಲ. ತನಿಖೆ ಅನಿವಾರ್ಯತೆ ಇದ್ದಾಗ ತನಿಖೆ ಮಾಡಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ತನಿಖೆ ಅನಿವಾರ್ಯ. ಸಂಶಯಾಸ್ಪದವಾಗಿ ಆ ವಿಷಯ ಪ್ರಚಾರ, ಅಪಪ್ರಚಾರ ಪಡೆದ ಮೇಲೆ ಲಾಜಿಕಲ್ ಎಂಡ್‌ಗೆ ಹೋಗಲೇಬೇಕು. ನಿರ್ಣಯ ಆಗಲೇಬೇಕು. ಇತ್ತೀಚೆಗೆ ಕೆಲವರು ಈ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕ ವಲಯದಲ್ಲೂ ತನಿಖೆಗೆ ಕೂಗು ಬಂದ ಮೇಲೆ ತನಿಖೆ ಅನಿವಾರ್ಯವಾಗಿದೆ ಎಂದರು.ಕೇರಳ ಸರ್ಕಾರದಿಂದಲೂ ತನಿಖೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಸರ್ಕಾರ- ಸರ್ಕಾರಗಳ ನಡುವೆ ನಿರ್ಣಯ ಆಗುವ ವಿಚಾರ. ಇಂಟರ್ ಸ್ಟೇಟ್ ವಿಚಾರ ಇದ್ದಾಗ ಆ ಸರ್ಕಾರವೂ ತನಿಖೆ ಮಾಡಿಸಬಹುದು ಎಂದರು. ಹಾವೇರಿ ಜಿಲ್ಲೆಯಲ್ಲಿ ಯೂರಿಯಾ ಅಭಾವ ಕುರಿತು ಮಾತನಾಡಿದ ಅವರು, ಇಡೀ ರಾಜ್ಯಕ್ಕೆ 13 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಬೇಕು. ಯೂರಿಯಾ, ಡಿಎಪಿ ಗೊಬ್ಬರ ನೀಡುವುದು ಕೇಂದ್ರ ಸರ್ಕಾರದ ಕೆಲಸ. ಆದರೆ ಕೇಂದ್ರ ಸರ್ಕಾರ 4 ಲಕ್ಷ ಟನ್ ನೀಡಿದೆ ಎಂದರು. ಮೈಸೂರು ಭಾಗದಲ್ಲಿ ಸಾಧನಾ ಸಮಾವೇಶದ ಮೂಲಕ ಸಿಎಂ ಶಕ್ತಿ ಪ್ರದರ್ಶನ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಹಿಂದೆ ಇಂಡಿ ತಾಲೂಕಿನಲ್ಲೂ ಈ ರೀತಿ ಸಮಾವೇಶವಾಗಿಗಿತ್ತು. ಮೈಸೂರಿಗಿಂತ ಮೊದಲು ಇಂಡಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿಎಂ ಬಂದು ಹೋಗಿದ್ದಾರೆ. ವಿಪಕ್ಷದವರದು ಆರೋಪ ಮಾಡುವುದೇ ಕೆಲಸ. ಅದನ್ನೇ ಮಾಡುತ್ತಿದ್ದಾರೆ ಎಂದರು. ಬೀದಿಬದಿ ವ್ಯಾಪಾರಿಗಳಿಗೆ ಜಿಎಸ್‌ಟಿ ಹೊರೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಹೊರೆ ಆಗಿರುವುದನ್ನು ಒಪ್ಪುತ್ತೇನೆ. ಅಲ್ಲದೇ ನೋಟಿಸ್ ಕೊಡುವುದು ಸ್ವಾಭಾವಿಕ ಪ್ರಕ್ರಿಯೆ ಎಂದರು.ಕುನ್ನೂರಲ್ಲಿ ಮಹಿಳಾ ಸ್ವಹಾಯ ಸಂಘ ಉದ್ಘಾಟನೆ
ಶಿಗ್ಗಾಂವಿ: ಸ್ವ- ಸಹಾಯ ಸಂಘಗಳು ಮಹಿಳೆಯರ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸಿ ಆರ್ಥಿಕ ಸಬಲೀಕರಣ ಜತೆಗೆ ಮಹಿಳೆಯರು ಸಮಾಜದಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಲು ಮತ್ತು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವಂತೆ ಪ್ರೋತ್ಸಾಹಿಸುತ್ತವೆ ಎಂದು ಹಾವೇರಿ ಲಕ್ಕಿ ಆಕಾಡೆಮಿಯ ತರಬೇತುದಾರರಾದ ಗೀತಾ ಹಡಪದ ತಿಳಿಸಿದರು.ತಾಲೂಕಿನ ಕುನ್ನೂರ ಗ್ರಾಮದ ಹಡಪದ ಅಪ್ಪಣ್ಣ ಸಭಾಭವನದಲ್ಲಿ ಹಡಪದ ನೀಲಾಂಬಿಕೆ ಮಹಿಳಾ ಸ್ವ- ಸಹಾಯ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಒಟ್ಟಾಗಿ ಸೇರಿ ರಚಿಸಿಕೊಂಡಿರುವ ಒಂದು ಗುಂಪು. ಇದು ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದರು.ಸಾನ್ನಿಧ್ಯವನ್ನು ಸೋಮಯ್ಯನವರು ಹಿರೇಮಠ ವಹಿಸಿದ್ದರು. ತಾಲೂಕು ಹಡಪದ ಸಮಾಜದ ಅದ್ಯಕ್ಷ ಮಲ್ಲಿಕಾರ್ಜುನ ಹಡಪದ, ರುದ್ರಪ್ಪ ಹಡಪದ, ನಿಜಶರಣೆ ಹಡಪದ ನೀಲಾಂಬಿಕೆ ಮಹಿಳಾ ಸ್ವ- ಸಹಾಯ ಸಂಘದ ಅಧ್ಯಕ್ಷೆ ರುದ್ರವ್ವ ಹಡಪದ, ಉಪಾದ್ಯಕ್ಷ ನಿಂಗವ್ವ ಹಡಪದ, ಕಾರ್ಯದರ್ಶಿ ಮಂಜವ್ವ ಹಡಪದ, ಸದಸ್ಯರಾದ ತಿಪ್ಪವ್ವ ಹಡಪದ, ಶಾರವ್ವ ಹಡಪದ, ಬಸ್ಸವ್ವ ಹಡಪದ, ನಿಂಗವ್ವ ಹಡಪದ, ದ್ಯಾಮವ್ವ ಹಡಪದ, ಕಸ್ತೂರಿ ಹಡಪದ, ಶಶಿಕಲಾ ಹಡಪದ, ಮಂಜುಳಾ ಹಡಪದ, ಬಸವ್ವ ಹಡಪದ, ದೇವಕ್ಕ ಹಡಪದ, ಯಶೋದಾ ಹಡಪದ, ನಿಂಗವ್ವ ಹಡಪದ, ಲಕ್ಷ್ಮಿ ಹಡಪದ, ಸರಸ್ವತಿ ಹಡಪದ, ಸಾವಿತ್ರಿ ಹಡಪದ ಸೇರಿದಂತೆ ಸದಸ್ಯರು ಇದ್ದರು.