ಸರ್ಕಾರಿ ಕಚೇರಿಗೆ ಮಂಜೂರಾದ ನಿವೇಶನ ಬಗ್ಗೆ ಪ್ರಶ್ನೆ ಮಾಡೋದು ಸರಿಯಲ್ಲ

| Published : Mar 10 2025, 12:18 AM IST

ಸರ್ಕಾರಿ ಕಚೇರಿಗೆ ಮಂಜೂರಾದ ನಿವೇಶನ ಬಗ್ಗೆ ಪ್ರಶ್ನೆ ಮಾಡೋದು ಸರಿಯಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣ ವ್ಯಾಪ್ತಿಯ ಹುಲ್ಲೇಪುರ ಗ್ರಾಮದ 208 ಸಿಯಲ್ಲಿ ಬಾಲಕರ ವಿದ್ಯಾರ್ಥಿ ನಿಲಯ, ರೈತ ಸಂಪರ್ಕ ಕೇಂದ್ರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನಿವೇಶನ ಮಂಜೂರು ಮಾಡಿರುವುದನ್ನೇ ಪ್ರಶ್ನೆ ಮಾಡಲು ಆರ್ ಟಿ.ಐ ಕಾರ್ಯಕರ್ತ ಅಪ್ಪಾಜಿಗೆ ಯಾವ ನೈತಿಕತೆ ಇದೆ ಎಂದು ಛಲವಾದಿ ಮಹಾಸಭಾ ಅಧ್ಯಕ್ಷ ಬಸವರಾಜು ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣ ವ್ಯಾಪ್ತಿಯ ಹುಲ್ಲೇಪುರ ಗ್ರಾಮದ 208 ಸಿಯಲ್ಲಿ ಬಾಲಕರ ವಿದ್ಯಾರ್ಥಿ ನಿಲಯ, ರೈತ ಸಂಪರ್ಕ ಕೇಂದ್ರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನಿವೇಶನ ಮಂಜೂರು ಮಾಡಿರುವುದನ್ನೇ ಪ್ರಶ್ನೆ ಮಾಡಲು ಆರ್ ಟಿ.ಐ ಕಾರ್ಯಕರ್ತ ಅಪ್ಪಾಜಿಗೆ ಯಾವ ನೈತಿಕತೆ ಇದೆ ಎಂದು ಛಲವಾದಿ ಮಹಾಸಭಾ ಅಧ್ಯಕ್ಷ ಬಸವರಾಜು ವಾಗ್ದಾಳಿ ನಡೆಸಿದರು.

ಪಟ್ಟಣದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ವ್ಯಾಪ್ತಿಯ ಕಾಡಂಚಿನ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ನಿಲಯ, ದೇಶದ ಬೆನ್ನೆಲುಬು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೈತ ಸಂಪರ್ಕ ಕೇಂದ್ರ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದೇ ಕರೆಸಿಕೊಳ್ಳುವ ಪತ್ರಿಕಾ ರಂಗಕ್ಕೆ ನಿವೇಶನ ಮಂಜೂರು ಮಾಡಲಾಗಿದೆ. ಆದರೆ ಆರ್‌ಟಿಐ ಕಾರ್ಯಕರ್ತನೊಬ್ಬ ಸಂಘ ಸಂಸ್ಥೆಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಮಂಜೂರು ಮಾಡಿರುವ ನಿವೇಶನಗಳ ಬಗ್ಗೆ ಪ್ರಶ್ನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದರು. ಜಿಲ್ಲಾಧಿಕಾರಿ, ಗ್ರಾಮ ಆಡಳಿತ ಅಧಿಕಾರಿ, ಕಂದಾಯ ನಿರೀಕ್ಷಕ, ತಹಸೀಲ್ದಾರ್ ರವರ ವರದಿಯಂತೆ ಪ್ರತಿಯೊಂದು ದಾಖಲಾತಿಗಳನ್ನು ಪರಿಶೀಲನೆ ಮಾಡಿಯೇ ನಿವೇಶನಗಳನ್ನು ಮಂಜೂರು ಮಾಡಿದ್ದಾರೆ. ಆರ್‌ಟಿಐ ಕಾರ್ಯಕರ್ತ ಪತ್ರಕರ್ತರಿಗೆ ಇಷ್ಟು ಕಿರುಕುಳ ನೀಡುತ್ತಿದ್ದಾರೆ ಎಂದರೆ, ಇನ್ನೂ ಜನ ಸಾಮಾನ್ಯರಿಗೆ, ಸರ್ಕಾರಿ ಅಧಿಕಾರಿಗಳಿಗೆ ಎಷ್ಟು ಕಿರುಕುಳ ನೀಡಬಹುದು ಇಂತಹ ವ್ಯಕ್ತಿಗಳಿಗೆ ಸಂಬಂಧಪಟ್ಟ ಮಾಹಿತಿ ಹಕ್ಕು ಆಯೋಗ ಕಪ್ಪುಪಟ್ಟಿಗೆ ಸೇರಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ನಮ್ಮ ಸಂಘದ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಹನೂರು ತಾಲೂಕಿನ ಪತ್ರಕರ್ತರು ಸದಾ ನೊಂದವರು, ಕಷ್ಟದಲ್ಲಿರುವವರಿಗೆ ತಮ್ಮ ವರದಿಗಳ ಮೂಲಕ ನೆರವಾಗುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಸುಳ್ವಾಡಿ ವಿಷ ಪ್ರಕರಣದ ಘಟನೆಯ ಬಗ್ಗೆ ಸವಿವಾರವಾಗಿ ಸುದ್ದಿ ಪ್ರಕಟ ಮಾಡಿ ಮೃತನ ಕುಟುಂಬಸ್ಥರು ಹಾಗೂ ಭಾದಿತರಿಗೆ ಸರ್ಕಾರದಿಂದ ನೆರವು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸದೆ ಇರುವುದರಿಂದ ಇಂಡಿಗನತ್ತ ಗ್ರಾಮಸ್ಥರು ಮತ ಬಹಿಷ್ಕಾರ ಮಾಡಿದ್ದರು. ಇದರಿಂದ ಘರ್ಷಣೆಯಾಗಿ ನೂರಾರು ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಇದುವರೆಗೂ ಆಡಳಿತ ಮಾಡಿದ ಸರ್ಕಾರಗಳು ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಿದ್ದಾರೆ ಮತದಾನವನ್ನೇ ಬಹಿಷ್ಕಾರ ಮಾಡುತ್ತಿರಲಿಲ್ಲ .ಈ ಬಗ್ಗೆ ಪತ್ರಿಕಾ ಮಾಧ್ಯಮದವರು ಕಾಡಂಚಿನ ಗ್ರಾಮಗಳ ಸಮಗ್ರ ಮಾಹಿತಿಯನ್ನು ವರದಿ ಮಾಡುವುದರ ಮೂಲಕ ಸರ್ಕಾರದ ಕಣ್ಣು ತೆರೆಸಿದ್ದಾರೆ. ಇಂತಹ ಪತ್ರಕರ್ತರಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಮುಂದಿನ ದಿನಗಳಲ್ಲಿ ಆರ್‌ಟಿಎ ಕಾರ್ಯಕರ್ತ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳದಿದ್ದರೆ ನಮ್ಮ ಛಲವಾದಿ ಮಹಾಸಭಾ ವತಿಯಿಂದ ಪತ್ರಕರ್ತರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಒಂದೊಮ್ಮೆ ಹೋರಾಟದ ಅವಶ್ಯಕತೆ ಇದ್ದರೆ ನಾವು ಅದಕ್ಕೂ ಸಿದ್ಧರಾಗಿದ್ದೇವೆ ಎಂದರು.ಸಭೆಯಲ್ಲಿ ಛಲವಾದಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶ್ರೀಕಂಠ ಮೂರ್ತಿ ನಿರ್ದೇಶಕ ನಿಂಗರಾಜು ಸದಸ್ಯರಾದ ಪ್ರಭುಸ್ವಾಮಿ, ಬಸವಲಿಂಗಯ್ಯ ಮೇಘರಾಜು, ಅಂಕರಾಜು ಹಾಜರಿದ್ದರು.