ವಿಕಲಚೇತನರಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ

| Published : Aug 12 2025, 12:30 AM IST

ಸಾರಾಂಶ

ವಿಕಲಚೇತನರಿಗೆ ಪ್ರೀತಿ ತೋರುವುದು, ಸಹಾಯ ಮಾಡುವುದು ನಮ್ಮ ಕರ್ತವ್ಯ. ಅವರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ನಿವೃತ್ತ ಜಿಲ್ಲಾಧಿಕಾರಿ, ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುವಿಕಲಚೇತನರಿಗೆ ಪ್ರೀತಿ ತೋರುವುದು, ಸಹಾಯ ಮಾಡುವುದು ನಮ್ಮ ಕರ್ತವ್ಯ. ಅವರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ನಿವೃತ್ತ ಜಿಲ್ಲಾಧಿಕಾರಿ, ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.ಸೋಮವಾರ ನಗರದ ಗಾಂಧಿನಗರದ ಮಾನಸ ಭಿನ್ನ ಸಾಮರ್ಥ್ಯ ಮಕ್ಕಳ ಶಾಲೆಯಲ್ಲಿ ಮಕ್ಕಳೊಂದಿಗೆ ತಮ್ಮ ಪತ್ನಿ ಸರ್ವಮಂಗಳ ಅವರೊಂದಿಗೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ಡಾ.ಸಿ.ಸೋಮಶೇಖರ್, ಹಲವು ವರ್ಷಗಳಿಂದ ತಾವು ಈ ಮಕ್ಕಳೊಂದಿಗೆ ತಮ್ಮ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದು, ಇದು ಯಾವುದೇ ತೋರ್ಪಡಿಕೆ ಉದ್ದೇಶದಿಂದಲ್ಲ, ಈ ಮಕ್ಕಳಿಗೆ ಇನ್ನೇನು ಕೊಡಬೇಕು ಎಂದು ಅವಲೋಕನ ಮಾಡಿಕೊಳ್ಳುವ ಉದ್ದೇಶದಿಂದ ಬರುತ್ತೇನೆ. ಈ ಮಕ್ಕಳ ಸಂಭ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.ಹಲವಾರು ವರ್ಷಗಳಿಂದ ಕೆಲವು ಮಕ್ಕಳು ಮಾನಸ ಭಿನ್ನ ಸಾಮರ್ಥ್ಯ ಶಾಲೆಯಲ್ಲಿದ್ದಾರೆ. ಅವರು ಬೆಳೆದಂತೆ ನಾವು ಅವರಿಗೆ ಪೂರಕ ಅನುಕೂಲಗಳನ್ನು ಮಾಡಿಕೊಡಬೇಕು. ಈ ಶಾಲೆಗೆ ಸ್ವಂತಜಾಗ, ಕಟ್ಟಡವಿಲ್ಲ. ಸ್ವಂತ ಕಟ್ಟಡ ಹೊಂದುವುದು ಸಂಸ್ಥೆಯ ಮೊದಲ ಆದ್ಯತೆ ಆಗಬೇಕು.ಸಂಸ್ಥೆಯ ಆಡಳಿತ ಮಂಡಳಿಯವರು ನಗರದಲ್ಲಿ ಸ್ಥಳ ಗುರುತಿಸಿದರೆ ಅದನ್ನು ಸರ್ಕಾರದಿಂದ ಪಡೆಯುವುದೋ ಇಲ್ಲವೇ ಖರೀದಿ ಮಾಡಲೋ ಪ್ರಯತ್ನ ಮಾಡಬೇಕು.ಅದಕ್ಕಾಗಿ ತಾವೂ ಸಹಾಯ ಮಾಡುವುದಾಗಿ ಹೇಳಿದರು.ಒಳ್ಳೆಯ ಉದ್ದೇಶಕ್ಕಾಗಿ ಬೇಡುವುದರಲ್ಲಿ ತಪ್ಪೇನೂ ಇಲ್ಲ. ಇಂತಹ ಮಕ್ಕಳಿಗೆ ಅನುಕೂಲ ಮಾಡಿಕೊಡಲು ದಾನಿಗಳ ಸಹಾಯ ಪಡೆಯೋಣ, ಕಟ್ಟಡ ಮತ್ತಿತರ ಸೌಲಭ್ಯ ಒದಗಿಸೋಣ. ಈ ಮಕ್ಕಳ ಬೆಳವಣಿಗೆಗೆ ಅಗತ್ಯವಿರುವ ಕಾರ್ಯಚಟುವಟಿಕೆಗಳನ್ನು ಇಲ್ಲಿ ಆರಂಭಿಸೋಣ ಎಂದು ಹೇಳಿದರು.ಸಂಸ್ಥೆಯ ಕಾರ್ಯದರ್ಶಿ ಡಿ.ಆರ್.ಶಿವಕುಮಾರ್ ಮಾತನಾಡಿ, ಶಾಲೆಗೆ ಜಾಗ ನೀಡಬೇಕೆಂದು ಜಿಲ್ಲಾಡಳಿತ ಹಾಗೂ ಟೂಡಾಗೆ ಮನವಿ ಮಾಡಲಾಗಿದೆ. ಇನ್ನೂ ಜಾಗ ಪಡೆಯಲು ಸಾಧ್ಯವಾಗಿಲ್ಲ. ಶಾಲೆಯ 18 ವರ್ಷ ಮೇಲ್ಪಟ್ಟ ಮಕ್ಕಳಿಗೆ ವೃತ್ತಿ ತರಬೇತಿ ನೀಡಲು ತರಬೇತಿ ಕೇಂದ್ರ ಆರಂಭಿಸಲಾಗಿದೆ.ಇದಕ್ಕಾಗಿ ಸೂಕ್ತ ಸ್ಥಳಾವಕಾಶ ಬೇಕು, ಪೂರಕ ಸಲಕರಣೆಗಳನ್ನು ಖರೀದಿಸಬೇಕು ಎಂದು ಹೇಳಿದರು.ಈ ವೇಳೆ ಡಾ.ಸಿ.ಸೋಮಶೇಖರ್ ಅವರು ತಮ್ಮ ಪತ್ನಿ ಸರ್ವಮಂಗಳ ಸೋಮಶೇಖರ್‌ ಅವರೊಡನೆ ಶಾಲೆಯ ಮಕ್ಕಳ ಜೊತೆ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡರು.ನಂತರ ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.ಸಂಸ್ಥೆ ಅಧ್ಯಕ್ಷ ಜಿ.ಸಿ.ವಿರೂಪಾಕ್ಷ, ಉಪಾಧ್ಯಕ್ಷೆ ನಿರ್ಮಲಾ, ಜಂಟಿ ಕಾರ್ಯದರ್ಶಿ ಬಸವರಾಜು, ಖಜಾಂಚಿ ಸೈಯದ್‌ ಅಹಮದ್‌ ಇಕ್ಬಾಲ್ ಬಕಾಲಿ, ನಿರ್ದೇಶಕರಾದ ಲಕ್ಷ್ಮೀ ಜೋಷಿ, ರೂಪಾ, ವಿಜಯಲಕ್ಷ್ಮಿ ಪ್ರಕಾಶಯ್ಯ, ಮುಖಂಡರಾದ ಕೋರಿ ಮಂಜುನಾಥ್, ಕೊಪ್ಪಲ್ ನಾಗರಾಜು, ಎಂ.ವಿ.ಬಸವರಾಜು, ಎಂ.ಜಿ.ಸಿದ್ಧರಾಮಯ್ಯ, ಶಿವಲಿಂಗಮ್ಮ, ಅನುಸೂಯಮ್ಮ, ಡಾ.ಈಶ್ವರಯ್ಯ, ಶಾಲೆ ಮುಖ್ಯ ಶಿಕ್ಷಕಿ ಜ್ಯೋತಿ ಹಾಗೂ ಶಿಕ್ಷಕಿಯರು ಭಾಗವಹಿಸಿದ್ದರು.