ಚಿಕ್ಕಮಗಳೂರುದೌರ್ಜನ್ಯ, ದರೋಡೆ ಹಾಗೂ ಅತ್ಯಾಚಾರಗಳಂತಹ ಪ್ರಕರಣಗಳಲ್ಲಿ ಸಿಲುಕಿರುವ ಕಕ್ಷಿಗಾರರಿಗೆ ಸಂವಿಧಾನಾತ್ಮಕವಾಗಿ ನ್ಯಾಯ ಒದಗಿಸುವುದು ವಕೀಲರು ಮತ್ತು ನ್ಯಾಯಾಧೀಶರ ಮೂಲ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಹೇಳಿದರು.

- ಜಿಲ್ಲಾ ನ್ಯಾಯಾಲಯದಲ್ಲಿ ಸೋಮವಾರ ನಡೆದ ಗಣ ರಾಜ್ಯೋತ್ಸವ

ಕನ್ನಡಪ್ರಭ ವಾರ್ತೆ , ಚಿಕ್ಕಮಗಳೂರು

ದೌರ್ಜನ್ಯ, ದರೋಡೆ ಹಾಗೂ ಅತ್ಯಾಚಾರಗಳಂತಹ ಪ್ರಕರಣಗಳಲ್ಲಿ ಸಿಲುಕಿರುವ ಕಕ್ಷಿಗಾರರಿಗೆ ಸಂವಿಧಾನಾತ್ಮಕವಾಗಿ ನ್ಯಾಯ ಒದಗಿಸುವುದು ವಕೀಲರು ಮತ್ತು ನ್ಯಾಯಾಧೀಶರ ಮೂಲ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಹೇಳಿದರು.

ಜಿಲ್ಲಾ ನ್ಯಾಯಾಲಯದಲ್ಲಿ ಸೋಮವಾರ ನಡೆದ ಗಣ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಕುವೆಂಪು ಆಶಯದಂತೆ ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಸಾಮರಸ್ಯ, ಸೌಹಾರ್ದತೆಯಿಂದ ಬಾಳಬೇಕು ಎಂದರು.ವಕೀಲರು ಜೀವನದಲ್ಲಿ ವೃತ್ತಿ ಜೊತೆಗೆ ಸಾಮಾಜಿಕ ಧ್ಯೇಯ ಅಳವಡಿಸಿಕೊಳ್ಳಬೇಕು. ಸಮಾಜದ ಬದಲಾವಣೆ ತರುವ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ಮೊದಲ ಸಾಲಿನಲ್ಲಿದೆ. ಹೀಗಾಗಿ ನಮ್ಮಿಂದಲೇ ಸಮಾಜದ ಕೆಲವು ತೊಡಕುಗಳನ್ನು ತಿದ್ದುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ನಮ್ಮ ಸುತ್ತ ಮುತ್ತಲಿನಲ್ಲಿ ಪ್ಲಾಸ್ಟಿಕ್ ಮುಕ್ತ, ಸ್ವಚ್ಚಂಧ ಪರಿಸರ ಕಾಪಾಡುವಿಕೆ, ಎಲ್ಲೆಂದರಲ್ಲಿ ಉಗುಳುವುದು ನಿಯಂತ್ರಿಸುವಿಕೆ, ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಸಂಚಾರದ ವೇಳೆಯಲ್ಲಿ ಕಾನೂನು ಪಾಲನೆ ಮಾಡುವ ಜೊತೆಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕು ಎಂದು ತಿಳಿಸಿದರು.ಅಂಬೇಡ್ಕರ್ ಎಲ್ಲಾ ವರ್ಗದ ಜನತೆ ಹಕ್ಕುಗಳನ್ನು ಪಡೆದುಕೊಳ್ಳಲು ಸಂವಿಧಾನದಡಿ ಮತ ಚಲಾಯಿಸುವ ಹಕ್ಕು ನೀಡಿದ್ದಾರೆ. ಮತದಾರರು ಆಸೆ-ಆಮಿಷಕ್ಕೆ ಒಳಗಾಗದೇ ಶ್ರೇಷ್ಟ ನಾಯಕರನ್ನು ಆರಿಸುವುದು ಕರ್ತವ್ಯ. ಅಲ್ಲದೇ ಸಂವಿಧಾನ ಬಗ್ಗೆ ಬಾಲ್ಯ ದಿಂದಲೇ ಮಕ್ಕಳಿಗೆ ಪರಿಚಯಿಸುವ ಕೆಲಸವಾಬೇಕು ಎಂದು ಸಲಹೆ ಮಾಡಿದರು.ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ದೇಶದಲ್ಲಿ ಹಿಂದೂ, ಮುಸ್ಲಿಂ ಹಾಗೂ ಇಸ್ಲಾಂ ಧರ್ಮಗ್ರಂಥಗಳಿವೆ. ಇದನ್ನು ಮೀರಿರುವ ಅತ್ಯಂತ ದೊಡ್ಡ ಗ್ರಂಥ ಸಂವಿಧಾನ. ಹೀಗಾಗಿ ಪ್ರತಿಯೊಬ್ಬರು ಗಣ ರಾಜ್ಯೋತ್ಸವದಂದು ಸಂವಿಧಾನವನ್ನು ಗೌರವಿಸುವ ಕಾರ್ಯ ಮಾಡಬೇಕಿದೆ ಎಂದರು.ಪ್ರಸ್ತುತ ಹೌಸಿಂಗ್ ಬೋರ್ಡ್‌ ಸಮೀಪ ನೂತನ ನ್ಯಾಯಾಲಯ ಕಟ್ಟಡ ಕಾಮಗಾರಿ ಮುಗಿಯುವ ಹಂತದಲ್ಲಿದೆ. ವಕೀಲರು ಅನುಕೂಲವಾಗಲು ಸಣ್ಣಪುಟ್ಟ ವ್ಯವಸ್ಥೆಗಳು ಅವಶ್ಯವಿರುವ ಹಿನ್ನೆಲೆ ತಡವಾಗಿದ್ದು, ನ್ಯಾಯಾಧೀಶರ ಅವಧಿಯಲ್ಲೇ ಹೊಸ ಕಟ್ಟಡಕ್ಕೆ ತೆರಳುವ ಆಕಾಂಕ್ಷೆಯಿದ್ದು, ಜೊತೆಗೆ ಗಣಪತಿ ಮಂದಿರ ನಿರ್ಮಿಸಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಪ್ರಕಾಶ್, ಭಾನುಮತಿ, ವಕೀಲರ ಸಂಘದ ಪ್ರಧಾನ ಕಾರ್ಯ ದರ್ಶಿ ಅನಿಲ್‌ಕುಮಾರ್, ಖಜಾಂಚಿ ಡಿ.ಬಿ.ದೀಪಕ್, ಸಹ ಕಾರ್ಯದರ್ಶಿ ಪ್ರಿಯದರ್ಶಿನಿ ಉಪಸ್ಥಿತರಿದ್ದರು. 26 ಕೆಸಿಕೆಎಂ 2ಚಿಕ್ಕಮಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ನ್ಯಾ. ರಾಜೇಶ್ವರಿ ಎನ್. ಹೆಗಡೆ ಅವರು ಮಾತನಾಡಿದರು.