ಸಾರಾಂಶ
ಹಾರಕೂಡದಲ್ಲಿ ಗುರುವಾರ ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದ ಜನರನ್ನು ಗುರುತಿಸಿ ಅವರಿಗೆ ಹಾರಕೂಡ ಮಠದಿಂದ ಶ್ರೀ ಗುರು ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಎಲೆಮರೆ ಕಾಯಿಯಾಗಿ ಸಾಹಿತ್ಯ, ಸಂಗೀತ, ರಾಜಕಾರಣ, ಉದ್ಯೋಗ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಮಾಡುವವರಿಗೆ ಗುರುತಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹಾರಕೂಡಿನ ಡಾ.ಚೆನ್ನವೀರ ಶಿವಚಾರ್ಯರು ನುಡಿದರು.ಅವರು ಗುರುವಾರ ಸಮಾಜದಲ್ಲಿ ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದ ಜನರನ್ನು ಗುರುತಿಸಿ ಅವರಿಗೆ ಹಾರಕೂಡ ಮಠದಿಂದ ಶ್ರೀ ಗುರು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸುವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ನಮ್ಮ ಮಠದಿಂದ ಹಲವಾರು ವರ್ಷಗಳಿಂದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗುತ್ತಿದೆ. ಇದರಲ್ಲಿ ಈ ಸಲ 75 ಜನರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಭಾಷ ಮುರುಡ ಬೆಳಮಗಿ ವಹಿಸಿದರು. ಪ್ರಶಸ್ತಿ ಪುಸ್ಕೃತರಲ್ಲಿ ಪ್ರಮುಖರಾದ ಮಾಜಿ ಶಾಸಕ ಸುಭಾಷ ಆರ್ ಗುತ್ತೇದಾರ, ವಿಜಯಕುಮಾರ ದೇಶಮುಖ ಕಲಬುರಗಿ, ಸುರೇಶ ಚೆನ್ನಶೇಟ್ಟಿ ಬೀದರ, ಸುಜಾತಾ ಜಂಗಮಶೇಟ್ಟಿ, ಮಹಿಪಾಲರೆಡ್ಡಿ ಮುಣ್ಣೂರ, ವಿಜಯಕುಮಾರ ಸೋನಾರೆ, ದಾವುದ ಮಂಠಾಳ, ಶಿವರಾಜ ದೇಗಾಂವ ಗದಲೇಗಾಂವ, ವಿಜಯಲಕ್ಷ್ಮೀ ಕೌಠೆ, ಸುಭಾಷ ಪಾಟೀಲ ಹಾರೂರಗೇರಿ, ರೇವಣಸಿದ್ದಪ್ಪ ಜಲಾದೆ, ಡಾ.ರಾಜಹಂಸ ಬದಬದೆ, ಜ್ಯೋತಿ ಶಿವಲಂತ, ನಾಗಪ್ಪ ನಿಣ್ಣೆ, ವೀರಣ್ಣ ಮೂಲಗೆ, ಕೇಶಪ್ಪ ಬಿರಾದಾರ, ಸುರೇಶ ಸ್ವಾಮೀ, ಬಲಭೀಮ ಕೌಡಿಯಾಳ ಮುಂತಾದ ಪ್ರಮುಖರಿಗೆ ಪ್ರಶಸ್ತಿ ನೀಡಿ ಗೌರವಿಸಲಯಿತು.ತಾ.ಪಂ ಮಾಜಿ ಅಧ್ಯಕ್ಷ ಮೇಘರಾಜ ನಾಗರಾಳೆ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಅಂಬರಾಯ ಉಗಾಜಿ, ಮಲ್ಲಿನಾಥ ಹಿರೇಮಠ ಉಪಸ್ಥಿತರಿದ್ದರು. ನವಲಿಂಗ ಪಾಟೀಲ ಆಕಾಶವಾಣಿ ಕಲಾವಿದರು ನಿರೂಪಿಸಿದರು.