ಆದಿಗುರು ಶಿವರಾತ್ರಿ ಜಗದ್ಗುರುಗಳ 1066ನೇ ಜಯಂತಿಯನ್ನು ತಾಲೂಕಿನಲ್ಲಿ ಮಾಡುತ್ತಿದ್ದು, ಪ್ರಚಾರ ರಥಯಾತ್ರೆಯನ್ನು ಎಲ್ಲಾ ಸಮಾಜದ ಪ್ರಮುಖ ಮುಖಂಡರು ಒಗ್ಗೂಡಿ ಅಭೂತ ಪೂರ್ವಕವಾಗಿ ಸ್ವಾಗತಿಸಿ ಬರಮಾಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಮಳವಳ್ಳಿಯಲ್ಲಿ ಹಮ್ಮಿಕೊಂಡಿರುವ ಶ್ರೀಶಿವರಾತ್ರೀಶ್ವರ ಜಗದ್ಗುರುಗಳ 1066ನೇ ಜಯಂತಿ ಕಾರ್ಯಕ್ರಮಕ್ಕೆ ದೇಶದ ಮೊದಲ ಪ್ರಜೆ ರಾಷ್ಟ್ರಪತಿ ಬರುತ್ತಿರುವುದು ತುಂಬಾ ವಿಶೇಷ ಹಾಗೂ ತಾಲೂಕಿನ ಸೌಭಾಗ್ಯ ಎಂದರೆ ತಪ್ಪಾಗಲಾರದು ಎಂದು ಗವಿಮಠದ ಷಡಕ್ಷರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಳವಳ್ಳಿಯಲ್ಲಿ ಶಿವರಾತ್ರಿ ಜಗದ್ಗುರುಗಳ ಜಯಂತಿ ಪ್ರಚಾರ ರಥವು ಗವಿಮಠದಿಂದ ಡಿ.ಹಲಸಹಳ್ಳಿ, ಬಾಣಸಮುದ್ರ, ಪುರುದೊಡ್ಡಿ, ತೊರೆಕಾಡನಹಳ್ಳಿ, ಹಲಗಾಪುರ ಗ್ರಾಮಗಳಲ್ಲಿ ಸಂಚಾರಿ ಹಲಗೂರು ಗ್ರಾಮಕ್ಕೆ ಬಂದಾಗ ಭಕ್ತರು ರಥಕ್ಕೆ ಪುಷ್ಪಮಾಲೆ ಹಾಕಿ ಸ್ವಾಗತಿಸಿದರು.

ಈ ವೇಳೆ ಷಡಕ್ಷರ ಸ್ವಾಮೀಜಿ ಮಾತನಾಡಿ, ಆದಿಗುರು ಶಿವರಾತ್ರಿ ಜಗದ್ಗುರುಗಳ 1066ನೇ ಜಯಂತಿಯನ್ನು ತಾಲೂಕಿನಲ್ಲಿ ಮಾಡುತ್ತಿದ್ದು, ಪ್ರಚಾರ ರಥಯಾತ್ರೆಯನ್ನು ಎಲ್ಲಾ ಸಮಾಜದ ಪ್ರಮುಖ ಮುಖಂಡರು ಒಗ್ಗೂಡಿ ಅಭೂತ ಪೂರ್ವಕವಾಗಿ ಸ್ವಾಗತಿಸಿ ಬರಮಾಡಿಕೊಂಡಿದ್ದಾರೆ ಎಂದರು.

ಪ್ರಚಾರ ಸಮಿತಿಯ ಸೋಮಶೇಖರ್ ಸ್ವಾಮೀಜಿ ಮಾತನಾಡಿ, 30 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಶಿವರಾತ್ರಿ ಜಗದ್ಗುರುಗಳ ಜಯಂತಿಯಲ್ಲಿ ರಾಷ್ಟ್ರಪತಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ನಂತರ ರಥವು ಗೊಲ್ಲರಹಳ್ಳಿ, ಬ್ಯಾಡರಹಳ್ಳಿ, ಗಾಣಾಳು, ಮರಿ ಜೋಗಿ ದೊಡ್ದಿ , ಕೊನ್ನಾಪುರ, ಬಸವೇಗೌಡನದೊಡ್ಡಿ, ದಳವಾಯಿ ಕೋಡಿಹಳ್ಳಿ, ಕೆಂಪಯ್ಯನ ದೊಡ್ಡಿ, ನಂದೀಪುರ, ಗುಂಡಾಪುರ ಸೇರಿದಂತೆ ಇತರ ಗ್ರಾಮಗಳಲ್ಲೂ ಸಂಚರಿಸಿತು. ವಿಶೇಷವಾಗಿ ಪೂಜೆ ಸಲ್ಲಿಸಿ ರಥವನ್ನು ಬರಮಾಡಿಕೊಂಡರು.

ಈ ವೇಳೆ ರಾಗಿ ಬೊಮ್ಮನಹಳ್ಳಿ ಪ್ರಭುಲಿಂಗ ಸ್ವಾಮೀಜಿ ಮತ್ತು ಪ್ರಚಾರ ಸಮಿತಿ ಶ್ರೀಧರ್, ಸುತ್ತೂರು ಮಠದ ಧರ್ಮ ಪ್ರಚಾರಕರು ಶೇಖರ್ ಸೇರಿದಂತೆ ಹಲಗೂರು ವೀರಶೈವ ಸಮಾಜದ ಅಧ್ಯಕ್ಷ ಮಹಾದೇವಸ್ವಾಮಿ (ರವಿ), ಮುಖಂಡರಾದ ಚಂದ್ರಪ್ಪ, ಎಚ್.ಆರ್.ವಿಶ್ವ, ಎನ್.ಕೆ.ಕುಮಾರ್, ಪುಟ್ಟೇಗೌಡ, ಬಿ.ಪುಟ್ಟಸ್ವಾಮಿ, ಪರಮೇಶ, ಗಂಗಾಧರಸ್ವಾಮಿ, ಅಭಿಜಿತ್, ಎ.ವಿ.ಟಿ.ಕುಮಾರ್, ರಾಜೇಂದ್ರ, ಗಿರೀಶ, ಮಲ್ಲೇಶ, ಕಿರಣ, ಮರಿಸ್ವಾಮಿ, ಮಂಜುನಾಥ, ಎಚ್.ಎನ್.ವಿರುಪಾಕ್ಷಮೂರ್ತಿ, ಅಶೋಕ, ಬೆಟ್ಟಪ್ಪ ಸೇರಿದಂತೆ ಹಲವರು ಇದ್ದರು.