ಗ್ರಾಮೀಣ ಕ್ರೀಡೆ ನಡೆಸುತ್ತಿರುವುದು ನಮ್ಮಸೌಭಾಗ್ಯ: ಜಿ.ಎಚ್.ಶ್ರೀನಿವಾಸ್

| Published : Oct 10 2025, 01:00 AM IST

ಗ್ರಾಮೀಣ ಕ್ರೀಡೆ ನಡೆಸುತ್ತಿರುವುದು ನಮ್ಮಸೌಭಾಗ್ಯ: ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆನಮ್ಮ ಊರಿನಲ್ಲಿ ಇಂತಹ ಗ್ರಾಮೀಣ ಕ್ರೀಡೆ ನಡೆಸುತ್ತಿರುವುದು ನಮ್ಮಸೌಭಾಗ್ಯ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ಅಭಿಪ್ರಾಯ ಪಟ್ಟರು.

ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆ

ಕನ್ನಡಪ್ರಭ ವಾರ್ತೆ, ತರೀಕೆರೆ

ನಮ್ಮ ಊರಿನಲ್ಲಿ ಇಂತಹ ಗ್ರಾಮೀಣ ಕ್ರೀಡೆ ನಡೆಸುತ್ತಿರುವುದು ನಮ್ಮಸೌಭಾಗ್ಯ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ಅಭಿಪ್ರಾಯ ಪಟ್ಟರು.ತರೀಕೆರೆಯ ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ , ಪುರಸಭೆ , ಚಿಕ್ಕಮಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಬಯಲು ರಂಗಮಂದಿರದಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ರಂಗ ಮಂದಿರದಲ್ಲಿ ಸುಮಾರು ₹1.50 ಕೋಟಿ ವೆಚ್ಚದಲ್ಲಿ ಕೂರುವ ಆಸನಗಳ ಅಳವಡಿಕೆ ಕಾಮಗಾರಿ ಮುಂದಿನ ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಮಾತನಾಡಿ ಗ್ರಾಮೀಣ ಕ್ರೀಡೆಯನ್ನು ನಾವು ಪ್ರೋತ್ಸಾಹಿಸಿ ಬೆಂಬಲಿಸಬೇಕು ಎಂದು ಹೇಳಿದರು.ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ಅಧ್ಯಕ್ಷ ಟಿ.ಎಸ್. ರಮೇಶ್ ಮಾತನಾಡಿ ಈ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರ್ಯಕ್ರಮಕ್ಕೆ ಸಹಕರಿಸಿ ಬೆಂಬಲ ನೀಡಿದಂತಹ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.

ಕುಸ್ತಿ ಸ್ಪರ್ಧೆಯಲ್ಲಿ ದಾವಣಗೆರೆ ಗಿರೀಶ್ ಅವರು ಪ್ರತಿಷ್ಠಿತ ಬೆಳ್ಳಿಗದೆ ವಿಜೇತರಾದರು.ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ, ಪುರಸಭೆ ಅಧ್ಯಕ್ಷ ವಸಂತಕುಮಾರ್, ಪುರಸಭೆ ಸದಸ್ಯ ಟಿ.ಜಿ.ಶಶಾಂಕ, ಪುರಸಭಾ ಮಾಜಿ ಅಧ್ಯಕ್ಷ ಟಿ.ವಿ.ಶಿವಶೆಂಕರಪ್ಪ, ಟಿ.ಎಸ್.ಪ್ರಕಾಶ್ ವರ್ಮ, ಎಂ.ನರೇಂದ್ರ, ಟಿ.ಎಸ್.ಧರ್ಮರಾಜ್, ಡಾ.ಟಿ.ಎಂ. ದೇವ ರಾಜ್ ,ಅಜ್ಜಂಪುರ ಪಟ್ಟಣ ಪಂಚಾಯಿತಿ ಸದಸ್ಯ ರಂಗಸ್ವಾಮಿ, ಟಿ.ವಿ ಜಯಣ್ಣ, ಟಿ.ಸಿ. ದರ್ಶನ್, ಮಹಂತೇಶ್, ನಂದೀಶ್, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. -8ಕೆಟಿಆರ್.ಕೆ.10ಃ ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ದಿಂದ ನಡೆದ ಬಯಲು ಜಂಗಿ ಕುಸ್ತಿ ಸಮಾರೋಪ ಸಮಾರಂಭದಲ್ಲಿ ದಾವಣಗೆರೆ ಗಿರೀಶ್ ಪ್ರತಿಷ್ಠಿತ ಬೆಳ್ಳಿಗದೆ ವಿಜೇತರಾದರು. ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ಅಧ್ಯಕ್ಷ ಟಿ.ಎಸ್.ರಮೇಶ್ ಮತ್ತಿತರರು ಇದ್ದರು.