ಸಂಪತ್ತಿನ ಕಣಜವಾದ ಅರಣ್ಯ ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದು: ಎಸಿಎಫ್ ಸಿಂಧೂ

| Published : Jun 29 2025, 01:32 AM IST

ಸಂಪತ್ತಿನ ಕಣಜವಾದ ಅರಣ್ಯ ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದು: ಎಸಿಎಫ್ ಸಿಂಧೂ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಅದ್ಭುತ ಸಂಪತ್ತಿನ ಕಣಜವಾದ ಅರಣ್ಯವನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದು ಎಂದು ಎಸಿಎಫ್ ಸಿಂಧೂ ಹೇಳಿದರು.

ಗ್ಲೋಸಿಕಿಡ್ಸ್ ಸದ್ವಿದ್ಯಾ ಶಾಲೆಮಕ್ಕಳಿಂದ ವಿಶೇಷ ಚಟುವಟಿಕೆ-ಅರಣ್ಯ ವೀಕ್ಷಣೆ ಕಾರ್ಯಕ್ರಮ

ಕನ್ನಡಪ್ರಭವಾರ್ತೆ ತರೀಕೆರೆ

ಅದ್ಭುತ ಸಂಪತ್ತಿನ ಕಣಜವಾದ ಅರಣ್ಯವನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದು ಎಂದು ಎಸಿಎಫ್ ಸಿಂಧೂ ಹೇಳಿದರು.

ಪಟ್ಟಣದ ಗ್ಲೋಸಿಕಿಡ್ಸ್ ಸದ್ವಿದ್ಯಾ ಮಕ್ಕಳಿಗೆ ಏರ್ಪಡಿಸಿದ್ದ ವಿಶೇಷ ಚಟುವಟಿಕೆಯಲ್ಲಿ ಎಸಿಎಫ್ ಸಿಂದೂ ಜೊತೆಗೆ ಒಡನಾಡಿ ಅರಣ್ಯ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವರ್ಷವಿಡಿ ಬೀಜಗಳನ್ನು ಸಂಗ್ರಹಿಸಿ ಅವುಗಳನ್ನು ಸಸ್ಯಗಳನ್ನಾಗಿ ಕಾಡಿನಲ್ಲಿ ಬೆಳೆಸುವ ಮೂಲಕ ಅರಣ್ಯವನ್ನು ಸುಭೀಕ್ಷ ವಾಗಿಡಲು ಹೇಗೆ ಅರಣ್ಯ ಇಲಾಖೆ, ಶ್ರಮಿಸುತ್ತದೆ ಎಂಬುದನ್ನು ವಿವರಿಸಿದರು. ಗ್ಲೋಸಿಕಿಡ್ಸ್ ಸದ್ವಿದ್ಯಾ ಶಾಲೆ ಪ್ರಾಂಶುಪಾಲರಾದ ಹರ್ಷಿಣಿ ಡಿ.ಆರ್. ಮಾತನಾಡಿ ಪುಸ್ತಕದ ಜ್ಞಾನದೊಂದಿಗೆ ಇಂತಹ ಚಟುವಟಿಕೆಗಳು ಮಕ್ಕಳನ್ನು ಸದಾ ಜಾಗೃತ ಹಾಗೂ ಚಿರಸ್ಮರಣೀಯವಾಗಿರಿಸುತ್ತದೆ ಎಂಬ ಕಾರಣಕ್ಕೆ ಮಕ್ಕಳಿಗೆ ಇಂತಹ ಚಟುವಟಿಕೆ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳನ್ನು ಎಸಿಎಫ್ ಸಿಂಧೂ ಅವರ ಜೊತೆಗೆ ಒಡನಾಡಿ ಅರಣ್ಯದ ಅನೇಕ ಕೌತುಕಗಳನ್ನು ಮಕ್ಕಳು ಅರಿತುಕೊಂಡರು. ವಿವಿಧ ಬಗೆಯ ಚಿತ್ರ ವಿಚಿತ್ರ ಕೀಟಗಳನ್ನು, ಅವುಗಳ ಶಬ್ದಗಳು, ಪರಾವಲಂಬಿ ಸಸ್ಯಗಳು, ವೈವಿಧ್ಯಮಯ ವೃಕ್ಷಗಳ ಗಾತ್ರ ಬೆಳವಣಿಗೆಗಳ ಬಗ್ಗೆ ನೇರವಾಗಿ ಅನುಭವ ಹಂಚಿಕೊಂಡರು.ವಿದ್ಯಾರ್ಥಿಗಳು ತಯಾರಿಸಿ ತಂದಿದ್ದ ಬೀಜದ ಉಂಡೆಗಳನ್ನು ಎಸೆದು ಸಂತಸ ಪಟ್ಟರು. ಸಸ್ಯದ ಮಾದರಿಗಳನ್ನು ಸಂಗ್ರಹಿಸಿ ದರು. ಪುಸ್ತಕಗಳಲ್ಲಿ ಮಾತ್ರ ನೋಡಬಹುದಾಗಿದ್ದ ಅದೆಷ್ಟೋ ವೃಕ್ಷಗಳ ಗಾತ್ರ, ಆಕಾರ ವೈಶಿಷ್ಟ್ಯಗಳನ್ನು ಹಾಗೂ ಸಾಕಷ್ಟು ವೈದ್ಯಕೀಯ ಉಪಯೋಗವಿರುವ ಮರಗಳನ್ನು ಕಂಡು ಆನಂದಿಸಿದರು. ಕೆಲವು ವಿಚಿತ್ರ ಕೀಟಗಳನ್ನು ಪ್ರಾಣಿಗಳ ಪಡೆಯುಳಿ ಕೆಗಳನ್ನು ಕಂಡು ಅಚ್ಚರಿಗೊಂಡರು.ಶಿಕ್ಷಕಿಯರಾದ ಸ್ಪೂರ್ತಿ, ರಾಜೇಶ್ವರಿ, ಸಿದ್ದೇಶ್, ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು..

28ಕೆಟಿಆರ್.ಕೆ.1ಃ

ತರೀಕೆರೆ ಗ್ಲೋಸಿಕಿಡ್ಸ್ ಸದ್ವಿದ್ಯಾ ಶಾಲೆಮಕ್ಕಳಿಂದ ವಿಶೇಷ ಚಟುವಟಿಕೆಯಲ್ಲಿ ಅರಣ್ಯ ವೀಕ್ಷಣೆ ಕಾರ್ಯಕ್ರಮ ನಡೆಯಿತು.