ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಹೊಣೆ-ಶಾಸಕ ಲಮಾಣಿ

| Published : Feb 09 2024, 01:47 AM IST

ಸಾರಾಂಶ

ವಿದ್ಯಾರ್ಥಿಗಳು ಬಿಸಿಯೂಟದ ವೇಳೆ ಮಣ್ಣಿನ ಮೇಲೆ ಕುಳಿತು ಊಟ ಮಾಡುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇತ್ತು. ಆದ್ದರಿಂದ ಫೇವರ್ಸ ಹಾಕುವ ಮೂಲಕ ಆವರ ಆರೋಗ್ಯ ಕಾಪಾಡುವ ಕಾರ್ಯ ಮಾಡಲಾಗುತ್ತದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಲಕ್ಷ್ಮೇಶ್ವರ: ವಿದ್ಯಾರ್ಥಿಗಳು ಬಿಸಿಯೂಟದ ವೇಳೆ ಮಣ್ಣಿನ ಮೇಲೆ ಕುಳಿತು ಊಟ ಮಾಡುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇತ್ತು. ಆದ್ದರಿಂದ ಫೇವರ್ಸ ಹಾಕುವ ಮೂಲಕ ಆವರ ಆರೋಗ್ಯ ಕಾಪಾಡುವ ಕಾರ್ಯ ಮಾಡಲಾಗುತ್ತದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ 4ರಲ್ಲಿ ಗುರುವಾರ ಶಾಲಾ ಮೈದಾನಕ್ಕೆ ಫೇವರ್ಸ ಹಾಕುವ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಾಲಾ ಬಯಲಿನಲ್ಲಿ ಬಿಸಿಯೂಟ ಸೇವಿಸುವುದರಿಂದ ಊಟದ ತಟ್ಟೆಯಲ್ಲಿನ ಧೂಳು ಊಟದಲ್ಲಿ ಸೇರಿಕೊಂಡು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇತ್ತು. ಆದ್ದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಫೇವರ್ಸ್ ಹಾಕುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು. ನಮ್ಮ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಉತ್ತಮ ಅಂಕಗಳಿಸುವ ಮೂಲಕ ತಾಲೂಕಿನ ಕೀರ್ತಿ ಬೆಳಗಿಸುವ ಕಾರ್ಯ ಮಾಡಬೇಕು, ಸರ್ಕಾರಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳು ಕಲಿಯುತ್ತಿದ್ದು ಅವರ ಆರೋಗ್ಯವು ಚೆನ್ನಾಗಿರಬೇಕು ಎಂದು ಹೇಳಿದರು. ಈ ವೇಳೆ ಪುರಸಭೆ ಸದಸ್ಯ ಬಸವರಾಜ ಓದುನವರ, ಸುನೀಲ ಮಹಾಂತಶೆಟ್ಟರ, ಶಕ್ತಿ ಕತ್ತಿ, ಬಸವರಾಜ ಚಕ್ರಸಾಲಿ, ನವೀನ ಬೆಳ್ಳಟ್ಟಿ, ರಾಜೇಶ್ವರಿ ಹರಕುಣಿ, ರಮೇಶ ದನದಮನಿ, ಮಂಜುನಾಥ ಉಮಚಗಿ, ಬಸವರಾಜ ದನದಮನಿ, ಬಸವರಾಜ ಕುಂಬಾರ, ಸಾವಿತ್ರಿ ಅತ್ತಿಗೇರಿ, ಬಸವರಾಜ ಕುರಿ, ವಾಸು ಪಾಟೀಲ, ಮುಖ್ಯೋಪಾಧ್ಯಾಯ ಎಚ್.ಬಿ. ಸಣ್ಣಮನಿ, ಬಸವರಾಜ ಯರಗುಪ್ಪಿ, ಆರ್.ಬಿ. ಜೋಶಿ, ಎಸ್‌. ಎನ್‌. ತಾಯಮ್ಮನವರ, ಅಶ್ವಿನಿ ಚೌದರಿ, ಜೆ.ಡಿ. ಹರಕೇರಿ, ಇದ್ದರು.