ಸಾಧನೆ, ಪರಿಶ್ರಮದಿಂದ ಯೋಗಿಯಾಗಲು ಸಾಧ್ಯ

| Published : Jan 21 2025, 12:31 AM IST

ಸಾರಾಂಶ

ಸಾಮಾನ್ಯ ವ್ಯಕ್ತಿ ತನ್ನ ಬದುಕಿನ ಸಾಧನೆ, ಪರಿಶ್ರಮಗಳಿಂದ ಮಾತ್ರ ಮಹಾಯೋಗಿಯಾಗಲು ಸಾಧ್ಯ. ಅಂತಹ ಸಾಧಕರಲ್ಲಿ ವೇಮನ ಸಹ ಒಬ್ಬರು, ಹಣ ಬಲದಿಂದ ಬಿರುದು, ನಾಮಾವಳಿ, ಪ್ರಶಸ್ತಿ, ಸ್ಥಾನಮಾನ ಗಳಿಸಬಹುದು. ಆದರೆ ಸಾಧನೆ ಇಲ್ಲದೆ ಮಹಾಯೋಗಿಯಾಗಲು ಸಾಧ್ಯವಿಲ್ಲ. ವೇಮನರು ಜನರಲ್ಲಿ ಅರಿವಿನ ಬೀಜ ಬಿತ್ತಿದ್ದರು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸಮಾಜದಲ್ಲಿನ ಮೌಢ್ಯಗಳನ್ನು ಮೆಟ್ಟಿ ನಿಲ್ಲಲು ಹೋರಾಡಿದ ಮಹಾಯೋಗಿ ವೇಮನರು ಸಮಾಜದ ಅಭಿವೃದ್ಧಿಗಾಗಿ ಹಲವು ಸಂದೇಶಗಳನ್ನು ನೀಡಿದ್ದಾರೆ. ಯೋಗಿಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪುರಸಭೆ ಸದಸ್ಯ ಹಾಗೂ ರೆಡ್ಡಿ ಜನಸಂಘದ ರಾಜ್ಯ ನಿರ್ದೇಶಕ ಚಂದ್ರಾರೆಡ್ಡಿ ಹೇಳಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬ ಆಚಾರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿಯಲ್ಲಿ ವೇಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದದರು.

ಯೋಗಿಯಾದ ವೇಮನರು

ಸಾಮಾನ್ಯ ವ್ಯಕ್ತಿ ತನ್ನ ಬದುಕಿನ ಸಾಧನೆ, ಪರಿಶ್ರಮಗಳಿಂದ ಮಾತ್ರ ಮಹಾಯೋಗಿಯಾಗಲು ಸಾಧ್ಯ. ಅಂತಹ ಸಾಧಕರಲ್ಲಿ ವೇಮನ ಸಹ ಒಬ್ಬರು, ಹಣ ಬಲದಿಂದ ಬಿರುದು, ನಾಮಾವಳಿ, ಪ್ರಶಸ್ತಿ, ಸ್ಥಾನಮಾನ ಗಳಿಸಬಹುದು. ಆದರೆ ಸಾಧನೆ ಇಲ್ಲದೆ ಮಹಾಯೋಗಿಯಾಗಲು ಸಾಧ್ಯವಿಲ್ಲ’ ಎಂದರು.

ತಹಸೀಲ್ದಾರ್ ವೆಂಕಟೇಶಪ್ಪ ಮಾತನಾಡಿ, ಮಹಾಯೋಗಿ ವೇಮನರು ಆಂಧ್ರಪ್ರದೇಶ ಮೂಲದವರಾಗಿದ್ದು, ನಾವು ಸಹ ಗಡಿಭಾಗದಲ್ಲಿ ಇರುವ ಕಾರಣ ಅವರ ತತ್ವ, ಸಿದ್ಧಾಂತ ಗಳು ಇಲ್ಲಿಯ ಜನರ ಮೇಲೆ ಪ್ರಭಾವ ಬೀರಿವೆ ಎಂದರು.

ಅರಿವಿನ ಬೀಜ ಬಿತ್ತಿದ ವೇಮನರು

ಕವಿ ಮತ್ತು ದಾರ್ಶನಿಕರಾಗಿದ್ದ ಮಹಾಯೋಗಿ ವೇಮನ ಅವರು ಸಮಾಜದಲ್ಲಿನ ಮೌಢ್ಯ, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ನಿರಂತರವಾಗಿ ಶ್ರಮಿಸಿದ್ದಾರೆ. ಸಮಾಜದಲ್ಲಿ ತಾವು ಕಂಡ ಸತ್ಯವನ್ನು ಹಾಡಿ, ಜನರಲ್ಲಿ ಅರಿವಿನ ಬೀಜ ಬಿತ್ತಿದ್ದರು ಎಂದು ಹೇಳಿದರು.

ಗ್ರೇಡ್ 2 ತಹಸೀಲ್ದಾರ್ ಗಾಯತ್ರಿ, ರೆಡ್ಡಿ ಜನಸಂಘದ ಅಧ್ಯಕ್ಷ ತಿಪ್ಪಾರೆಡ್ಡಿ , ಕಾರ್ಯಾಧ್ಯಕ್ಷ ರಾಜಾರೆಡ್ಡಿ, ಕಾರ್ಯದರ್ಶಿ ರಾಮಚಂದ್ರಾ ರೆಡ್ಡಿ, ಸುಬ್ರಮಣಿ ರೆಡ್ಡಿ, ಮನೋಹರ ರೆಡ್ಡಿ, ರಾಧಮ್ಮ, ವಿಜಯಲಕ್ಷ್ಮಮ್ಮ, ನಾರಾಯಣರೆಡ್ಡಿ, ನಾಗಭೂಷಣ ರೆಡ್ಡಿ, ಶ್ರೀನಿವಾಸರೆಡ್ಡಿ, ಜೀವನ್, ಮಂಜುನಾಥ ರೆಡ್ಡಿ ಚನ್ನಾರೆಡ್ಡಿ ಭಾಗವಹಿಸಿದ್ದರು.