ಪುರಾಣಗಳಿಂದ ಪುಣ್ಯ ಪುರುಷರ ಜೀವನ ಚರಿತ್ರೆ ಅರಿತುಕೊಳ್ಳಲು ಸಾಧ್ಯ: ಶಿವಯೋಗಿ ಶಿವಾಚಾರ್ಯರು

| Published : Apr 19 2025, 12:40 AM IST

ಪುರಾಣಗಳಿಂದ ಪುಣ್ಯ ಪುರುಷರ ಜೀವನ ಚರಿತ್ರೆ ಅರಿತುಕೊಳ್ಳಲು ಸಾಧ್ಯ: ಶಿವಯೋಗಿ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಪುರಾಣಗಳಿಂದ ಪುಣ್ಯ ಪುರುಷರ ಜೀವನ ಚರಿತ್ರೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಸಿರುಗುಪ್ಪ

ಪುರಾಣಗಳಿಂದ ಪುಣ್ಯ ಪುರುಷರ ಜೀವನ ಚರಿತ್ರೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ರೌಡ್ಕುಂದಿ ಸಂಸ್ಥಾನ ಹಿರೇಮಠದ ಷ.ಬ್ರ. ಶ್ರೀ ಶಿವಯೋಗಿ ಶಿವಾಚಾರ್ಯರು ಹೇಳಿದರು.

ತಾಲೂಕಿನ ಹೆರಕಲ್ಲ ಗ್ರಾಮದಲ್ಲಿ ಬಳಗಾನೂರು ಶ್ರೀ ಮರಿ ಶಿವಯೋಗಿಗಳ 47ನೇ ವರ್ಷದ ಪುಣ್ಯಾರಾಧನೆ ಹಾಗೂ ಶಿವಶರಣ ಶ್ರೀಮರಿಸ್ವಾಮಿಗಳ 37ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಶ್ರೀಮಠದಲ್ಲಿ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಆಧ್ಯಾತ್ಮಿಕವಾಗಿ ನಾವು ಪ್ರಬುದ್ಧರಾಗಲು ಪುರಾಣ ಪ್ರವಚನದಂಥ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿವೆ. ಲಿಂಗೈಕ್ಯ ಚಿದಾನಂದಪ್ಪ ತಾತನವರ ಸಂಕಲ್ಪದಂತೆ ಪುಣ್ಯ ಪುರುಷರ ಜೀವನ ಬದುಕಿನ ಸಂದೇಶಗಳನ್ನು ನಾವುಗಳು ಅರಿತುಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಗುಡದೂರಿನ ಶ್ರೀ ನೀಲಕಂಠಾರ್ಯ ಮಹಾಸ್ವಾಮಿಗಳು ಶ್ರೀಮಠವನ್ನ ತಮ್ಮ ಮಠದ ಶಾಖಾ ಮಠವೆಂದೆ ಭಾವಿಸಿ ಶ್ರೀ ಚಿದಾನಂದ ತಾತನವರ ನಂತರ ಭುವನೇಶ್ವರಿ ಅಮ್ಮನವರಿಗೆ ಮಾರ್ಗದರ್ಶನ ಮಾಡುತ್ತಾ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಗುಡದೂರು ರೌಡಕುಂದ ಎರಕಲ್ಲು ಈ ಮೂರು ಮಠಗಳು ಒಂದೇ ಎಂಬ ರೀತಿಯಲ್ಲಿ ಸದ್ಭಕ್ತರು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸುತ್ತಿರುವುದು ಪೂಜ್ಯರಗಳಲ್ಲಿ ಅತ್ಯಂತ ಸಂತಸ ತಂದಿದೆ ಎಂದರು.

ಗುಡದೂರಿನ ಶ್ರೀನೀಲಕಂಠಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು.

ಸಿರುಗುಪ್ಪದ ಶ್ರೀಗುರುಬಸವ ಮಠದ ಪರಮಪೂಜ್ಯ ಶ್ರೀಬಸವಭೂಷಣ ಸ್ವಾಮೀಜಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.

ಶ್ರೀಮಠದಲ್ಲಿ ನಿತ್ಯ ರುದ್ರಾಭಿಷೇಕ ಕಾರ್ಯಕ್ರಮ ನಡೆಯುತ್ತದೆ.

ಎಂ.ಗುಡದೂರಿನ ಶ್ರೀಗುರು ದೊಡ್ಡಬಸವೇಶ್ವರ ಪುರಾಣ ಪ್ರವಚನವನ್ನು ಪ್ರಭಯಶಾಸ್ತ್ರಿಗಳು ವಾಚಿಸಿದರು. ಸಂಗೀತ ಸೇವೆಯನ್ನ ಜಗನ್ನಾಥ್ ಗವಾಯಿಗಳು, ಬಸವರಾಜ್ ಮತ್ತು ಮೌನೇಶ್ ತಬಲಾ ಸಾಥ್‌ ನೀಡಿದರು.

ನಾಗರಾಳ ಮಠದ ಜಗದೀಶಯ್ಯನವರು, ಚನ್ನವೀರಸ್ವಾಮಿ, ಪ್ರಹ್ಲಾದಸ್ವಾಮಿ, ರಾಜಶೇಖರ ಸ್ವಾಮಿ, ಮರಿಸ್ವಾಮಿ, ಬಸಯ್ಯಸ್ವಾಮಿ ಭಾಗವಹಿಸಿದ್ದರು.