ಪರಿಶ್ರಮ, ಪ್ರಾಮಾಣಿಕತೆ ಮರೆಯಾಗುತ್ತಿರುವುದು ವಿಷಾದನೀಯ

| Published : Jul 13 2025, 01:19 AM IST

ಸಾರಾಂಶ

ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ ಹಾಗೂ ಪ್ರಾಮಾಣಿಕತೆ ಇಂದು ಮರೆಯಾಗುತ್ತಿರುವುದು ವಿಷಾದನೀಯ ಎಂದು ಡಾ.ಬಿ ವಿ ಕಂಬಳ್ಯಾಳ ಸಲಹೆ ನೀಡಿದರು.

ಗಜೇಂದ್ರಗಡ: ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ ಹಾಗೂ ಪ್ರಾಮಾಣಿಕತೆ ಇಂದು ಮರೆಯಾಗುತ್ತಿರುವುದು ವಿಷಾದನೀಯ ಎಂದು ಡಾ.ಬಿ ವಿ ಕಂಬಳ್ಯಾಳ ಸಲಹೆ ನೀಡಿದರು.

ಪಟ್ಟಣದ ಎಸ್ ಎಮ್ ಭೂಮರಡ್ಡಿ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಸಾಲಿನ ಸಾಂಘಿಕ ಚಟುವಟಿಕೆಗಳು ಸಾಹಿತ್ಯ ಸಾಂಸ್ಕೃತಿಕ ಕ್ರೀಡಾ ಹಾಗೂ ಎನ್ ಎಸ್ ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ಕಾರ್ಯಪ್ರವೃತರಾಗಿ ಭವಿಷ್ಯದಲ್ಲಿ ಯಶಸ್ಸು ಸಾಧಿಸಬೇಕೆಂದರು.

ಗದಗ ಸಿಪಿಆಐ ಎಲ್ ಕೆ ಜೂಲಕಟ್ಟಿ ಮಾತನಾಡಿ, ಸಮಯ ಪ್ರಜ್ಞೆ ಗುರುಗಳ ಬಗ್ಗೆ ಶ್ರದ್ಧೆ ಹಾಗೂ ಗುರಿ ಸಾಧಿಸುವ ಛಲ ಮೈಗೂಡಿಸಿಕೊಂಡಾಗ ಯಶಸ್ಸು ಹುಡುಕಿಕೊಂಡು ಬರುತ್ತದೆ. ವಿದ್ಯಾರ್ಥಿಗಳು ಸಂಸ್ಕಾರದಿಂದ ದೂರ ಉಳಿದರೆ ನಾವೆಷ್ಟೇ ಮುಂದುವರಿದರೂ ಪ್ರಯೋಜನವಿಲ್ಲ ಎಂದರು.

ಗವಿವಿ ಸಂಘದ ಆಡಳಿತಾಧಿಕಾರಿ ಪ್ರಶಾಂತ್ ಶಿವಪ್ಪಗೌಡರ, ಪದವಿ ಕಾಲೇಜು ಪ್ರಾಚಾರ್ಯ ಡಾ.ಎಸ್ ಎನ್ ಶಿವರಡ್ಡಿ, ಬಸವರಾಜ ಹಿರೇಮಠ, ಎಸ್ ಕೆ ಕಟ್ಟಿಮನಿ, ವಿ ಎಂ ಜೂಚನಿ, ಸಂಗಮೇಶ ಹುನಗುಂದ, ಗೋಪಾಲ ರಾಯಬಾಗಿ ಮಂಜುನಾಥ , ಎಸ್ ಎಸ್ ವಾಲಿಕಾರ ಇದ್ದರು.