ಪುರಾಣ ಪುಣ್ಯ ಕಥೆಗಳ ಅಂತರಾರ್ಥ ವಿಕೃತಿಗೊಳಿಸಿರುವುದು ವಿಷಾದಕರ

| Published : Aug 27 2024, 01:33 AM IST

ಸಾರಾಂಶ

ಕೊಪ್ಪ, ನಮ್ಮ ಸನಾತನ ಪರಂಪರೆಯಲ್ಲಿ ನಾವು ನಂಬಿಕೊಂಡು ಬಂದಿರುವ ಪುರಾಣ ಪುಣ್ಯ ಕಥೆಗಳ ನಿಜಾರ್ಥ ಅರಿಯದೆ ಅದನ್ನು ತಮಗೆ ಬೇಕಾದಂತೆ ತಿರುಚಿ ಅರ್ಥೈಸಿಕೊಂಡು ಅದರ ಅಂತರಾರ್ಥವನ್ನು ವಿಕೃತಿಗೊಳಿಸುತ್ತಿರುವುದು ವಿಷಾದದ ಸಂಗತಿ ಎಂದು ಉಡುಪಿಯ ಅಸೆಮ್ಸ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲರು, ಯಕ್ಷಗಾನ ತಾಳಮದ್ದಲೆ ಕ್ಷೇತ್ರದ ಪ್ರಸಿದ್ಧ ಅರ್ಥಧಾರಿ, ಯಕ್ಷಗಾನ ಪ್ರಸಂಗಕರ್ತ ಪವನ ಕಿರಣಕೆರೆ ಹೇಳಿದರು.

ಹರಿಹರಪುರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಕೃಷ್ಣಾರ್ಪಣ ಕಾರ್ಯಕ್ರಮ ಯಶಸ್ವಿ

ಕನ್ನಡಪ್ರಭ ವಾರ್ತೆ, ಕೊಪ್ಪ

ನಮ್ಮ ಸನಾತನ ಪರಂಪರೆಯಲ್ಲಿ ನಾವು ನಂಬಿಕೊಂಡು ಬಂದಿರುವ ಪುರಾಣ ಪುಣ್ಯ ಕಥೆಗಳ ನಿಜಾರ್ಥ ಅರಿಯದೆ ಅದನ್ನು ತಮಗೆ ಬೇಕಾದಂತೆ ತಿರುಚಿ ಅರ್ಥೈಸಿಕೊಂಡು ಅದರ ಅಂತರಾರ್ಥವನ್ನು ವಿಕೃತಿಗೊಳಿಸುತ್ತಿರುವುದು ವಿಷಾದದ ಸಂಗತಿ ಎಂದು ಉಡುಪಿಯ ಅಸೆಮ್ಸ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲರು, ಯಕ್ಷಗಾನ ತಾಳಮದ್ದಲೆ ಕ್ಷೇತ್ರದ ಪ್ರಸಿದ್ಧ ಅರ್ಥಧಾರಿ, ಯಕ್ಷಗಾನ ಪ್ರಸಂಗಕರ್ತ ಪವನ ಕಿರಣಕೆರೆ ಹೇಳಿದರು.ಕೊಪ್ಪ ತಾಲೂಕು ಕಸಾಪ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ತಾಲೂಕಿನ ಹರಿಹರಪುರದ ನುಗ್ಗಿಮಕ್ಕಿ ಶ್ರೀ ಮಲ್ಲೇಶಯ್ಯನವರ ಛತ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀಕೃಷ್ಣಾರ್ಪಣ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣಾ ವತಾರದ ಕುರಿತು ಮಾತನಾಡಿ, ವಿಚಾರಗಳು ಗೌಣವಾಗಿರುವ ನಮ್ಮ ಇಂದಿನ ಎಷ್ಟೋ ಆಚಾರಗಳು ಅದರ ನೈಜ ಅರ್ಥ ಕಳೆದುಕೊಳ್ಳುತ್ತಿವೆ. ನಮ್ಮ ಧರ್ಮ ಸಂಸ್ಕೃತಿ ಪುರಾಣಗಳ ಸತ್ವವನ್ನು ವಸ್ತು ನಿಷ್ಠವಾಗಿ ಅರಿಯುವತ್ತ ನಾವು ಗಮನ ಹರಿಸಬೇಕು. ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮೆಲ್ಲರದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಮಗನಾಗಿ, ಬಾಲಕನಾಗಿ, ಸಖನಾಗಿ, ಭಕ್ತರ ಆರಾಧ್ಯ ದೇವನಾಗಿ ಎಲ್ಲರ ಮನಸೂರೆಗೊಂಡ ಒಂದು ಅಪೂರ್ವ ಪಾತ್ರವಾಗಿ ಕಾಣಿಸಿಕೊಂಡು, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಕಥನವನ್ನು ಮನಮುಟ್ಟುವಂತೆ ವಿವರಿಸಿದರು.ಕು. ಆಶಿತಾ ಮತ್ತು ಕು. ವರ್ಷಿಣಿಯವರ ಗೀತಾಗಾಯನ ನಡೆಯಿತು. ಕೊಪ್ಪ ತಾಲೂಕು ಕಸಾಪದಿಂದ ನಡೆದ ಕಾರ್ಯಕ್ರಮದಲ್ಲಿ ಕೊಪ್ಪ ರೋಟರಿ ಕ್ಲಬ್, ರೋಟರಿ ಸಮುದಾಯದಳ ಹರಿಹರಪುರ, ಶ್ರೀ ಶಾರದ ಮಹಿಳಾಸಮಾಜ ಹರಿಹರಪುರ, ಜನನಿ ವಿಪ್ರ ಮಹಿಳಾ ಘಟಕ ಹರಿಹರಪುರ, ಶ್ರೀ ಶಂಕರ ಭಜನಾ ಮಂಡಳಿ, ಕಸಾಪ ಹೋಬಳಿ ಘಟಕ ಹರಿಹರಪುರ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಇದ್ದರು.