ಪ್ರವಾಸಿ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ವಿಶಾಲಾಕ್ಷಮ್ಮ

| Published : Oct 20 2024, 01:47 AM IST

ಪ್ರವಾಸಿ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ: ವಿಶಾಲಾಕ್ಷಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಪ್ರವಾಸಿ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ತರೀಕೆರೆ ತಾಲೂಕು ಪಂಚಾಯಿತಿ ನಿವೃತ್ತಕಾರ್ಯ ನಿರ್ವಹಣಾಧಿಕಾರಿ ವಿಶಾಲಾಕ್ಷಮ್ಮ ಹೇಳಿದ್ದಾರೆ.

- ಬಿಜೆಪಿ ನಾರಿಶಕ್ತಿ ಬಳಗದಿಂದ ಲಕ್ಕವಳ್ಳಿ ಕದಳಿ ರಂಗನಾಥಸ್ವಾಮಿ ದೇವಸ್ಥಾನದ ಸುತ್ತ ಸ್ವಚ್ಚತಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಪ್ರವಾಸಿ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ತರೀಕೆರೆ ತಾಲೂಕು ಪಂಚಾಯಿತಿ ನಿವೃತ್ತ

ಕಾರ್ಯ ನಿರ್ವಹಣಾಧಿಕಾರಿ ವಿಶಾಲಾಕ್ಷಮ್ಮ ಹೇಳಿದ್ದಾರೆ.

ಬಿಜೆಪಿ ನಾರಿ ಶಕ್ತಿ ಬಳಗದಿಂದ ಏರ್ಪಡಿಸಿದ್ದ ತಾಲೂಕಿನ ಲಕ್ಕವಳ್ಳಿ ಗ್ರಾಪಂ ವ್ಯಾಪ್ತಿಯ ಕದಳಿ ರಂಗನಾಥಸ್ವಾಮಿ ದೇವಸ್ಥಾನ ಸುತ್ತ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ದಿನ ಸಮಾಜ ಸೇವೆಯಲ್ಲಿ ತೊಡಗಿರುವಂತ ಸುಧಾ ಮತ್ತು ಶ್ರೀನಿವಾಸರವರ ಹುಟ್ಟು ಹಬ್ಬದ ಪ್ರಯುಕ್ತ ಲಕ್ಕವಳ್ಳಿ ಗ್ರಾಪಂ ವ್ಯಾಪ್ತಿಯ ಕದಳಿ ರಂಗನಾಥ ಸ್ವಾಮಿ ದೇವಸ್ಥಾನ ಪ್ರವಾಸಿ ಸ್ಥಳವಾಗಿರುವುದರಿಂದ ಇದರ ಸುತ್ತ ಮುತ್ತ ಅದರ ಎದುರುಗಡೆ ಸ್ವಚ್ಛತಾ ಕಾರ್ಯಕ್ರಮವನ್ನು ಬಿಜೆಪಿ ನಾರಿ ಶಕ್ತಿ ಬಳಗ ಹಮ್ಮಿಕೊಂಡಿರುವುದು ಒಂದು ವಿಶೇಷ. ಪ್ರತಿಯೊಬ್ಬರ ಹುಟ್ಟು ಹಬ್ಬದಂದು ಒಂದೊಂದು ಕಾರ್ಯಕ್ರಮ ಹಮ್ಮಿಕೊಂಡು ಸಮಾಜಸೇವೆ ಮಾಡುತ್ತ ಬಂದಿರುವುದು ಬಹಳ ವಿಶೇಷ ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಡಿ ಈ ಒಂದು ಪ್ರವಾಸಿ ಸ್ಥಳದ ಸುತ್ತ ಸ್ವಚ್ಛತೆಗಾಗಿ ಪ್ಲಾಸ್ಟಿಕ್ ಬಾಟಲು ಗಳು ಮತ್ತು ಇತರೆ ವಸ್ತುಗಳನ್ನು ಆರಿಸಿ ಗಿಡಗಂಟೆಗಳನ್ನ ತೆರವು ಮಾಡಿ ಇಲ್ಲಿ ಸೇರಿರುವ ಪ್ರವಾಸಿಗರಿಗೆ ಇದರ ಬಗ್ಗೆ ತಿಳುವಳಿಕೆ ನೀಡಿದರು. ಇಂಥಾ ಪ್ರವಾಸಿ ಸ್ಥಳದಲ್ಲಿ ಸ್ವಚ್ಛತೆ ಮತ್ತು ಪರಿಸರ ಕಾಪಾಡುವುದು ನಮ್ಮೆಲ್ಲರ ಹೊಣೆ ಮತ್ತು ಕರ್ತವ್ಯ ಇದನ್ನ ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಮಾತನಾಡಿ ಈ ದಿನ ನಮ್ಮ ಬಿಜೆಪಿ ನಾರಿ ಶಕ್ತಿ ಬಳಗದ ಸದಸ್ಯರಾದ ಸುಧಾ ಶ್ರೀನಿವಾಸ್ ಹುಟ್ಟುಹಬ್ಬವನ್ನು ಕದಳಿ ರಂಗನಾಥ ಸ್ವಾಮಿ ದೇವಸ್ಥಾನದ ಆವರಣ ಸ್ವಚ್ಛತೆ ಮಾಡುವ ಮೂಲಕ ಆಚರಿಸುತ್ತಿ ರುವುದು ವಿಶೇಷ. ಪ್ರವಾಸಿಗರಿಗೆ ಈ ಬಗ್ಗೆ ಮಾಹಿತಿ ನೀಡಿ ಮುಂದೆ ಬರುವ ಎಲ್ಲಾ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡು ವುದು ಬಹಳ ಪ್ರಮುಖ ಅಂಶ ಎಂದು ಹೇಳಿದರು.

ಪ್ಲಾಸ್ಟಿಕ್ ವಸ್ತುಗಳು ಭೂಮಿಗೆ ಬಿದ್ದರೆ ಮುಂದಿನ ದಿನದಲ್ಲಿ ಭೂಮಿ ಮತ್ತು ಪರಿಸರಕ್ಕೆ ಮಾರಕವಾಗಬಹುದು. ಆದ್ದರಿಂದ ನಾವೆಲ್ಲರೂ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಸ್ವಚ್ಛ ಭಾರತ ಅಭಿಯಾನದಡಿ ಪ್ರವಾಸಿ ಸ್ಥಳ ಮತ್ತು ನಮ್ಮ ಗ್ರಾಮಗಳ ಸ್ವಚ್ಛತೆ ಕಾಪಾಡಬೇಕು ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲಿಂದರಲ್ಲಿ ಬಿಸಾಕಬಾರದು ಇದು ಮುಂದಿನ ಪೀಳಿಗೆಗೆ ಕಂಟಕವಾಗುತ್ತದೆ ಎಂದು ತಿಳಿಸಿದರು.

ನಾರಿ ಶಕ್ತಿ ಬಳಗದ ಸದಸ್ಯರಾದ ಅರುಂಧತಿ ಮಾತನಾಡುತ್ತ ಈ ದಿನ ಹುಟ್ಟು ಹಬ್ಬದ ಪ್ರಯುಕ್ತ ಕದಳಿ ರಂಗನಾಥ ಸ್ವಾಮಿ ದೇವಸ್ಥಾನದ ಆವರಣ ಮತ್ತು ಅದರ ಸುತ್ತಲ ಪರಿಸರವನ್ನ ಸ್ವಚ್ಛಗೊಳಿಸಿರುವುದು ಸಂತೋಷಕರ ವಿಷಯ. ಹಾಗೆಯೇ ಪ್ರವಾಸಿ ಸ್ಥಳಕ್ಕೆ ಬರುವ ಜನರು ಸ್ವಚ್ಛತೆ ಕಾಪಾಡಬೇಕು. ಈ ದಿನ ನಮ್ಮ ನಾರಿ ಶಕ್ತಿ ಬಳಗದಿಂದ ಪ್ರತಿಯೊಬ್ಬರ ಹುಟ್ಟು ಹಬ್ಬದಂದು ಒಂದೊಂದು ಕಾರ್ಯಕ್ರಮ ಹಮ್ಮಿಕೊಳ್ಳು ತ್ತಿರುವುದು ಉತ್ತಮ ಎಂದರು.

ಇಲ್ಲಿಯವರೆಗೆ ಬಡಜನರಿಗೆ ಆಹಾರ ಧಾನ್ಯಗಳ ವಿತರಣೆ ಮೂಲಕ ಅತ್ಯುತ್ತಮ ಸೇವಾ ಸಲ್ಲಿಸಿದ ವೈದ್ಯ ದಂಪತಿಗೆ ಸನ್ಮಾನ ಕಾರ್ಯಕ್ರಮ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಮತ್ತು ಗಿಡ ನೆಡುವ ಮುಖಾಂತರ ಪರಿಸರ ಉಳಿಸಿ ಬೆಳೆಸುವ ಕಾರ್ಯಕ್ರಮ, ಈ ದಿನ ಸ್ವಚ್ಛತಾ ಕಾರ್ಯಕ್ರಮವೂ ವಿಶೇಷವಾಗಿದೆ ಎಂದು ಹೇಳಿದರು.

ಅಜ್ಜಂಪುರ ತಾಲೂಕಿನ ಮಾಜಿ ತಾಪಂ ಮಾಜಿ ಅಧ್ಯಕ್ಷೆ ಪ್ರತಿಮಾ ಸೋಮಶೇಖರ್ ಮಾತನಾಡಿ, ನಮ್ಮ ನಾರಿಶಕ್ತಿ ಬಳಗದಿಂದ ಹುಟ್ಟುಹಬ್ಬ ದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಪ್ರವಾಸಿ ಸ್ಥಳವಾದ ಕದಳಿ ರಂಗನಾಥ ಸ್ವಾಮಿ ದೇಗುಲದ ಮುಂದೆ ನಾವೆಲ್ಲರೂ ಸೇರಿ ಸ್ವಚ್ಛ ಮಾಡಿರುವುದು ಮಾದರಿ ಕೆಲಸ ಎಂದು ತಿಳಿಸಿದರು.

ಸುಧಾ ಶ್ರೀನಿವಾಸ್, ಎನ್ ಎಸ್ ಜಯಣ್ಣ, ಪುಟ್ಟಮ್ಮ, ರಂಜಿತ ಮತ್ತು ಮಹಿಳಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 19ಕೆಟಿಆರ್.ಕೆ.6ಃ

ಬಿ.ಜೆ.ಪಿ.ನಾರಿಶಕ್ತಿ ವತಿಯಿಂದ ಸಮೀಪದ ಲಕ್ಕವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದಳಿ ರಂಗನಾಥ ಸ್ವಾಮಿ ದೇವಸ್ಥಾನದ ಅವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.