ಕಡೂರುತನ್ನ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ಪ್ರೋತ್ಸಾಹಿಸಿದ ಮತ್ತು ಬಡ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಿದ ಗುರುಗಳು ಮತ್ತು ಶಾಲೆಯನ್ನು ಎಂದಿಗೂ ಮರೆಯಬಾರದು ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ ಬಿ. ಲೋಹಿತ್ ಕುಮಾರ್ ಹೇಳಿದರು.
- ಜೋಡಿಹೋಚಿ ಹಳ್ಳಿ ಮೊರಾರ್ಜಿಶಾಲೆಯಲ್ಲಿ ದಶಕದ ಪುನರ್ ಮಿಲನ ಸಂಭ್ರಮ। ಶಾಲಾ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ, ಕಡೂರುತನ್ನ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ಪ್ರೋತ್ಸಾಹಿಸಿದ ಮತ್ತು ಬಡ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಿದ ಗುರುಗಳು ಮತ್ತು ಶಾಲೆಯನ್ನು ಎಂದಿಗೂ ಮರೆಯಬಾರದು ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ ಬಿ. ಲೋಹಿತ್ ಕುಮಾರ್ ಹೇಳಿದರು. ತಾಲೂಕಿನ ಜೋಡಿಹೋಚಿಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ 2015-16ನೇ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳಿಂದ ಶಿಕ್ಷಕರು ಮತ್ತು ಸಿಬ್ಬಂದಿಗೆ ಅಭಿನಂದಿಸಲು ಆಯೋಜಿಸಿದ್ದ ದಶಕದ ಪುನರ್ ಮಿಲನ ಸಂಭ್ರಮ ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಅಂದು ಬಡತನದಲ್ಲಿ ಈ ವಸತಿ ಶಾಲೆಗೆ ಸೇರಿದ ನಮ್ಮನ್ನು ಅಂದಿನ ಶಿಕ್ಷಕರು ಮತ್ತು ಸಿಬ್ಬಂದಿ ನಮ್ಮನ್ನು ದಂಡಿಸಿ , ಪ್ರೀತಿಸಿ, ಉತ್ತಮ ಫಲಿತಾಂಶ ಗಳಿಸಿಕೊಡುವಲ್ಲಿ ಅವರು ಪಟ್ಟ ಶ್ರಮ ನಮ್ಮನ್ನು ಇಂತಹ ಉನ್ನತ ಹುದ್ದೆ ಅಲಂಕರಿಸಲು ಕಾರಣವಾಗಿದೆ. ಆ ಹಿಂದಿನ ನೆನಪುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಗುರುಗಳನ್ನು ಮತ್ತು ಸಿಬ್ಬಂದಿಯನ್ನು ಗೌರವಿಸಿದಾಗ ಮಾತ್ರ ನಮ್ಮಂತಹ ಶಿಷ್ಯಂದಿರ ಜನ್ಮ ಪಾವನ ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಹಕಾರ ನೀಡಿದ ನನ್ನೆಲ್ಲ ಸ್ನೇಹಿತರಿಗೂ ಚಿರಋಣಿ ಎಂದರು. ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪ್ರಾಂಶುಪಾಲ ಮಲ್ಲಪ್ಪ ಗದ್ಯಾಳ್ ಮಾತನಾಡಿ, ಮಕ್ಕಳು ಎಲ್ಲ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಕಡಿಮೆ ಇತ್ತು. ಈಗ ತಂತ್ರಜ್ಞಾನ ಮುಂದುವರಿದಿದೆ. ಸರ್ಕಾರ ಶಿಕ್ಷಣಕ್ಕೆ ಎಲ್ಲ ಪ್ರೋತ್ಸಾಹ ನೀಡುತ್ತಿದೆ. ಉನ್ನತ ಶಿಕ್ಷಣ ಪಡೆಯಲು ಅವಕಾಶಗಳು ಹೆಚ್ಚಾಗಿದೆ. ಸಿಕ್ಕ ಅವಕಾಶಗಳನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಂಡು ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ಮುಂದೆ ಬರಬೇಕು. ಕಷ್ಟಪಟ್ಟು ಶಿಕ್ಷಣ ನೀಡಿದ ತಂದೆ-ತಾಯಿಗಳಿಗೆ ಕೀರ್ತಿ ತರಬೇಕು. ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆದ ಅನೇಕ ಮಕ್ಕಳು ಇಂದು ಉನ್ನತ ಸ್ಥಾನ ತಲುಪಿಸಿದ್ದಾರೆ ಎಂದರು.ಸಿಂಗಟಗೆರೆ ಎಂ.ಡಿ.ಆರ್.ಎಸ್. ಪ್ರಾಂಶುಪಾಲ ಬಿ.ಸಿ.ರಮೇಶ್ ಮಾತನಾಡಿ, ಸರ್ಕಾರಿ ವಸತಿ ಶಾಲೆಗಳು ಉತ್ತಮ ಗುಣ ಮಟ್ಟದ ಶಿಕ್ಷಣ ನೀಡುತ್ತಿವೆ. ಮೊರಾರ್ಜಿ ಶಾಲೆ ಕಳೆದ ಹಲವು ವರ್ಷದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೇ ಈ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ವಿಶೇಷ ಸ್ಥಾನಮಾನ ಸಿಕ್ಕಿದ್ದು, ಶಿಕ್ಷಣದ ಜೊತೆಗೆ ಸಂಸ್ಕಾರ ಸಹ ಕಲಿಸುತ್ತಿದೆ. ಶಿಕ್ಷಣ, ಊಟದ ವ್ಯವಸ್ಥೆ, ಪತ್ಯೇತರ ಚಟುವಟಿಕೆ ಜೊತೆ ಶಾಲೆ ಸಹ ಉತ್ತಮವಾಗಿ ಇಟ್ಟುಕೊಂಡಿರುವುದು ಶ್ಲಾಘನೀಯ.ಇದು ಎಲ್ಲಾ ವಸತಿ ಶಾಲೆ ಶಿಕ್ಷಕರಿಗೆ ಮಾದ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲೆ ಪ್ರಾಂಶುಪಾಲ ಕೆ.ಎಚ್.ಗಿರೀಶ್ ಮಾತನಾಡಿ, ವಸತಿ ಶಾಲೆ ಮಕ್ಕಳನ್ನು ಉನ್ನತ ಸ್ಥಾನದಲ್ಲಿ ನೋಡಬೇಕೆನ್ನುವ ಬಯಕೆ ಇಲ್ಲಿನ ಶಿಕ್ಷಕರದಾಗಿದೆ. ಅಂತಹ ಕೆಲಸಗಳು ನಿರಂತರವಾಗಿ ಈ ಶಾಲೆಯಲ್ಲಿ ನಡೆಯುತ್ತಿದ್ದು, ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಎಲ್ಲಾ ಪೋಷಕರ ಸಹಕಾರ ಶಾಲೆ ಉನ್ನತಿಗೆ ಕಾರಣ ಎಂದರು.ಈ ವಸತಿ ನಿಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ ಮಂಜಾನಾಯ್ಕ, ಗಜೇಂದ್ರ ಮೂರ್ತಿ, ಶೈಲಾ, ಮಾತನಾಡಿದರು. ಹಳೆಯ ವಿದ್ಯಾರ್ಥಿಗಳ ಸಂಘದ ಯಶವಂತ್, ಆಕಾಶ್, ಪಾಟೀಲ್, ಸುಮಾ, ಸೌಂದರ್ಯ, ಯುವ ಸ್ಪೂರ್ತಿ ಅಕಾಡೆಮಿಯ ಅಧ್ಯಕ್ಷ ಸಿ.ಬಿ,ಸುಂದ್ರೇಶ್, ಪೋಷಕರಾದ ಕಡೂರಹಳ್ಳಿ ಪ್ರಶಾಂತ್, ಬೀರೂರು ಎನ್.ಗಿರೀಶ್, ನಿಲಯಪಾಲಕ ಹೊನ್ನಪ್ಪ, ಶಿಕ್ಷಕರಾದ ಎಚ್.ಓ ಮಂಜು, ವೀಣಾ, ರಾಘವೇಂದ್ರ, ಗಂಗಾಧರ್ ನಾಯ್ಕ, ಶ್ರೀಗಂಧ, ಕೆಂಚಪ್ಪ, ಅನಂತ ಕುಮಾರ್, ಉಷಾ, ಶಿಲ್ಪಾ, ಲತಾ ಸೀನಪ್ಪ , ಶ್ರೀನಿವಾಸ್ ಸೇರಿದಂತೆ ಎಲ್ಲ ಪೋಷಕರು ಉಪಸ್ಥಿತರಿದ್ದರು.
-- ಬಾಕ್ಸ್ ಸುದ್ದಿ--: ಹಳೆಯ ವಿದ್ಯಾರ್ಥಿ ಸಂಘದಿಂದ ನೆರವು: ಉದರ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಪ್ರಸ್ತುತ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಧನಲಕ್ಷೀ ಚಿಕಿತ್ಸೆಗೆ ಹಳೇ ವಿದ್ಯಾರ್ಥಿಗಳ ಸಂಘದಿಂದ 10 ಸಾವಿರ ನೆರವು ನೀಡಲಾಯಿತು.12ಕೆಕೆಡಿಯು2.ಕಡೂರು ತಾಲೂಕಿನ ಜೋಡಿಹೋಚಿಹಳ್ಳಿ ಮೊರಾರ್ಜಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ದಶಮಾನೋತ್ಸವದ ಸಂಭ್ರಮ ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ಶಿಕ್ಷಕರು, ಸಿಬ್ಬಂದಿ ಭಾಗವಹಿಸಿದ್ದರು.