ಮಕ್ಕಳಿಗೆ ಸಂಸ್ಕಾರ ನೀಡುವುದು ಪೋಷಕರ ಹೊಣೆ

| Published : Jan 11 2025, 12:46 AM IST

ಮಕ್ಕಳಿಗೆ ಸಂಸ್ಕಾರ ನೀಡುವುದು ಪೋಷಕರ ಹೊಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ತಪ್ಪು ಮಾಡಿದಾಗ ಪೋಷಕರು ಶಿಕ್ಷಿಸಿದರೆ ಮುಂದೆ ಆ ಮಕ್ಕಳು ತಪ್ಪು ಮಾಡಲು ಹೆದರುತ್ತಾರೆ. ಎಲ್ಲಾ ಮಕ್ಕಳಿಗೂ ಸಂಸ್ಕಾರ ಜನ್ಮದಿಂದಲೇ ಮನಸ್ಸಿನಲ್ಲೇ ಇರುತ್ತದೆ. ಅದಕ್ಕೆ ಪೋಷಕರು ನೀರೆರೆದು ಬೆಳಸಿ ಪೋಷಿಸಿದಾಗ ಸಮಾಜ ಮತ್ತು ದೇಶಕ್ಕೆ ಗೌರವ ತರುತ್ತಾರೆ. ಶಾಲೆಯಲ್ಲಿ ಮಕ್ಕಳಿಗೆ ಪಠ್ಯದ ವಿದ್ಯಾಭ್ಯಾಸ ಮಾತ್ರ ನೀಡಲಾಗುತ್ತದೆ. ಆದರೆ ಪೋಷಕರು ಸಂಸ್ಕಾರ ಕಲಿಸಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಕ್ಕಳಿಗೆ ಶಾಲೆಗಳು ಶಾಸ್ತ್ರೋಕ್ತವಾಗಿ ವಿದ್ಯೆ ಕಲಿಸಬಹುದು. ಆದರೆ ಸಂಸ್ಕಾರ ಮತ್ತು ಜೀವನ ಮೌಲ್ಯವನ್ನು ಪೋಷಕರು ಕಲಿಸಬೇಕು. ಮಗುವನ್ನು ಶಾಲೆಗೆ ಕಳುಹಿಸಿದರೆ ಮಗು ಶಾಲೆಯಲ್ಲಿ ಎಲ್ಲಾ ಕಲಿಯುತ್ತದೆ ಎಂಬ ತಪ್ಪು ಗ್ರಹಿಕೆ ಪೋಷಕರಲ್ಲಿದೆ. ಉತ್ತಮ ಶಾಲೆ ಎಷ್ಟು ಮುಖ್ಯವೋ ಉತ್ತಮ ಪೋಷಕರು ಅಷ್ಟೇ ಮುಖ್ಯ ಎಂದು ಕೆವಿ ಮತ್ತು ಪಂಚಗಿರಿ ಶಿಕ್ಷಣದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಹೇಳಿದರು.

ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರ ಅತಿಯಾದ ಪ್ರೀತಿಯಿಂದ ಮಕ್ಕಳು ಹಾದಿ ತಪ್ಪುತ್ತಾರೆ. ಮಗುವಿಗೆ ಕನಿಷ್ಟ 18 ವರ್ಷಗಳಾಗುವವರೆಗೂ ಪೋಷಕರು ಮಕ್ಕಳ ಮೇಲೆ ನಿಗಾವಹಿಸಿ ತಪ್ಪು ದಾರಿ ಹಿಡಿಯದಂತೆ ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳ ಮುಂದೆ ಜಗಳ ಬೇಡ

ಮಕ್ಕಳ ಮನಸ್ಸು ತುಂಬಾ ಸೂಕ್ಮವಾಗಿರುತ್ತದೆ. ಪೋಷಕರು ಎನು ಮಾಡುತ್ತಾರೋ ಅದು ಮಕ್ಕಳ ಮನಸ್ಸಿಗೆ ನಾಟುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಮುಂದೆ ಜಗಳ, ಮುನಿಸು, ಬೈಗುಳಗಳಂತಹುದನ್ನು ಮಾಡಬೇಡಿ, ಮಾಡಿದರೆ ನಿಮ್ಮ ಮಗು ನಾಳೆ ಅದನ್ನೆ ಮಾಡುತ್ತದೆ. ಹಾಗೇನಾದರೂ ಮಾಡುವುದಿದ್ದರೆ ಮಕ್ಕಳಿಲ್ಲದಾಗ ನೀವಿಬ್ಬರೆ ಇದ್ದಾಗ ಮಾಡಿಕೊಳ್ಳಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಮಕ್ಕಳು ತಪ್ಪು ಮಾಡಿದಾಗ ಪೋಷಕರು ಶಿಕ್ಷಿಸಿದರೆ ಮುಂದೆ ಆ ಮಕ್ಕಳು ತಪ್ಪು ಮಾಡಲು ಹೆದರುತ್ತಾರೆ. ಎಲ್ಲಾ ಮಕ್ಕಳಿಗೂ ಸಂಸ್ಕಾರ ಜನ್ಮದಿಂದಲೇ ಮನಸ್ಸಿನಲ್ಲೇ ಇರುತ್ತದೆ. ಅದಕ್ಕೆ ಪೋಷಕರು ನೀರೆರೆದು ಬೆಳಸಿ ಪೋಷಿಸಿದಾಗ ಸಮಾಜ ಮತ್ತು ದೇಶಕ್ಕೆ ಗೌರವ ತರುತ್ತಾರೆ. ಶಾಲೆಯಲ್ಲಿ ಮಕ್ಕಳಿಗೆ ಪಠ್ಯದ ವಿದ್ಯಾಭ್ಯಾಸ ಮಾತ್ರ ನೀಡಲಾಗುತ್ತದೆ. ಆದರೆ ಪೋಷಕರು ನಿಮ್ಮ ಸಂಪ್ರದಾಯ, ಸಂಸ್ಕಾರ ಆಚರಣೆಗಳನ್ನು ಕಲಿಸುವುದರೊಂದಿಗೆ ನಾಡು-ನುಡಿಗೆ, ಗುರು-ಹಿರಿಯರಿಗೆ, ಪೋಷಕರಿಗೆ ಗೌರವ ನೀಡುವುದನ್ನು ಕಲಿಸ ಬೇಕು ಎಂದು ತಿಳಿಸಿದರು.

ಸಮಸ್ಯೆ ಪರಿಹರಿಸಲು ಜ್ಞಾನ ಅಗತ್ಯ

ವಿದ್ಯೆ ಕಲಿಸೋ ಗುರುಗಳ ಪ್ರೀತಿ ಗೌರವ ದಿಂದ ನೋಡಿ, ಮನಸ್ಸಿನಲ್ಲಿ ಅವರಿಗೆ ಗೌರವಯುತ ಸ್ಥಾನ ಕಲ್ಪಿಸಿ ಆಗ ವಿದ್ಯೆ ತಲೆಗೆ ಹತ್ತುತ್ತದೆ. ಈ ವಿದ್ಯೆಮುಂದೆ ಜೀವನದಲ್ಲಿ ದಾರಿ ದೀಪ ವಾಗುತ್ತದೆ. ಜ್ಞಾನವಿರುವಲ್ಲಿ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಪರಿಹಾರ ಕಂಡು ಕೊಂಡು ಜೀವನ ಸಾರ್ಥಕತೆ ಹೊಂದಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ಮಾತನಾಡಿ, ವಿದ್ಯೆಯೊಂದಿಗೆ ಗುರು ಹಿರಿಯರ ಮತ್ತು ಪೋಷಕರ ಆರ್ಶೀವಾದ ಇದ್ದರೆ ವಿಶ್ವವನ್ನೇ ಗೆದ್ದಂತೆ.ವಿದ್ಯಾರ್ಥಿಗಳು ಪಠ್ಯ ಜ್ಞಾನದ ಜತೆಗೆ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ವಿಶೇಷವಾಗಿ ಸಭಾ ಮರ್ಯಾದೆಯನ್ನು ಪಾಲಿಸುವ ಗುಣವನ್ನು ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಮಾತೃಭಾಷೆ ಕಡೆಗಣಿಸಬೇಡಿ

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಶ್ ಮಾತನಾಡಿ, ಮಾತೃಭಾಷ ಶಿಕ್ಷಣದ ಜೊತೆಗೆ ಆಂಗ್ಲ ಭಾಷೆಯು ನಮಗೆ ಅವಶ್ಯಕತೆ ಇದೆ. ಹಾಗೆಂದು ಮಾತೃಬಾಷೆಯನ್ನು ಕಡೆಗಣಿಸಬೇಡಿ ಎಂದರು.

ಕಾರ್ಯಕ್ರಮದಲ್ಲಿ ದತ್ತಿ ಸದಸ್ಯರಾದ ಬಿ.ಮುನಿಯಪ್ಪ, ವಿಜಯಲಕ್ಷ್ಮಿ, ಆಡಳಿತಾಧಿಕಾರಿ ಡಾ. ಸಾಯಿಪ್ರಭು, ಮುಖ್ಯ ಶಿಕ್ಷಕ ನಾರಾಯಣಸ್ವಾಮಿ,ಸಾಂ. ಸ. ಅಧ್ಯಕ್ಷ ಮಹಾಂತೇಶ್, ಶ್ರೀನಿವಾಸ್, ಪೋಷಕ ವರ್ಗ,ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಮತ್ತಿತರರು ಇದ್ದರು.