ಸಾರಾಂಶ
ದೇಶಕ್ಕೆ ಸುಗಮ ಆಡಳಿತ ವ್ಯವಸ್ಥೆ ನೀಡುವುದು ಹಾಗೂ ಕಾನೂನುಗಳನ್ನು ರೂಪಿಸುವ ಗುರುತರವಾದ ಜವಾಬ್ದಾರಿ ನಮ್ಮ ಸಂಸತ್ತಿಗೆ ಇದೆ.
ನೆರೆ ಹೊರೆ ಯುವ ಸಂಸತ್-2024 ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುದೇಶಕ್ಕೆ ಸುಗಮ ಆಡಳಿತ ವ್ಯವಸ್ಥೆ ನೀಡುವುದು ಹಾಗೂ ಕಾನೂನುಗಳನ್ನು ರೂಪಿಸುವ ಗುರುತರವಾದ ಜವಾಬ್ದಾರಿ ನಮ್ಮ ಸಂಸತ್ತಿಗೆ ಇದೆ ಎಂದು ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಭಾಸ ಸಾವಕಾರ ಹೇಳಿದರು.
ನಗರದ ಆರ್‌ಟಿಇಎಸ್ ಕಲಾ, ವಿಜ್ಞಾನ, ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಆರ್‌ಟಿಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ, ಕಾನೂನು ಪದವಿ ಮಹಾವಿದ್ಯಾಲಯ ಪದವಿ ಮಹಾವಿದ್ಯಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಾವೇರಿ ನೆಹರು ಯುವ ಕೇಂದ್ರ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಐಕ್ಯೂಎಸಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೆರೆ ಹೊರೆ ಯುವ ಸಂಸತ್-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸೀತಾ ಕೋಟಿ ಮಹಿಳಾ ಸಬಲೀಕರಣ ಹಾಗೂ ನಾರಿ ಶಕ್ತಿ ಯೋಜನೆಯ ಮಹತ್ವ ಹಾಗೂ ಸ್ತ್ರೀ ಮೀಸಲಾತಿ ಕುರಿತು ಮಾತನಾಡಿದರು.
ಮೈ ಭಾರತ್ ಪೋರ್ಟಲ್ ನೋಂದಣಿ ಬಗ್ಗೆ ಹಾವೇರಿ ನೆಹರು ಯುವ ಕೇಂದ್ರದ ನಿರ್ದೇಶಕಿ ಲತಾ ಬಿ.ಎಚ್. ಮಾಹಿತಿ ನೀಡಿದರು.ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಭುಕ್ಯಾ ಸಂಜೀವ ಮಾತನಾಡಿದರು.
ಜೀವನ ಕೌಶಲ್ಯ ಹಾಗೂ ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ರಮೇಶ ಬಡಿಗೇರ ಮಾತನಾಡಿದರು.2047 ನನ್ನ ಕನಸಿನ ಭಾರತ ಹಾಗೂ ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆ ಕುರಿತು ಡಾ. ಸರಸ್ವತಿ ಬಮ್ಮನಾಳ ಉಪನ್ಯಾಸ ನೀಡಿದರು. ಪ್ರಾಚಾರ್ಯ ಸಿ.ಎ. ಹರಿಹರ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ನೆಹರು ಯುವ ಕೇಂದ್ರದ ಸಿಬ್ಬಂದಿ ಹೇಮಗಿರಿ ಅಂಗಡಿ ಬಹುಮಾನ ವಿತರಿಸಿದರು ಹಾಗೂ ಮಹಾವಿದ್ಯಾಲಯಕ್ಕೆ ಕ್ರೀಡಾ ಸಲಕರಣೆ ನೀಡಿದರು.ದೀಪಾ ಕೆ.ವಿ., ಡಾ. ಪಿ.ಬಿ. ಕೊಪ್ಪದ, ಡಾ. ಮಧುಕುಮಾರ ಆರ್., ಅಂಜನಾ ಪವಾರ, ರೇಖಾ ಜಾಧವ ಹಾಗೂ ಪದವಿ, ಶಿಕ್ಷಣ, ಕಾನೂನು ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ನೆಹರು ಯುವ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.