ಸಾರಾಂಶ
ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವುದು ಶಿಕ್ಷಕರ ಹಾಗೂ ಸಂಘಟನೆಗಳ ಕರ್ತವ್ಯವಾಗಿದೆ. ಇದರಿಂದ ಸ್ವಸ್ಥ ಸಮಾಜ ನಿರ್ಮಾಣವಾಗಲು ಪ್ರೇರಣೆಯಾಗುತ್ತದೆ.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವುದು ಶಿಕ್ಷಕರ ಹಾಗೂ ಸಂಘಟನೆಗಳ ಕರ್ತವ್ಯವಾಗಿದೆ. ಇದರಿಂದ ಸ್ವಸ್ಥ ಸಮಾಜ ನಿರ್ಮಾಣವಾಗಲು ಪ್ರೇರಣೆಯಾಗುತ್ತದೆ ಎಂದು ನೌಕರರ ಸಂಘದ ತಾಲೂಕಾಧ್ಯಕ್ಷ, ರಾಜ್ಯ ಜಂಟಿ ಕಾರ್ಯದರ್ಶಿ ಸಂತೋಷ್ ನೀರೆಟಿ ಹೇಳಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಹೊಸದಾಗಿ ಆಗಮಿಸಿದ ನೌಕರ ಮತ್ತು ಶಿಕ್ಷಕರು, ನಿವೃತ್ತ ನೌಕರ ಹಾಗೂ ಪತ್ರಕರ್ತರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಂಘದ ನೌಕರರಿಗೆ ಬೆನ್ನೆಲುಬಾಗಿ ನಿಂತಿದೆ. ರಾಜ್ಯದಲ್ಲಿಯೇ ಗುರುಮಠಕಲ್ ಸಂಘ ಮಾದರಿಯಾಗಿದ್ದು, ವೃಂದ ಸಂಘಗಳ ಸಹಕಾರವು ಮುಖ್ಯವಾಗಿದೆ ಎಂದರು.
ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಸಂಘ-ಸಂಘಟನೆಗೆ ಕ್ರಿಯಾಶೀಲ ಅಧ್ಯಕ್ಷರ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಸಂತೋಷ ನಿರೇಟಿ ಸಾಕಷ್ಟು ಶ್ರಮಿಸಿದ್ದಾರೆ. ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಪ್ರೋತ್ಸಾಹ ನೀಡುತ್ತಿದೆ. ಅವಧಿ ಮುಖ್ಯವಲ್ಲ. ಇರುವ ಸಮಯ ಸದುಪಯೋಗ ಪಡಿಸಿಕೊಂಡು ಉತ್ತಮ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದರು.ನಾರಾಯಣ ರೆಡ್ಡಿ ಪೊಲೀಸ್ ಪಾಟೀಲ್ ಮತ್ತು ಮಲ್ಲಯ್ಯ ಸಂಜೀವಿನಿ ಮಾತನಾಡಿದರು. ಈ ವೇಳೆ ಪ್ರಾಚಾರ್ಯರ ಸಂಘದ ಅಧ್ಯಕ್ಷ ಸುದರ್ಶನರೆಡ್ಡಿ, ಶಿವರೆಡ್ಡಿ, ಹರಿಬಾಬು, ಶಿವರಾಜ ಸಾಕಾ, ಪ್ರಕಾಶ, ಸಿದ್ದಲಿಂಗಪ್ಪ ನೆಲ್ಲೋಗಿ, ಗಾಯತ್ರಿ ನಾಯ್ಕಿನ್, ವೆಂಕಟರಾಮುಲು, ಪತ್ರಕರ್ತರ ಸಂಘದ ಅಧ್ಯಕ್ಷ ಚನ್ನಕೇಶವುಲು ಗೌಡ ವೇದಿಕೆಯಲ್ಲಿದ್ದರು.
ಈ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಅಂಜನಾದೇವಿ ಪ್ರಾರ್ಥಿಸಿದರು. ಬಾಲರಾಜ ಸ್ವಾಗತಿಸಿದರು.