ಸಾರಾಂಶ
ಸಾಗರ: ಸ್ಥಳೀಯವಾಗಿ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಧಕರನ್ನು ಸನ್ಮಾನಿಸುವುದು ಸತ್ಸಂಪ್ರದಾಯ ಎಂದು ಹೊಸನಗರ ಕೊಡಚಾದ್ರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಪ್ರಭಾಕರ ರಾವ್ ಅಭಿಪ್ರಾಯಪಟ್ಟರು.
ಸಾಗರ: ಸ್ಥಳೀಯವಾಗಿ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಧಕರನ್ನು ಸನ್ಮಾನಿಸುವುದು ಸತ್ಸಂಪ್ರದಾಯ ಎಂದು ಹೊಸನಗರ ಕೊಡಚಾದ್ರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಪ್ರಭಾಕರ ರಾವ್ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ತಾಲೂಕು ಮಟ್ಟದ ೧೨ನೇ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರ ಕುರಿತು ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ೧೦ ಸಾಧಕರನ್ನು ಸನ್ಮಾನಿಸುವ ಮೂಲಕ ಅವರ ಪ್ರತಿಭೆಗೆ ಪುರಸ್ಕಾರ ನೀಡಿರುವುದು ಸಂತೋಷ ತಂದಿದೆ ಎಂದರು.ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯನಿಗೆ ತೀರ ಅಗತ್ಯ. ಇವೆಲ್ಲವೂ ಮನುಷ್ಯನನ್ನು ಕ್ರಿಯಾಶೀಲಗೊಳಿಸುತ್ತದೆ. ಸಾಹಿತ್ಯ ಸಮ್ಮೇಳನ ಸ್ಥಳೀಯವಾಗಿ ನಡೆಯುವುದರಿಂದ ಸ್ಥಳೀಯ ಇತಿಹಾಸ, ಸಾಹಿತ್ಯ, ಸಾಧಕರ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಸಾಗರ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಮಾತನಾಡಿ, ನಮ್ಮ ನಡುವೆ ಸಾಧನೆ ಮಾಡಿದವರು ಅನೇಕರು ಇರುತ್ತಾರೆ. ಆದರೆ ಅವರು ಎಲೆಮರೆಯ ಕಾಯಿಯಂತೆ ಇದ್ದು ತಮ್ಮಷ್ಟಕ್ಕೆ ತಾವು ಕೆಲಸದಲ್ಲಿ ನಿರತರಾಗಿರುತ್ತಾರೆ. ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲ ಕ್ಷೇತ್ರವೂ ಅಗತ್ಯ. ಸಾಹಿತ್ಯ ಪರಿಷತ್ ಪ್ರತಿ ವರ್ಷ ಎಲ್ಲಾ ಕ್ಷೇತ್ರದವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಗಮನಾರ್ಹ ಸಂಗತಿ ಎಂದರು. ಇದೇ ವೇಳೆ ರೇವಣ ಸಿದ್ದಪ್ಪ (ಶ್ರಮಜೀವಿ), ಕುಮಾರ ಶೆಟ್ಟಿ (ಕೃಷಿ), ಸುಭಾಷ್ ಕೌತಳ್ಳಿ (ಸಮಾಜ ಸೇವೆ), ಮಹಾಬಲೇಶ್ವರ ಗೌಡ (ಸಾಂಸ್ಕೃತಿಕ), ಸೀತಾರಾಮ ಹಾರೆಗೊಪ್ಪ (ಕಲೆ), ಸುಭಾಷ್ಚಂದ್ರ ತೇಜಸ್ವಿ (ಮಾಜಿ ಯೋಧ), ಮರಿಯಾ ಲೀಮಾ (ಮಹಿಳಾ ಕ್ಷೇತ್ರ), ಡಾ.ರಾಮಪ್ಪ (ಜಾನಪದ), ಕೆ.ಸಿ.ದೇವಪ್ಪ (ಸಹಕಾರ), ಎಚ್.ಜಿ.ಸುಬ್ರಹ್ಮಣ್ಯ ಭಟ್ (ಕ್ರೀಡೆ) ಅವರನ್ನು ಸನ್ಮಾನಿಸಲಾಯಿತು.ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಸಮ್ಮೇಳನದ ಸರ್ವಾಧ್ಯಕ್ಷ ಅ.ರಾ.ಶ್ರೀನಿವಾಸ್, ಪ್ರಮುಖರಾದ ಎಸ್.ಬಿ.ಮಹಾದೇವ್, ಈಳಿ ಶ್ರೀಧರ್, ಎಲ್.ಚಂದ್ರಪ್ಪ, ಕೆ.ಸಿದ್ದಪ್ಪ, ಮಧುಮಾಲತಿ, ವೈ.ಮೋಹನ್, ಜಿ.ನಾಗೇಶ್, ಪ್ರಸನ್ನ ಕೆ.ಬಿ. ವೆಂಕಟೇಶ್ ಚಂದಳ್ಳಿ, ಅಭಿಜ್ಞ ಹಾಜರಿದ್ದರು. ಲೋಕೇಶ್ ಕುಮಾರ್ ಸ್ವಾಗತಿಸಿದರು. ಶಿವಯೋಗಿ ಜಿ.ಎಚ್.ವಂದಿಸಿದರು. ಡಾ.ಅನ್ನಪೂರ್ಣ ನಿರೂಪಿಸಿದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಅ.ರಾ.ಶ್ರೀನಿವಾಸ್ ಅವರನ್ನು ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಸನ್ಮಾನಿಸಿದರು. ಡಾ.ಸರ್ಫ್ರಾಜ್ ಚಂದ್ರಗುತ್ತಿ ಸಮಾರೋಪ ಮಾತನಾಡಿದರು. ಪರಿಷತ್ ಗೌರವ ಕಾರ್ಯದರ್ಶಿ ನಾರಾಯಣಮೂರ್ತಿ, ಡಾ.ಪ್ರಸನ್ನ ಇನ್ನಿತರರು ಹಾಜರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.