ಮನುಷ್ಯನಲ್ಲಿ ಅಂಗವೈಕಲ್ಯತೆ ಸೃಷ್ಟಿಗೆ ಹತ್ತು ಹಲವು ಕಾರಣಗಳಿವೆ. ಅದರಲ್ಲಿ ಪಾಪಕರ್ಮಗಳ ಫಲವೆಂಬುದನ್ನು ಸರ್ವತಾ ಒಪ್ಪಲು ಸಾಧ್ಯವಿಲ್ಲ. ಇದರಲ್ಲಿ ವೈಜ್ಞಾನಿಕ ಚಿಂತನೆಗಳು ಅವಶ್ಯಕತೆಯಿದೆ ಎಂದು ಪಂಚ ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅಭಿಪ್ರಾಯಪಟ್ಟರು.
ಬ್ಯಾಡಗಿ: ಮನುಷ್ಯನಲ್ಲಿ ಅಂಗವೈಕಲ್ಯತೆ ಸೃಷ್ಟಿಗೆ ಹತ್ತು ಹಲವು ಕಾರಣಗಳಿವೆ. ಅದರಲ್ಲಿ ಪಾಪಕರ್ಮಗಳ ಫಲವೆಂಬುದನ್ನು ಸರ್ವತಾ ಒಪ್ಪಲು ಸಾಧ್ಯವಿಲ್ಲ. ಇದರಲ್ಲಿ ವೈಜ್ಞಾನಿಕ ಚಿಂತನೆಗಳು ಅವಶ್ಯಕತೆಯಿದೆ ಎಂದು ಪಂಚ ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅಭಿಪ್ರಾಯಪಟ್ಟರು.
ಶುಕ್ರವಾರ ಪಟ್ಟಣದ ತಾಲೂಕು ಶಾಸಕರ ಮಾದರಿ ಬಡಾವಣೆ ಶಾಲೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ರೋಟರಿ ಸಂಸ್ಥೆ ಇವರ ಸಹಯೋಗದಲ್ಲಿ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ವೈದ್ಯಕೀಯ ಮೌಲ್ಯಾಂಕನ ಹಾಗೂ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಸಂಬಂಧಿಕರಲ್ಲಿಯೇ ನಡೆಯುವ ಮದುವೆಗಳನ್ನು ನಿಲ್ಲಿಸಿ: ಇತ್ತೀಚಿನ ಸಂಶೋಧನೆಗಳ ಪ್ರಕಾರ, ಅಪಘಾತ ಇನ್ನಿತರರ ಕಾರಣಗಳಿಂದ ಉಂಟಾಗುವ ಅಂಗವೈಕಲ್ಯದ ಪ್ರಮಾಣಕ್ಕಿಂದ ಮಗು ಹುಟ್ಟುತ್ತಲೇ ಅಂಗವೈಕಲ್ಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಷ್ಟಕ್ಕೂ ರಕ್ತ ಸಂಬಂಧಗಳಲ್ಲಿ ಮದುವೆ ಮಾಡುವುದರಿಂದ ಮಕ್ಕಳಲ್ಲಿ ಅಂಗವೈಕಲ್ಯ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಕೂಡಲೇ ಸಂಬಂಧಿಗಳಲ್ಲೇ ಮತ್ತೆ ಮತ್ತೆ ಮದುವೆಯಾಗುವುದನ್ನು ತಡೆಗಟ್ಟಿದಲ್ಲಿ ಅಂಗವೈಕಲ್ಯದ ಪ್ರಮಾಣ ತಗ್ಗಿಸಲು ಸಾಧ್ಯವಿದೆ ಎಂದರು.
ವಿಶೇಷ ಚೇತನ ಮಕ್ಕಳಿಗೆ ರೋಟರಿಯಿಂದ ಸಹಕಾರ: ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಮಂಜುನಾಥ ಉಪ್ಪಾರ ಮಾತನಾಡಿ, ಹಿಂದಿನಿಂದಲೂ ಸಂಸ್ಥೆಯು ವಿಶೇಷಚೇತನ ಮಕ್ಕಳಿಗೆ ನಿರಂತರವಾಗಿ ಸಹಕಾರ ನೀಡುತ್ತಿದ್ದು ವೀಲಚೇರ್ ಸೇರಿದಂತೆ ವಿವಿಧ ಪರಿಕರಗಳನ್ನ ನೀಡುತ್ತಾ ಬಂದಿದೆ. ಮುಂದೆಯೂ ಸಹ ಇಂತಹ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ, ಜಿಲ್ಲೆಯಲ್ಲಿ ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ನೀಡುವಲ್ಲಿ ಬ್ಯಾಡಗಿ ತಾಲೂಕು ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಸಹಕಾರದಿಂದಾಗಿ ಇದು ಸಾಧ್ಯವಾಗಿದ್ದು, ಇವರ ಸಾಧನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವು ಮುಕ್ತವಾಗಿ ಸ್ವಾಗತಿಸುತ್ತದೆ ಎಂದರು.
ವೇದಿಕೆಯಲ್ಲಿ ತಾಪಂ ಇಒ ಮಲ್ಲಿಕಾರ್ಜುನ ಕೆ.ಎಂ., ಆರ್.ಎಂ.ಎಸ್.ಎ. ಡಿಒಪಿಸಿ ನಿರಂಜನ ಮೂರ್ತಿ, ಅಂಕಿತ, ಪೂರ್ಣಿಮಾ, ಮುಖ್ಯ ಶಿಕ್ಷಕಿ ರಾಜಶ್ರೀ ಸಜ್ಜೇಶ್ವರ, ತಾಲೂಕು ಆರೋಗ್ಯಾಧಿಕಾರಿ ಕಾಂತೇಶ ಭಜಂತ್ರಿ, ಮುಖ್ಯಾಧಿಕಾರಿ ವಿನಯಕುಮಾರ, ರೋಟರಿ ಸಂಸ್ಥೆ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ, ಕಿರಣ ಮಾಳೇನಹಳ್ಳಿ, ನಿರಂಜನ ಶೆಟ್ಟಿಹಳ್ಳಿ, ಆನಂದಗೌಡ ಸೊರಟೂರ, ರಮೇಶ ಕಲ್ಯಾಣಿ, ಪವಾಡೆಪ್ಪ ಆಚನೂರ, ವಿಶ್ವನಾಥ ಅಂಕಲಕೋಟಿ, ಪ್ರಕಾಶ ಛತ್ರದ, ಶಂಭು ಹಾವೇರಿ, ಚಂದ್ರು ತರೇದಹಳ್ಳಿ, ಚಂದ್ರು ಮೂಲಂಗಿ, ಯಶವಂತ, ಆಶಾ ಕಾಟೇನಹಳ್ಳಿ, ಕೃಷ್ಣ ದಾಮೋದರ ಕೆ.ಎನ್. ಗೆಜ್ಜಿ, ಜಿ.ಎನ್.ಬಡ್ಡಿ. ಎಂ.ಎಫ್. ಕರಿಯಣ್ಣನವನರ. ಎಸ್.ಯು.ಮಾಸ್ತಿ, ಜಿ.ಬಿ.ಬೂದಿಹಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್.ಹುಲ್ಯಾಳ ಸ್ವಾಗತಿಸಿದರು. ಐಇಆರ್‌ಟಿ ಬಿ.ಸುಭಾಷ ನಿರೂಪಿಸಿದರು. ತಿಮ್ಮನಗೌಡ್ರ ವಂದಿಸಿದರು.