ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ವಕೀಲ ಶೂ ಎಸೆದು ಅವಮಾನ ಮಾಡಿಸುವುದು ಖಂಡನೆಯಾಗಿದೆ. ಸರ್ಕಾರ ಕೂಡಲೇ ಈತನ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಛಲವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಸವರಾಜ್ ಒತ್ತಾಯಿಸಿದರು.ಪಟ್ಟಣದ ಲೋಕೋಪಯೋಗಿ ಇಲಾಖೆ, ವಸತಿ ಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶರಾದ ಸಿಜೆ ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದು ಅಪಮಾನ ಮಾಡಿರುವ ಆತನಿಗೆ ಸರಿಯಾದ ಶಿಕ್ಷೆ ನೀಡಲು ಸರ್ಕಾರ ಕೇಂದ್ರ ಸರ್ಕಾರ ಮುಂದಾಗಬೇಕು. ನ್ಯಾಯಮೂರ್ತಿಗಳಿಗೆ ಇಂತಹ ಸ್ಥಿತಿ ಬಂದರೆ ಜನಸಾಮಾನ್ಯರ ಗತಿ ಏನು? ಹೀಗಾಗಿ ಇದನ್ನು ತೀವ್ರವಾಗಿ ಸಂಘಟನೆ ಖಂಡಿಸುತ್ತದೆ ಎಂದು ತಿಳಿಸಿದರು.ಚಲವಾದಿ ಮಹಾಸಭಾ ಅಧ್ಯಕ್ಷರಾಗಿದ್ದ ಐಎಎಸ್ ಶಿವರಾಂ ಅವರ ಸಂಘಟನೆಯ ಅಧ್ಯಕ್ಷರಾಗಿ ಹಾಗೂ ಕನ್ನಡದಲ್ಲಿ ಪ್ರಥಮ ಬಾರಿಗೆ ಐಎಎಸ್ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಚಲನಚಿತ್ರದಲ್ಲೂ ಸಹ ನಟಿಸುವ ಮೂಲಕ ಜನಸಾಮಾನ್ಯರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉತ್ತಮ ಸೇವೆ ಸಲ್ಲಿಸಿರುವ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಬೇಕು ಎಂದರು.
ಭವನಗಳ ನಿರ್ಮಾಣಕ್ಕೆ ಜಮೀನು ನೀಡಬೇಕು: ಹನೂರು ತಾಲೂಕಿನ ಈ ಹಿಂದೆ ಇದ್ದ ದಂಡಾಧಿಕಾರಿ ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಿ ಸರ್ಕಾರದಿಂದ ಜಮೀನು ಚಲವಾದಿ ಮಹಾಸಭಾ ಭವನ ನಿರ್ಮಾಣ ಮಾಡಲು ಮನವಿ ನೀಡಲಾಗಿತ್ತು. ಹೀಗಾಗಿ ಆ ಸಂದರ್ಭದಲ್ಲಿ ಮನವಿಯನ್ನು ಪುರಸ್ಕರಿಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲು ಕ್ರಮ ವಹಿಸಿರುವ ಸಂದರ್ಭದಲ್ಲಿ ವರ್ಗಾವಣೆಯಾಗಿದ್ದಾರೆ. ಇತ್ತೀಚೆಗೆ ಬಂದಿರುವ ತಾಲೂಕು ದಂಡಾಧಿಕಾರಿ ಚೈತ್ರ ಅವರು ಮಹಾಸಭಾ ಘಟಕದ ಭವನ ನಿರ್ಮಾಣ ಮಾಡಲು ಜಮೀನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಜಿಲ್ಲಾಡಳಿತ ಇತ್ತ ಗಮನಹರಿಸಿ ಕೂಡಲೇ ಅಧಿಕಾರಿಗೆ ಸೂಚನೆ ನೀಡಿ ಛಲವಾದಿ ಮಹಾಸಭಾ ಭವನ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಕ್ರಮವಹಿಸಬೇಕು. ಇಲ್ಲದಿದ್ದರೆ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ದಲಿತರ ಜಮೀನು ಅರಣ್ಯ ಇಲಾಖೆ ವಶಕ್ಕೆ ಬಿಡಲು ಒತ್ತಾಯ:ತಾಲೂಕು ಕೇಂದ್ರವಾದ ಹನೂರು ಪಟ್ಟಣದ ಎತ್ತಿನ ಗುಡ್ಡ ಮಲೆ ಮಾದೇಶ್ವರ ವನ್ಯಧಾಮ ಅರಣ್ಯದಂಚಿನಲ್ಲಿ ಈ ಹಿಂದೆ ಅರಣ್ಯಾಧಿಕಾರಿಗಳು ಸರ್ಕಾರ ಮಂಜೂರು ಮಾಡಿರುವ ದಲಿತರ ಜಮೀನನ್ನು ಲೆಕ್ಕಿಸದೆ ರೈಲ್ವೆ ಬ್ಯಾರಿ ಗೇಟ್ ಅಳವಡಿಸಿದ್ದಾರೆ. ಸಂಬಂಧಪಟ್ಟ ಇಲಾಖೆಯಲ್ಲಿ ಅಧಿಕಾರಿಗಳು ಇತ್ತ ಗಮನ ಹರಿಸಿ ರೈತರಿಗೆ ಸೇರಬೇಕಾಗಿರುವ ಜಮೀನನ್ನು ಅಳತೆ ಮಾಡಿ ಕೂಡಲೇ ಜಮೀನು ರೈತರಿಗೆ ಬಿಡಬೇಕು ಎಂದು ತಿಳಿಸಿದರು.ತಾಲೂಕು ಘಟಕದ ಅಧ್ಯಕ್ಷ ಬಸವರಾಜ್ ಮಾತನಾಡಿ, ತಾಲೂಕಿನ ಜ್ವಲಂತ ಸಮಸ್ಯೆಗಳನ್ನು ಪರಿಹಾರ ನೀಡಲು ಸಂಬಂಧಪಟ್ಟ ಜನಪ್ರತಿನಿಧಿ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರಿಗೆ ಆಗಬೇಕಾಗಿರುವ ಕೆಲಸ ಕಾರ್ಯಗಳು ತುರ್ತಾಗಿ ಕಾರ್ಯನಿರ್ವಹಿಸಲು ಹಿರಿಯ ಅಧಿಕಾರಿಗಳು ಸ್ಥಳಮಟ್ಟದ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಸೂಚನೆ ನೀಡಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಶ್ರೀಕಂಠ ಮೂರ್ತಿ, ಮುಖಂಡರಾದ ನಿಂಗರಾಜು, ಅಂಕರಾಜು, ನಾಗಣ್ಣ, ಮಾದೇಶ, ಮಹೇಶ್, ಬಸವರಾಜ್, ಕೆಂಪರಾಜು, ಲೋಕೇಶ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.----------19ಸಿಎಚ್‌ಎನ್51
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ, ವಸತಿ ಗೃಹದಲ್ಲಿ ಛಲವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಸವರಾಜ್ ಅವರು ಸುದ್ದಿಗೋಷ್ಠಿ ನಡೆಸಿದರು.------------