ಸಾರಾಂಶ
ತರೀಕೆರೆ, ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದು ಸಂಸ್ಕಾರವನ್ನು ನೀಡುವುದು ಅತ್ಯಂತ ಮುಖ್ಯ ಎಂದು ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾ ಪ್ರಕಾಶ್ ಹೇಳಿದರು.
ತರೀಕೆರೆಯಲ್ಲಿ ಬೇಸಿಗೆ ಶಿಬಿರ ಸಂಭ್ರಮ-15 ಸಮಾರೋಪ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದು ಸಂಸ್ಕಾರವನ್ನು ನೀಡುವುದು ಅತ್ಯಂತ ಮುಖ್ಯ ಎಂದು ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾ ಪ್ರಕಾಶ್ ಹೇಳಿದರು.ಪ್ರಕೃತಿಶ್ರೀ ಕಲಾ ಕುಟೀರ ವತಿಯಿಂದ ವಿನಾಯಕ ನಗರದ ವಿನಾಯಕ ದೇವಸ್ಥಾನದಲ್ಲಿ ನಡೆದ ಬೇಸಿಗೆ ಶಿಬಿರ ಸಂಭ್ರಮ-15 ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗ ತಾಯಿ ತಂದೆಯರಿಬ್ಬರು ಕೆಲಸಕ್ಕೆ ಹೊರಗೆ ಹೋಗುವುದರಿಂದ, ಮಕ್ಕಳಿಗೆ ಧ್ಯಾನ, ಶ್ಲೋಕಗಳನ್ನು ಕಲಿಸುವುದು ಮುಂತಾದವೆಲ್ಲ ಮರೆಯುತ್ತಿದ್ದೇವೆ. ಇದು ಕೇವಲ ಮನೆಯವರದಲ್ಲದೆ ಸಮಾಜದ ಹೊಣೆಗಾರಿಕೆ ಇರುವುದರಿಂದ ಬೇಸಿಗೆ ಸಂಭ್ರಮದಲ್ಲಿ ಧ್ಯಾನ, ಲಘು ವ್ಯಾಯಾಮ, ಶ್ಲೋಕಗಳನ್ನು ಹೇಳಿಕೊಡುವ ಜೊತೆಗೆ, ಕಸದಿಂದ ರಸ ಮಾಡುವ ಕರಕುಶಲ ವಸ್ತುಗಳ ತಯಾರಿಕೆ , ಗಾಯನ, ನೃತ್ಯ ,ನಾಟಕ ಅಭಿನಯ , ಕಲೆಯ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಇನ್ನರ್ ವ್ಹೀಲ್ ಅಧ್ಯಕ್ಷೆ ಉಮಾ ದಯಾನಂದ್ ಮಾತನಾಡಿ ಶಿಬಿರದಲ್ಲಿ ಮಕ್ಕಳಿಗೆ ಗಿಡಮರಗಳ ಬಗ್ಗೆ ಆಸಕ್ತಿ ಮೂಡಿಸಲಾಗುತ್ತಿದೆ. ಪ್ರಕೃತಿಶ್ರೀ ಕಲಾ ಕುಟೀರದ ಬೇಸಿಗೆ ಸಂಭ್ರಮ-15 ರ ಕಾರ್ಯಚಟುವಟಿಕೆಗಳನ್ನು ನೋಡಿ ಶ್ಲಾಘಿಸಿದರು. ಶಾರದಾ ಅಶೋಕ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ 2005 ರಿಂದ ಬೇಸಿಗೆ ಸಂಭ್ರಮ ಇಂದಿನವರೆಗೂ ನಡೆಸಿಕೊಂಡು ಬರುತ್ತಿರುವುದು ಸಾಮಾನ್ಯ ವಿಚಾರವಲ್ಲ ಎಂದು ಪ್ರಶಂಸಿಸಿದರು. ಶಿಬಿರದಲ್ಲಿ ಕಲಿತ ಕರ ಕುಶಲ ವಸ್ತು ಪ್ರದರ್ಶನದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಿ ಶುಭ ಹಾರೈಸಿದರು. ಪೋಷಕರು ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಿಬಿರದ ಅತ್ಯುತ್ತಮ ಶಿಬಿರಾರ್ಥಿಯನ್ನು ಸಂಸ್ಥೆಯ ಅಧ್ಯಕ್ಷರು ಘೋಷಿಸಿದರು. ಬೇಸಿಗೆ ಶಿಬಿರದಲ್ಲಿ ಮಕ್ಕಳಿಂದ ಮಕ್ಕಳ ಸಂತೆ ಹಮ್ಮಿಕೊಳ್ಳಲಾಗಿತ್ತು. ಶ್ರದ್ಧಾ .ಡಿ ನಂದ ಎಲ್. ಚಿನ್ಮಯ್, ಎಸ್. ಮಧುರ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಬಿರಾರ್ಥಿಗಳು "ಪರಿಸರ ಉಳಿಸಿ " ನಟಕ, ಜಾನಪದ ನೃತ್ಯ, ಸಾಮೂಹಿಕ ಗೀತೆಗಳ ನೃತ್ಯ ಪ್ರದರ್ಶಿಸಿದರು.28ಕೆಟಿಆರ್.ಕೆ.1ಃ
ತರೀಕೆರೆಯಲ್ಲಿ ನಡೆದ ಬೇಸಿಗೆ ಶಿಬಿರ ಸಂಭ್ರಮ-15 ಕಾರ್ಯಕ್ರಮದಲ್ಲಿ ಶಾರದ ಅಶೋಕ ಕುಮಾರ್ ಮಾತನಾಡಿದರು. ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾ ಪ್ರಕಾಶ್, ಇನ್ನರ್ ವ್ಹೀಲ್ ಅದ್ಯಕ್ಷೆ ಉಮಾ ದಯಾನಂದ್ ಇದ್ದರು.