ಸಾರಾಂಶ
ರಂಗ ಕಲೆಗಳು ನಶಿಸಿ ಹೋಗುತ್ತಿರುವ ದಿನಗಳಲ್ಲಿ ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಪೌರಾಣಿಕ ಮತ್ತು ಸಾಮಾಜಿಕ ನಾಟಕ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ. ರಂಗ ಕಲೆ ಉಳಿಯಬೇಕಾದರೆ ಗ್ರಾಮೀಣ ಭಾಗದ ರಂಗಭೂಮಿ ಕಲಾವಿದರು ಉತ್ತಮ ಪೌರಾಣಿಕ ಸಾಮಾಜಿಕ ನಾಟಕ ಪ್ರದರ್ಶಿಸಬೇಕು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸರ್ಕಾರಗಳಿಂದ ಬರುವ ಪ್ರೋತ್ಸಾಹ ಧನದಿಂದ ಕಲಾವಿದರು ಜೀವನ ನಡೆಸಲು ಕಷ್ಟಕರವಾಗುತ್ತದೆ ಎಂದು ಸಮಾಜ ಸೇವಕಿ ಚೈತ್ರ ಶಶಿಧರ್ ಗೌಡ ಕಳವಳ ವ್ಯಕ್ತಪಡಿಸಿದರು.ಅರುವನಹಳ್ಳಿ ಬೀರೇಶ್ವರ ದೇವಸ್ಥಾನದ ಅಭಿವೃದ್ಧಿ ಸೇವಾ ಟ್ರಸ್ಟ್ 5 ಮನೆ ಹೆಗಡೆಯವರು ಶ್ರೀಬೀರೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ಹಾಗೂ ಶ್ರೀಕೋದಂಡರಾಮ ಕೃಪಾ ನಾಟಕ ಮಂಡಳಿಯಿಂದ ಆಯೋಜಿಸಿದ್ದ ಸತಿ ಸಂಸಾರದ ಜ್ಯೋತಿ ಎಂಬ ಸುಂದರ ನಾಟಕ ಪ್ರದರ್ಶನದ ವೇಳೆ ಪಾಲ್ಗೊಂಡು ವೈಯಕ್ತಿಕ ಧನಸಹಾಯ ಮಾಡಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಲಾವಿದರಿಗೆ ಸರ್ಕಾರ ನೀಡುವ ಪ್ರೋತ್ಸಹ ಧನ ಹೆಚ್ಚಿಸಿದರೆ ರಂಗ ಕಲೆಗಳು ಜೀವಂತವಾಗಿ ಉಳಿಯುತ್ತವೆ. ರಂಗಭೂಮಿ ಕಲಾವಿದರು ಆರ್ಥಿಕವಾಗಿ ಸಬಲೀಕರಣರಾಗಬೇಕು ಎಂಬ ಉದ್ದೇಶದಿಂದ ನಮ್ಮ ವೈಯಕ್ತಿಕವಾಗಿ ಅವರಿಗೆ ಸಹಾಯ ಹಸ್ತ ನೀಡಿದ್ದೇವೆ ಎಂದರು.ರಂಗ ಕಲೆಗಳು ನಶಿಸಿ ಹೋಗುತ್ತಿರುವ ದಿನಗಳಲ್ಲಿ ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಪೌರಾಣಿಕ ಮತ್ತು ಸಾಮಾಜಿಕ ನಾಟಕ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ. ರಂಗ ಕಲೆ ಉಳಿಯಬೇಕಾದರೆ ಗ್ರಾಮೀಣ ಭಾಗದ ರಂಗಭೂಮಿ ಕಲಾವಿದರು ಉತ್ತಮ ಪೌರಾಣಿಕ ಸಾಮಾಜಿಕ ನಾಟಕ ಪ್ರದರ್ಶಿಸಬೇಕು. ಗ್ರಾಮೀಣ ರೈತರು, ಮಹಿಳೆಯರು ನಾಟಕ ನೋಡಿ ಸಂಭ್ರಮಿಸುವುದರ ಮೂಲಕ ಪ್ರೋತ್ಸಾಹಿಸಿದರೆ ರಂಗಕಲೆ ಉಳಿಯಲು ಸಾಧ್ಯ ಎಂದರು.
ಈ ವೇಳೆ ರಂಗಭೂಮಿ ಕಲಾವಿದರ ಸಂಘದ ಸಿ.ಎ.ಕೆರೆ ಹೋಬಳಿ ಘಟಕದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ. ಮಾದನಾಯಕನಹಳ್ಳಿ ಲಕ್ಷ್ಮಣ್, ಬುಲೇಟ್ ಬಸವರಾಜು, ಕಲಾವಿದ ಬಿದರಹಳ್ಳಿ ಶ್ರೀಧರ್, ಅಜ್ಜಹಳ್ಳಿ ಮನು ಸೇರಿದಂತೆ ಮತ್ತಿತರಿದ್ದರು.