ಸಾರಾಂಶ
ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಫೆ.26ರಿಂದ28 ರವರಿಗೆ ಮೂರು ದಿನಗಳ ಕಾಲ ಜರುಗುವ ಶ್ರೀ ಮಹಾಲಕ್ಷ್ಮೀದೇವಿ ಹಾಗೂ ಶ್ರಿ ಬಸವೇಶ್ವರ ಜಾತ್ರೆಯ ನಿಮಿತ್ತವಾಗಿ ಬುಧವಾರ ಗ್ರಾಮ ಪಂಚಾಯತಿ ಆವರಣದಲ್ಲಿ ಜಾತ್ರಾ ಪೂರ್ವ ಭಾವಿ ಸಭೆ ಜರುಗಿತು.
ಕನ್ನಡಪ್ರಭ ವಾರ್ತೆ ಮೂಡಲಗಿ
ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಫೆ.26ರಿಂದ28 ರವರಿಗೆ ಮೂರು ದಿನಗಳ ಕಾಲ ಜರುಗುವ ಶ್ರೀ ಮಹಾಲಕ್ಷ್ಮೀದೇವಿ ಹಾಗೂ ಶ್ರಿ ಬಸವೇಶ್ವರ ಜಾತ್ರೆಯ ನಿಮಿತ್ತವಾಗಿ ಬುಧವಾರ ಗ್ರಾಮ ಪಂಚಾಯತಿ ಆವರಣದಲ್ಲಿ ಜಾತ್ರಾ ಪೂರ್ವ ಭಾವಿ ಸಭೆ ಜರುಗಿತು.ಸಭೆಯಲ್ಲಿ ಪ್ರತಿವರ್ಷದ ಪದ್ಧತಿ ಪ್ರಕಾರ ಈ ವರ್ಷವು ಕೂಡಾ ಗ್ರಾಮ ದೇವರುಗಳ ಜಾತ್ರೆಯನ್ನು ಸತತ 3 ದಿನಗಳ ಕಾಲ ವಿಜೃಂಬನೆಯಿಂದ ನಡೆಯಲಿದ್ದು ಆದಕಾರಣ ಜಾತ್ರೆಯ ಸಮಯದಲ್ಲಿ ಗ್ರಾಮದ ಸರ್ವ ನಾಗರಿಕರು ಒಟ್ಟಾಗಿ ಕಾರ್ಯ ಮಾಡಬೇಕು. ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಮತ್ತು ಗ್ರಾಮದ ಪ್ರಮುಖರಲ್ಲಿ ಜಾತ್ರಾ ಕಮಿಟಿಯವರು ವಿನಂತಿಸಿದರು. ಗ್ರಾಮದಲ್ಲಿ ಮತ್ತು ದೇವಸ್ಥಾನ ಆವರಣದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಬೀದಿ ದೀಪ ಹಾಗೂ ಚರಂಡಿ ಸ್ವಚ್ಛತೆಯ ಕಾರ್ಯವನ್ನು ಗ್ರಾಮ ಪಂಚಾಯತಿಯವರು ನಿರ್ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಹಣಮಂತ ಕುಲಕರ್ಣಿ, ಪಿಡಿಒ ರಂಗನಾಥ ಗುಜನಟ್ಟಿ, ಗ್ರಾಪಂ ಸದಸ್ಯರಾದ ದುಂಡಪ್ಪಾ ಪಂತೋಜಿ, ಬಸವರಾಜ ಭುಜನ್ನವರ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಅಪ್ಪಯ್ಯಾ ಬಡ್ನಿಂಗೋಳ, ಹಿರಿಯರಾದ ಕಲ್ಲಪ್ಪಾ ಉಪ್ಪಾರ, ಭೀಮಪ್ಪಾ ಬಡ್ನಿಂಗೋಳ, ರಾಮಣ್ಣಾ ಗಂಗನ್ನವರ, ಲಕ್ಷ್ಮಣ ನರಗುಂದ, ಮಲ್ಲಪ್ಪಾ ಗಾಡವಿ, ಅಶೋಕ ಮಳಲಿ, ವಿರುಪಾಕ್ಷ ಕೊಳವಿ, ಕೆಂಚಪ್ಪಾ ಶಿಂತ್ರಿ, ವಿಠ್ಠಲ ಹೊಸುರ, ಪಾಂಡು ಮಳಲಿ, ಭರಮಪ್ಪಾ ಗಂಗನ್ನವರ, ಆನಂದ ಹೊಸಕೋಟಿ, ಲಕ್ಕಪ್ಪಾ ಮಕರದ, ನಿಂಗಪ್ಪಾ ಹೆಜಿಗಾರ ಲಕ್ಕಪ್ಪಾ ಹೊಸುರ, ಮುಡ್ಡಪ್ಪಾ ಮಕರದ, ಕಲ್ಲೋಳೆಪ್ಪಾ ಬಡ್ನಿಂಗೋಳ ಹಾಗೂ ಪೊಲೀಸ್ ಮತ್ತು ಪಂಚಾಯತಿ ಸಿಬ್ಬಂದಿ ವರ್ಗದವರು, ನಾಗರಿಕರು ಉಪಸ್ಥಿತರಿದ್ದರು.