ಸಾರಾಂಶ
ಅಸಾಮಾನ್ಯ ಎಂದೆನಿಸಿರುವ ಸತ್ಯ, ಅಹಿಂಸೆ ಮತ್ತು ಸರಳತೆ ಮಾರ್ಗದಲ್ಲಿ ಬದುಕಲು ಸಾಧ್ಯವೆಂದು ತೋರಿಸಿ, ತನ್ಮೂಲಕ ಜೀವನದ ಅತ್ಯುನ್ನತ ಆದರ್ಶಗಳ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡಿದವರು ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಎಂದು ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಾಂಶುಪಾಲರಾದ ಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಅಸಾಮಾನ್ಯ ಎಂದೆನಿಸಿರುವ ಸತ್ಯ, ಅಹಿಂಸೆ ಮತ್ತು ಸರಳತೆ ಮಾರ್ಗದಲ್ಲಿ ಬದುಕಲು ಸಾಧ್ಯವೆಂದು ತೋರಿಸಿ, ತನ್ಮೂಲಕ ಜೀವನದ ಅತ್ಯುನ್ನತ ಆದರ್ಶಗಳ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡಿದವರು ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಎಂದು ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಾಂಶುಪಾಲರಾದ ಕುಮಾರ್ ತಿಳಿಸಿದರು.ತಾಲೂಕಿನ ಉದಯಪುರ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೧೫೫ನೇ ಗಾಂಧಿ. ಜಯಂತಿ ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು.
ಅಲ್ಬರ್ಟ್ ಐನ್‌ಸ್ಟೀನ್, ನೆಲ್ಸನ್ ಮಂಡೇಲಾ ಅಂತಹವರಿಗೆ ಆದರ್ಶಪ್ರಾಯರಾದ ಗಾಂಧೀಜಿ ಅವರ ತತ್ವಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಇನ್ನು ಅಸ್ತ್ರ-ಶಸ್ತ್ರಗಳನ್ನು ಬದಿಗೊತ್ತಿ ಸತ್ಯ ಮತ್ತು ಅಹಿಂಸೆ ಮಾರ್ಗದ ಮೂಲಕ ಭಾರತವನ್ನು ಸ್ವಾತಂತ್ರ್ಯದೆಡೆಗೆ ಮುನ್ನಡಿಸಿದವರು ಮಹಾತ್ಮ ಗಾಂಧಿ. ಅವರ ಪತ್ನಿ ಕಸ್ತೂರ ಬಾ ಅವರಿಂದ ಸತ್ಯಾಗ್ರಹವು ಗುರಿ ಸಾಧನೆಯ ಒಂದು ಪ್ರಬಲ ಆಸ್ತ್ರ ಎಂದು ಅರಿತ ಮಹಾತ್ಮ ಗಾಂಧಿ ಅವರು ಅಸಹಕಾರ ಚಳವಳಿ, ಸ್ವದೇಶಿ ಚಳವಳಿ ಮೂಲಕ ವಸಾಹತುಶಾಹಿ ಬ್ರಿಟೀಷ್ ಆಳ್ವಿಕೆಯ ಅಡಿಪಾಯವನ್ನೇ ಬುಡಮೇಲು ಮಾಡಲು ಜನರಲ್ಲಿ ಕಿಚ್ಚನ್ನು ಹಚ್ಚಿದರು ಎಂದರು.