ಡಿಕೆಶಿ ತಮ್ಮ ನಡವಳಿಕೆಯಿಂದ ಸಿಎಂ ಆಗೋದು ಕಷ್ಟ

| Published : Jul 03 2025, 11:51 PM IST

ಡಿಕೆಶಿ ತಮ್ಮ ನಡವಳಿಕೆಯಿಂದ ಸಿಎಂ ಆಗೋದು ಕಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸ್ನೇಹಿತ ಡಿ.ಕೆ.ಶಿವಕುಮಾರ್ ಪಬ್ಲಿಕ್ ಕಾಂಟ್ಯಾಕ್ಟ್‌ನಲ್ಲಿ ಬಹಳ ಫೇಲ್ ಆಗಿದ್ದಾರೆ. ಹೀಗಾಗಿ ಅವರು ಸಿಎಂ ಆಗೋದು ಕಷ್ಟ, ಈ ಅವಧಿಯಲ್ಲಿ ಸಿಎಂ ಸ್ಥಾನ ಸಿಗುವುದು ಸುಲಭ ಅಲ್ಲ ಎಂದು ಡಿ.ಕೆ.ಶಿವಕುಮಾರ್ ಅತ್ಯಾಪ್ತರಾದ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ನಮ್ಮ ಸ್ನೇಹಿತ ಡಿ.ಕೆ.ಶಿವಕುಮಾರ್ ಪಬ್ಲಿಕ್ ಕಾಂಟ್ಯಾಕ್ಟ್‌ನಲ್ಲಿ ಬಹಳ ಫೇಲ್ ಆಗಿದ್ದಾರೆ. ಹೀಗಾಗಿ ಅವರು ಸಿಎಂ ಆಗೋದು ಕಷ್ಟ, ಈ ಅವಧಿಯಲ್ಲಿ ಸಿಎಂ ಸ್ಥಾನ ಸಿಗುವುದು ಸುಲಭ ಅಲ್ಲ ಎಂದು ಡಿ.ಕೆ.ಶಿವಕುಮಾರ್ ಅತ್ಯಾಪ್ತರಾದ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ.ಒಂದೆಡೆ 5 ವರ್ಷ ನಾನೇ ಸಿಎಂ ಎನ್ನುತ್ತಿರುವ ಸಿದ್ದರಾಮಯ್ಯ, ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂದು ಡಿಕೆಶಿ ಆಪ್ತ ಶಾಸಕರು ಹೇಳುತ್ತಿದ್ದಾರೆ. ಈ ನಡುವೆ ನಾನು ಸಿದ್ದರಾಮಯ್ಯಗೆ ಬೆಂಬಲವಾಗಿ ಇರುತ್ತೇನೆ, ಬೇರೆ ದಾರಿ ಇಲ್ಲವೆಂದು ಸ್ವತಃ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಹೀಗಿರುವಾಗ ಡಿ.ಕೆ. ಶಿವಕುಮಾರ್‌ಗೆ ಅವರ ಅತ್ಯಾಪ್ತ ಸಿ.ಎಂ.ಲಿಂಗಪ್ಪ ಶಾಕ್ ನೀಡಿದ್ದಾರೆ.

ರಾಮನಗರ ತಾಲೂಕಿನ ಬಿಡದಿಯಲ್ಲಿ ಮಾತನಾಡಿದ ಅವರು, ನನ್ನ ಮಾತು ಶಿವಕುಮಾರ್ ಗೆ ಬೇಸರವಾಗಬಹುದು. ಆದರೆ, ಪ್ರಾಕ್ಟಿಕಲ್ ಆಗಿ ಹೇಳೋದಾದ್ರೆ ಬದಲಾವಣೆ ಕಷ್ಟ. ಕಡೆಗೆ ಹೈಕಮಾಂಡ್ ಮುಂದೆ ಸಹ ಕೆಪಿಸಿಸಿ ಅಧ್ಯಕ್ಷನಾಗಿ ಮಾಡ್ತೇವೆ . ಪಕ್ಷದ ಟಿಕೆಟ್ ಹಂಚಿಕೆ ಜವಾಬ್ದಾರಿ ಕೊಡ್ತೇವೆ. ನೀನೆ ಪಕ್ಷವನ್ನು ಅಧಿಕಾರಕ್ಕೆ ತಂದು ಸಿಎಂ ಆಗು ಎಂದು ಹೇಳಬಹುದೇನೋ ಅನಿಸುತ್ತೆ ಎಂದರು.

ಅಲ್ಲದೆ " ಯಾರಾದರೂ ನಮಸ್ಕಾರ ಎಂದ್ರೆ...ಹಾ.. ಎನ್ನುತ್ತಾರೆ. ಅದನ್ನು ಹೇಳಿದ್ದೀವಿ, ನಮಸ್ಕಾರ ಅಂದ್ರೆ ನೀವು ನಮಸ್ಕಾರ ಅನ್ನಿ ಎಂದಿದ್ದೇವೆ. ಈಗ ಅವರಿಗೆ ಏನು ಸಲಹೆ ಕೊಡಲ್ಲ, ಪ್ರಯೋಜನವೂ ಆಗಲ್ಲ. ನನಗೆ ಅವರ ಮೇಲೆ ಅಸಮಾಧಾನ, ಅತೃಪ್ತಿ ಇಲ್ಲ. ಅವರನ್ನು ಮೀಟ್ ಮಾಡೋದೆ ಕಷ್ಟ, ಸಿಕ್ಕಿದ್ರೂ ನಾಳೆ ಸಿಗು ಅಂತಾರೆ. ಅವರಿಗೆ ಸಿಎಂ ಅವಕಾಶ ಸಿಗುತ್ತೆ - IF NOT THIS TIME. ಇವರಿಗೆ ಪರವಾಗಿ ಇರುವವರಿಗಿಂತ, ವಿರೋಧಿಗಳು ಜಾಸ್ತಿ. ಸಿಎಂ ಎನ್ನುತ್ತಿದ್ದಂತೆ ನಾನು, ನಾನು ಅನ್ನೋರೆ ಜಾಸ್ತಿ ಎಂದು ಸಿ.ಎಂ. ಲಿಂಗಪ್ಪ ತಿಳಿಸಿದರು.

ಡಿಕೆಶಿಗೆ ಏಕೆ ಕಷ್ಟವಾಗ್ತಿದೆ?ಡಿ.ಕೆ. ಶಿವಕುಮಾರ್‌ಗೆ ಸಿಎಂ ಆಗೋದು ಯಾಕೆ ಕಷ್ಟ ಆಗ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ನಾನು ಕಟುಸತ್ಯ ಹೇಳಬೇಕಾಗುತ್ತದೆ. ನಾನು ಹಿಂದಿನಿಂದ ಅವರಿಗೆ ಸಲಹೆ ಕೊಟ್ಟಿದ್ದೇವೆ. ನಿಮ್ಮ ಸಿಸ್ಟಮ್ ಸರಿಯಿಲ್ಲ ಎಂದು ಹೇಳಿದ್ದೇನೆ . ಯಾರೋ ಇಬ್ಬರನ್ನು ಮಾತನಾಡಿಸಿ ಕಾರ್ ಹತ್ತಿ ಹೋಗೋದಲ್ಲ. ಪ್ರತಿದಿನ ಜನರಿಗಾಗಿ 1 ಗಂಟೆ ಮೀಸಲಿಡಬೇಕು. ಜೊತೆಗೆ ಶಾಸಕರನ್ನು ಕಂಡರು ಕಾಣದಂತೆ ಹೋಗ್ತಾರೆ. ಇಂತಹ ಶಾಸಕರು ಎಂದು ಗೊತ್ತಿರುತ್ತದೆ. ಆದರೆ, ಮರೆತಂತೆ ಹೊರಟು ಹೋಗ್ತಾರೆ. ಇದರಿಂದಾಗಿ ಅವರಿಗೆ ಶಾಸಕರ ಬಲ ಕಡಿಮೆ ಇದೆ. ಅವರ ನಡವಳಿಕೆಗಳು ಅವರಿಗೆ ತೊಡಕಾಗ್ತಿದೆ ಎಂದು ಹೇಳಿದರು.