ಮಕ್ಕಳನ್ನು ದೇವರಾಗಿ ರೂಪಿಸಿ ನೋಡುವುದು ಖುಷಿ ನೀಡಲಿದೆ: ರಾಮಕೃಷ್ಣೇಗೌಡ

| Published : Aug 28 2024, 01:00 AM IST

ಮಕ್ಕಳನ್ನು ದೇವರಾಗಿ ರೂಪಿಸಿ ನೋಡುವುದು ಖುಷಿ ನೀಡಲಿದೆ: ರಾಮಕೃಷ್ಣೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ನಮ್ಮ ದೇಶದ ಇತಿಹಾಸ, ಸಂಸ್ಕೃತಿ, ಆಚಾರ ವಿಚಾರವನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ಮಾಡಬೇಕು. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕೃತಿಯನ್ನು ಕಲಿಸುವುದು ಅತ್ಯವಶ್ಯಕವಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳ ತುಂಟಾಟ ಸಹಿಸಿಕೊಂಡು ಮಕ್ಕಳನ್ನೇ ದೇವರಾಗಿ ರೂಪಿಸಿ ನೋಡುವುದು ಪ್ರತಿಯೊಬ್ಬ ಪೋಷಕರ ಮನಸ್ಸಿಗೆ ಖುಷಿ ನೀಡಲಿದೆ ಎಂದು ಹೇಮಗಿರಿ ಶಾಖಾಮಠದ ಕಾರ್‍ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಗೋಕುಲಾಷ್ಟಮಿ ಅಂಗವಾಗಿ ಆಯೋಜಿಸಿದ್ದ ಕೃಷ್ಣಜನ್ಮಾಷ್ಟಮಿ ಮಕ್ಕಳ ವೇಷಭೂಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಿಜಿಎಸ್ ಶಾಲೆಯಲ್ಲಿ ಪ್ರತಿವರ್ಷವೂ ಕೃಷ್ಣಜನ್ಮಾಷ್ಟಮಿ ಕಾರ್‍ಯಕ್ರಮ ಆಯೋಜಿಸುತ್ತಿದ್ದೇವೆ ಎಂದರು.

ಪೋಷಕರು ತುಂಬಾ ಖುಷಿಯಿಂದ ತಮ್ಮ ಮಕ್ಕಳನ್ನು ಕೃಷ್ಣ, ರಾಧೆ, ರಾಮ ಸೇರಿದಂತೆ ಹಲವು ವೇಷಗಳಲ್ಲಿ ಅಲಂಕರಿಸುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದೀರಿ. ಮಕ್ಕಳಿಗೆ ನಮ್ಮ ದೇಶದ ಇತಿಹಾಸ, ಸಂಸ್ಕೃತಿ, ಆಚಾರ ವಿಚಾರವನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ಮಾಡಬೇಕು. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕೃತಿಯನ್ನು ಕಲಿಸುವುದು ಅತ್ಯವಶ್ಯಕವಾಗಿದೆ ಎಂದರು.

ವೇದವ್ಯಾಸಾಶ್ರಮದ ಬಸವನಂದಾ ಸ್ವಾಮೀಜಿ ಮಾತನಾಡಿ, ಪೋಷಕರು ಮಕ್ಕಳಿಗೆ ಶಿಕ್ಷಣದ ಜತೆಗೆ ದೇಶದ ಸಂಸ್ಕೃತಿಯನ್ನು ಕಲಿಸುವ ಮೂಲಕ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದರು.

ಕೃಷ್ಣಜನ್ಮಾಷ್ಟಿಯ ಅಂಗವಾಗಿ ಪ್ರೀಕೆಜಿ, ಎಲ್‌ಕೆಜಿ ಮಕ್ಕಳು ಕೃಷ್ಣ, ವಿಷ್ಣು, ಭೂವರಹನಾಥ, ಸೀತಾರಾಮ, ಲಕ್ಷಣ, ಆಂಜನೇಯ, ಲಕ್ಷ್ಮಿನಾರಾಯಣ, ವೆಂಟಕೇಶ್ವರ, ಶ್ರೀರಂಗನಾಥ, ಬುದ್ಧ, ಲಕ್ಷ್ಮೀನರಸಿಂಹ ಸೇರಿದಂತೆ ವಿವಿಧ ದೇವರ ವೇಷಭೂಷಣವನ್ನು ಪ್ರದರ್ಶಿಸುವ ಮೂಲಕ ಎಲ್ಲಾ ಪೋಷಕರ ಮನೆ ಗೆದ್ದರು.

ಸಮಾರಂಭದಲ್ಲಿ ಶಾಲೆ ಪ್ರಾಂಶುಪಾಲ ಮಹದೇವು, ಮುಖ್ಯಶಿಕ್ಷಕ ರಘು, ಪತ್ರಕರ್ತರಾದ ಬಿ.ಎಸ್.ಜಯರಾಮು, ಕುಮಾರಸ್ವಾಮಿ, ನಾಗಸುಂದರ್, ರವಿಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.