ರಾಜ್ಯದಲ್ಲಿಯೇ ನಂ.೧ ಬ್ಯಾಂಕ್‌ ಆಗಲಿದೆ

| Published : Sep 09 2024, 01:39 AM IST

ಸಾರಾಂಶ

ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿಯ ಉತ್ತಮ ವ್ಯವಹಾರ ಹಾಗೂ ಸದಸ್ಯರ ಗ್ರಾಹಕರ ಉತ್ತಮ ಸ್ಪಂದನೆ ಸಿಗುತ್ತಿದ್ದು, ಬರುವ ದಿನಗಳಲ್ಲಿ ಈ ಬ್ಯಾಂಕ್ ರಾಜ್ಯದಲ್ಲಿ ನಂ.೧ ಬ್ಯಾಂಕ್ ಆಗಲಿದೆ. ಜತೆಗೆ ಬ್ಯಾಂಕಿನ ಕಟ್ಟಡದ ೨೫ನೇ ವರ್ಷ ಬೆಳ್ಳಿ ಮಹೋತ್ಸವ ಆಚರಣೆ ಸಹಕಾರಿ ಕ್ಷೇತ್ರದಲ್ಲಿ ಎಂದು ಮರೆಯದ ಕಾರ್ಯಕ್ರಮವಾಗಲಿದೆ ಎಂದು ಮಾಜಿ ಸಚಿವ, ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿಯ ಉತ್ತಮ ವ್ಯವಹಾರ ಹಾಗೂ ಸದಸ್ಯರ ಗ್ರಾಹಕರ ಉತ್ತಮ ಸ್ಪಂದನೆ ಸಿಗುತ್ತಿದ್ದು, ಬರುವ ದಿನಗಳಲ್ಲಿ ಈ ಬ್ಯಾಂಕ್‌ ರಾಜ್ಯದಲ್ಲಿ ನಂ.೧ ಬ್ಯಾಂಕ್‌ ಆಗಲಿದೆ. ಜತೆಗೆ ಬ್ಯಾಂಕಿನ ಕಟ್ಟಡದ ೨೫ನೇ ವರ್ಷ ಬೆಳ್ಳಿ ಮಹೋತ್ಸವ ಆಚರಣೆ ಸಹಕಾರಿ ಕ್ಷೇತ್ರದಲ್ಲಿ ಎಂದು ಮರೆಯದ ಕಾರ್ಯಕ್ರಮವಾಗಲಿದೆ ಎಂದು ಮಾಜಿ ಸಚಿವ, ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ೨೭ನೇ ವರ್ಷದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಹಕಾರಿ ಸಂಘವು ೧೯೯೭ನೇ ಸಾಲಿನಲ್ಲಿ ಕೇವಲ ₹೧೧.೬೦ ಲಕ್ಷ ಶೇರು ಬಂಡವಾಳದೊಂದಿಗೆ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಅವರ ಅಮತ ಹಸ್ತದಿಂದ ಪ್ರಾರಂಭಿಸಲ್ಪಟ್ಟಿದ್ದು, ಇಂದು ₹೮೨೬ ಕೋಟಿ ದುಡಿಯುವ ಬಂಡವಾಳವಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ೧೮ ಶಾಖೆಗಳನ್ನು ಹೊಂದಿದೆ. ₹೨.೬೫ ಕೋಟಿ ಲಾಭಗಳಿಸಿದೆ ಎಂದು ಹೇಳಿದರು.ಬ್ಯಾಂಕಿನಲ್ಲಿ ೧೬೨೭೩ ಜನ ಸದಸ್ಯರಿದ್ದು, ₹೧೯.೫೨ ಕೋಟಿ ಶೇರು ಬಂಡವಾಳ ಹೊಂದಿದೆ. ಶೈಕ್ಷಣಿಕ , ಕ್ರೀಡಾ ಕ್ಷೇತ್ರಗಳ ಸಾಧಕರನ್ನು, ಬ್ಯಾಂಕಿನ ಉತ್ತಮ ಗ್ರಾಹಕರನ್ನು ಗೌರವಿಸಲಾಯಿತು. ಪ್ರಧಾನ ವ್ಯವಸ್ಥಾಪಕ ಎಲ್ ಬಿ ಕುರ್ತಕೋಟಿ ಸ್ವಾಗತಿಸಿ, ವರದಿ ವಾಚನ ಮಾಡಿದರು ಗುರುರಾಜ ಲೂತಿ ನಿರೂಪಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್.ಆರ್. ಮೇಲ್ನಾಡ, ನಿರ್ದೇಶಕ ಎಚ್.ಎ.ಕೊಪ್ಪಳ, ಕೆ.ಎಸ್. ಪತ್ರಿ, ಎನ್.ಎನ್. ಪಾಟಿಲ್, ಪಿ.ಬಿ. ಗುರಾಣಿ, ಡಿ.ಬಿ. ಮಮದಾಪುರ, ವಿ.ಪಿ. ಆಯಾಚಿತ, ಎ.ಎಚ್. ಬೀಳಗಿ, ಜಿ.ಎಸ್. ಕೆರೂರ, ಬ್ಯಾಂಕಿನ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಎಂ.ಎಸ್. ಪಾಟೀಲ್, ಪಿ.ಡಿ. ಜತ್ತಿ, ಬಿ.ಎನ್. ನಾಗನಗೌಡರ ಮತ್ತಿತರರು ಇದ್ದರು.