ಇಟಗಿ ಮಹಾದೇವ ದೇವಾಲಯ ಯುನೆಸ್ಕೋ ಪಟ್ಟಿಗೆ ಸೇರಿಸಿ: ಸಾಹಿತಿ ಬಿ.ಎಂ. ಹಳ್ಳಿ

| Published : Dec 26 2024, 01:01 AM IST

ಇಟಗಿ ಮಹಾದೇವ ದೇವಾಲಯ ಯುನೆಸ್ಕೋ ಪಟ್ಟಿಗೆ ಸೇರಿಸಿ: ಸಾಹಿತಿ ಬಿ.ಎಂ. ಹಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಇಟಗಿ ಗ್ರಾಮದ ದೇವಾಲಯಗಳ ಚಕ್ರವರ್ತಿ ಇಟಗಿ ಮಹಾದೇವ ದೇವಾಲಯವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಬೇಕು.

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ಇಟಗಿ ಗ್ರಾಮದ ದೇವಾಲಯಗಳ ಚಕ್ರವರ್ತಿ ಇಟಗಿ ಮಹಾದೇವ ದೇವಾಲಯವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಬೇಕು ಎಂದು ಸಾಹಿತಿ ಬಿ.ಎಂ. ಹಳ್ಳಿ ಒತ್ತಾಯಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಟಗಿ ಮಹಾದೇವ ದೇವಾಲಯ ಐತಿಹ್ಯ ಪ್ರತಿದ್ಧ ದೇವಾಲಯ. ಕಲಾಕೃತಿ ಸಹ ಬಣ್ಣನೆಗೆ ನಿಲುಕದ್ದು. ಹಾಗಾಗಿ ಇತಿಹಾಸಕಾರರು ಇದನ್ನು ದೇವಾಲಯಗಳ ಚಕ್ರವರ್ತಿ ಎಂದು ಬಣ್ಣಿಸಿದ್ದಾರೆ. ಗಂಗ ರಾಜರು, ಕಲ್ಯಾಣ ಚಾಳುಕ್ಯರು, ವಿಜಯ ನಗರದ ಸಾಮಂತ ದೊರೆಗಳು ಆಳ್ವಿಕೆ ನಡೆಸಿದ ಇತಿಹಾಸ ಇದೆ. ಇದರ ಶಿಲ್ಪಕಲೆಯ ವೈಖರಿಯನ್ನು ಜಾಗತಿಕ ಮಟ್ಟದಲ್ಲಿ ಜನತೆ ಕಣ್ತುಂಬಿಕೊಳ್ಳಬೇಕಾಗಿದೆ. ವಿದೇಶಿ ಪ್ರವಾಸಿಗರೂ ಇತ್ತ ಮುಖ ಮಾಡಬೇಕಾಗಿದೆ. ಹಾಗಾಗಿ ಯುನೆಸ್ಕೋ ಪಟ್ಟಿಗೆ ಇಟಗಿ ದೇವಾಲಯ ಸೇರಿಸಬೇಕು ಎಂದರು.

ಹೋರಾಟಗಾರ ರವಿತೇಜ ಅಬ್ಬಿಗೇರಿ ಮಾತನಾಡಿ, ಇಟಗಿ ದೇವಾಲಯವನ್ನು ಭಾರತೀಯ ಸರ್ವೇಕ್ಷಣ ಪುರಾತತ್ವ ಇಲಾಖೆಯವರು ಬಂದು ಅಧ್ಯಯನ ಮಾಡಬೇಕು. ಸಂಘಟನೆಗಳು, ಸಾರ್ವಜನಿಕರು ಕೈ ಜೋಡಿಸಿ ದೇವಾಲಯವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಬೇಕು ಎಂದರು.

ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಮಾತನಾಡಿ, ಇಟಗಿ ದೇವಾಲಯದ ಶಿಲ್ಪಕಲೆ ಎಲ್ಲೂ ಸಿಗದು. ಪುಷ್ಕರಣೆ ನಿರ್ಮಾಣ ಸಹ ದೇವಾಲಯದ ಅಳತೆಯಲ್ಲಿದೆ. ಇದೊಂದು ಅದ್ಭುತ ಎಂದರು.

ಮುಖಂಡ ಮಹಾದೇವಪ್ಪ ಕುರಿ ಮಾತನಾಡಿ, ಜನಪ್ರತಿನಿಧಿಗಳು ಇಟಗಿ ಮಹಾದೇವ ದೇವಾಲಯ ಬಗ್ಗೆ ಗಮನ ಹರಿಸಬೇಕು. ಇದು ಸಹ ಈ ನೆಲದ ಸ್ವತ್ತು ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ, ಕಸಾಪ ತಾಲೂಕಾಧ್ಯಕ್ಷ ಕಳಕಪ್ಪ ಕುಂಬಾರ, ವೀರಣ್ಣ ಅಣ್ಣಿಗೇರಿ, ಬಿ.ಆರ್. ಖಾಸಿಂ, ಚನ್ನಬಸಪ್ಪ ಹಳ್ಳಿಕೇರಿ, ಯಲ್ಲಪ್ಪ ಹೂಗಾರ ಇತರರಿದ್ದರು.