ಐಟಿಐ ವಿದ್ಯಾರ್ಥಿಗಳು ಉದ್ಯಮ ಪ್ರಾರಂಭಿಸಿ ಸಮಾಜಮುಖಿಯಾಗಿ ಬೆಳೆಯಬೇಕು

| Published : Jul 07 2025, 11:48 PM IST

ಐಟಿಐ ವಿದ್ಯಾರ್ಥಿಗಳು ಉದ್ಯಮ ಪ್ರಾರಂಭಿಸಿ ಸಮಾಜಮುಖಿಯಾಗಿ ಬೆಳೆಯಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಐಟಿಐನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸ್ವತಃ ತಾವೇ ಉದ್ಯಮ ಪ್ರಾರಂಭಿಸಿ ಸಮಾಜಮುಖಿಯಾಗಿ ಬೆಳೆಯಬೇಕು ಎಂದು ತೋಂಟದಾರ್ಯ ಮಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಹೇಳಿದರು.

ಡಂಬಳ:ಐಟಿಐನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸ್ವತಃ ತಾವೇ ಉದ್ಯಮ ಪ್ರಾರಂಭಿಸಿ ಸಮಾಜಮುಖಿಯಾಗಿ ಬೆಳೆಯಬೇಕು ಎಂದು ತೋಂಟದಾರ್ಯ ಮಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಹೇಳಿದರು.

ಡಂಬಳ ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವಿದ್ಯಾರ್ಥಿಗಳ ಭವಿಷ್ಯ ಉತ್ತಮ ಆಗಬೇಕು ಎನ್ನುವ ಉದ್ದೇಶದಿಂದ ಲಿಂ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು 1983ರಲ್ಲಿ ಐಟಿಐ ಕಾಲೇಜುಗಳನ್ನು ತೆರೆದ ಪ್ರಯುಕ್ತ ಇಂದು ಮಹಾನಗರಗಳಲ್ಲಿ ಮತ್ತು ವಿದೇಶಗಳಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಹೊಂದಿದ್ದಾರೆ ಮತ್ತು ಸ್ವತಃ ತಾವೇ ಕಂಪನಿಗಳನ್ನು ತೆರೆದಿದ್ದಾರೆ. ಅಲ್ಲದೆ 97 ವಿದ್ಯಾರ್ಥಿಗಳು ಐಟಿಐ ಕಾಲೇಜಿಗೆ ಉಪನ್ಯಾಸಕರಾಗಿ ಆಯ್ಕೆಯಾಗಿದ್ದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.

ಡಿ.ಜಿ.ಎಂ.ಆಯುರ್ವೇದ ಮೆಡಿಕಲ್ ಕಾಲೇಜು ನಿವೃತ್ತ ಪ್ರಾಚಾರ್ಯ ಡಾ. ಉಮೇಶ ವೀ. ಪುರದ ಮಾತನಾಡಿ, ತರಬೇತಿ ಪಡೆದ ವಿದ್ಯಾರ್ಥಿಗಳು ಜ್ಞಾನ ಕೌಶಲ್ಯ ಮತ್ತು ಆವಿಷ್ಕಾರಗಳನ್ನು ಬಳಸಿಕೊಂಡು ಶ್ರೇಷ್ಠ ಸಾಧನೆ ಮಾಡಲು ಪಣತೊಡಬೇಕು, ಇವತ್ತು ಲಿಂ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತರಬೇತಿ ಸಂಸ್ಥೆಗಳ ಮೂಲಕ ಜೀವನ ರೂಪಿಸುತ್ತಿರುವ ಪ್ರಶಂಸನೀಯವಾದದ್ದು, ಇದರ ಸಂಪೂರ್ಣ ಸೌಲಭ್ಯಗಳನ್ನು ಗ್ರಾಮೀಣ ವಿದ್ಯಾರ್ಥಿಗಳು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.

ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಮಾತನಾಡಿ, ಶರಣರ ಕಾಯಕತ್ವ ರೂಢಿಸಿಕೊಳ್ಳುವುದರ ಮೂಲಕ ಉತ್ತಮ ಶಿಕ್ಷಣ, ಶಿಸ್ತಿನ ಮತ್ತು ಆರೋಗ್ಯಯುತ ಮೌಲ್ಯಯುತ ಜೀವನ ನಿಮ್ಮದಾಗಲಿ ಎಂದು ಹೇಳಿದರು.

ಪ್ರಾಚಾರ್ಯ ಎಸ್.ಎಮ್. ಶಿವರಾಚಯ್ಯ ಮಾತನಾಡಿ, ಐಟಿಐ ಕಾಲೇಜಿನಿಂದ ಈ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ಇಲ್ಲಿ ಓದಿದ ಶೇ80ರಷ್ಟು ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ನೌಕರಿ ಸಿಕ್ಕಿದೆ. ಅನೇಕ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸರ್ಕಾರಿ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೂ ಸೇರಿಕೊಂಡಿದ್ದಾರೆ ಎಂದು ಹೇಳಿದರು.

ಕಳೆದ ವರ್ಷ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ವಾರ್ಷಿಕ ಕ್ರೀಡಾಕೂಟದಲ್ಲಿ ವಿಜಯ ಶಾಲಿಗಳಿಗೆ ಪ್ರಶಸ್ತಿ ನೀಡಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿದವು.

ಕಾರ್ಯಕ್ರಮದಲ್ಲಿ ವಿರುಪಾಕ್ಷಪ್ಪ ಲಕ್ಕುಂಡಿ, ಗುರುವೃಂದ ಜಿ. ಮಹೇಶಗೌಡರ, ಆರ್.ವಿ. ಪಾಟೀಲ್, ಆರ್.ವಿ. ಗಳಗಿ, ಎಚ್.ಎನ್. ನಾಯಕ, ಎಸ್.ಎಸ್. ನಲವತ್ತವಾಡಮಠ, ಎಸ್.ಎಸ್. ಕುಂಬಾರ, ಎ.ಎಮ್. ಯಾಳಗಿ, ಐ.ಬಿ. ದಾಸರ, ಎಸ್.ಎಮ್. ಇಲಕಲ್ಲ, ಐ.ಎಸ್. ಯಲಿಗಾರ, ಗಿರೀಶ ಬಡಗೇರ, ಬಸುರಾಜ ಬಡಗೇರ, ಶಿವರಾಜ ಅಣ್ಣಿಗೇರಿ, ಎಮ್.ಆರ್. ಕಟ್ಟಿಮನಿ, ಆರ್.ಪಿ. ನರೇಗಲ್ಲ, ಕೆ.ಜೆ. ಅಬ್ಬಿಗೇರಿ, ಆರ್.ಜಿ. ಕೊರ್ಲಹಳ್ಳಿ ಕಾರ್ಯಕ್ರಮ ನಿರೂಪಿಸಿದರು.