ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಜೆ.ಜೆ.ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಆಯ್ಕೆ

| Published : Oct 14 2025, 01:00 AM IST

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಜೆ.ಜೆ.ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಶಿಕ್ಷಣ ಇಲಾಖೆಯಿಂದ ಮಳವಳ್ಳಿ ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ 16 ವರ್ಷ ವಯೋಮಾನದ ಕ್ರೀಡಾಕೂಟದಲ್ಲಿ ಜೆ.ಜೆ.ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಶಾಲಾ ಶಿಕ್ಷಣ ಇಲಾಖೆಯಿಂದ ಮಳವಳ್ಳಿ ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ 16 ವರ್ಷ ವಯೋಮಾನದ ಕ್ರೀಡಾಕೂಟದಲ್ಲಿ ಜೆ.ಜೆ.ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲೆ ಕೆ.ಎನ್‌.ಲಲಿತಾಂಭ ಸೋಮಶೇಖರ್ ತಿಳಿಸಿದರು.

ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಮಹಮದ್ ಶಾಹಿದ್ 100 ಮೀಟರ್ ಓಟ, ಉದ್ದ ಜಿಗಿತ, ಪ್ರಥಮ, ಗುಂಡು ಎಸೆತ ದ್ವೀತಿಯ, ಧನುಶ್ರೀ ಉದ್ದ ಜಿಗಿತ ಪ್ರಥಮ, ಪ್ರೀತಮ್ ಗೌಡ ಉದ್ದ ಜಿಗಿತ ಮತ್ತು ಜಾವಲಿನ್ ದ್ವೀತಿಯ, ಎಸ್.ಕೆ.ಮೋಹನ್ ಎತ್ತರ ಜಿಗಿತ ದ್ವೀತಿಯ, ಅಹಲ್ಯಾ ಜಾವಲಿನ್ ದ್ವೀತಿಯ, ದೀಪಿಕಾ 100 ಮೀಟರ್ ಓಟ ದ್ವೀತಿಯ, ವಿಸ್ಮಿತಾ 400 ಮೀಟರ್ ದ್ವೀತಿಯ, ಚಂಪಕ 100 ಮೀಟರ್ ಓಟ ದ್ವೀತಿಯ, ತೇಜಶ್ವಿನಿ 600 ಮೀ. ಓಟ ತೃತೀಯ ಸ್ಥಾನ ಪಡೆದಿದ್ದಾರೆ ಎಂದರು.

ಯೋಗೇಶ್ವರ್ ಎಸ್.ಮೂರ್ತಿ, ಮೊಹಮದ್ ಶಾಹಿದ್, ಎಲ್.ಆರ್.ತರುಣ್, ಯಶಸ್ 100 ಮೀ. ರೀಲೆಯಲ್ಲಿ ಪ್ರಥಮ ಸ್ಥಾನ, ಕೆ.ಎಸ್.ದ್ರುವ, ಆರ್.ಮೋಹಿತ್ ಗೌಡ, ಚೇತನ್, ಮೋಹಿತ್ 400 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ, 100 ಮೀಟರ್ ರೀಲೆಯಲ್ಲಿ ಶಿವಾನಿ, ಸಂಯೋಗ, ವಿಸ್ಮಿತಾ, ದೀಪಿಕಾ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎಜುಕೇಷನ್‌ ಟ್ರಸ್ಟ್ ಕಾರ್ಯದರ್ಶಿ ಕೆ.ಜೆ.ಸೋಮಶೇಖರ್, ಪ್ರಾಂಶುಪಾಲೆ ಕೆ.ಎನ್.ಲಲಿತಾಂಭ, ಸಂಯೋಜಕ ವಿಕಾಶ್, ದೈಹಿಕ ಶಿಕ್ಷಣ ತರಬೇತುದಾರ ರಾಜಶೇಖರ ಮೂರ್ತಿ ಸೇರಿದಂತೆ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

ಇಂದು ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಕೆ.ಎಂ.ದೊಡ್ಡಿ:

ಮದ್ದೂರು ಸೂಳೆಕೆರೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡಿರುವುದರಿಂದ ಕಾಮಗಾರಿ ಆರಂಭಿಸುವ ಉದ್ದೇಶದಿಂದ ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆಯಲ್ಲಿ ಅ.14 ರಂದು ಚಿಕ್ಕರಸಿನಕೆರೆ ಶ್ರೀ ಕಾಲಬೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.

ಸೂಳೆಕೆರೆ ಅಭಿವೃದ್ಧಿಗಾಗಿ 34 ಕೋಟಿ ರು. ಹಾಗೂ ಸೂಳೆಕೆರೆ ಉತ್ತರ ಮತ್ತು ದಕ್ಷಿಣ ನಾಲೆಗಳಿಗೆ 47.75 ಕೋಟಿ ರು.ಗಳು ಸರ್ಕಾರದ ಸಚಿವ ಸಂಪುಟಸಭೆ ಸಭೆಯಲ್ಲಿ ಅನುಮೋದನೆಗೊಂಡಿದೆ. ಅನುಮೋದನೆಗೊಂಡಿರುವ ಕಾಮಗಾರಿಯನ್ನು ಪ್ರಾರಂಭಿಸುವ ಉದ್ದೇಶದಿಂದ ಸದರಿ ಭಾಗದ ರೈತ ಮುಖಂಡರು ಹಾಗೂ ಅಚ್ಚುಕಟ್ಟು ಪ್ರದೇಶದ ರೈತರ ಜೊತೆ ಜನವರಿ ತಿಂಗಳಿಂದ ನೀರು ನಿಲ್ಲಿಸುವ ಬಗ್ಗೆ ಹಾಗೂ ಕಾಮಗಾರಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದರ ಬಗ್ಗೆ ಸಲಹೆ ಸೂಚನೆ ನೀಡಲು ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ.

ಸಭೆಯಲ್ಲಿ ಈ ಭಾಗದ ದೊಡ್ಡರಸಿನಕೆರೆ ಸಾದೊಳಲು, ಚಿಕ್ಕರಸಿನಕೆರೆ, ಗುರುದೇವರಹಳ್ಳಿ, ಕ್ಯಾತಘಟ್ಟ, ಬೊಮ್ಮನದೊಡ್ಡಿ, ತೊರೆಚಾಕನಹಳ್ಳಿ, ಕಳ್ಳಮೆಳ್ಳೆದೊಡ್ಡಿ, ಮಠದದೊಡ್ಡಿ, ಆಲಭುಜನಹಳ್ಳಿ, ದೇವರಹಳ್ಳಿ, ಕುರಿಕೆಂಪನದೊಡ್ಡಿ, ಅಣ್ಣೂರು, ಕಾರ್ಕಳ್ಳಿ, ಮೆಳಹಳ್ಳಿ ಗ್ರಾಮಗಳ ಗ್ರಾಮಸ್ಥರು ಹಾಗೂ ರೈತ ಮುಖಂಡರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್ ತಿಳಿಸಿದ್ದಾರೆ.