ಜಾಕ್‌ವೆಲ್ ರಸ್ತೆ ಸಂಪೂರ್ಣ ಜಲಾವೃತ

| Published : Jul 30 2024, 12:32 AM IST / Updated: Jul 30 2024, 12:33 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ರಬಕವಿ- ಬನಹಟ್ಟಿ ಜಾಕವೆಲ್‌ಗೆ ಹೋಗುವ ಮಾರ್ಗ ಮಧ್ಯದ ಜಾಕ್‌ವೆಲ್‌ ರಸ್ತೆ ಕೃಷ್ಣಾ ನದಿ ಪ್ರವಾಹದ ನೀರಿನಿಂದ ಸಂಪೂರ್ಣ ಬಂದ್ ಆಗಿದೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಪಿಐ ಸಂಜಯ ಬಳಿಗಾರ ಆದೇಶದ ಮೇರೆಗೆ ನದಿ ಪಾತ್ರದ ಅನೇಕ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಬಕವಿ- ಬನಹಟ್ಟಿ ಜಾಕವೆಲ್‌ಗೆ ಹೋಗುವ ಮಾರ್ಗ ಮಧ್ಯದ ಜಾಕ್‌ವೆಲ್‌ ರಸ್ತೆ ಕೃಷ್ಣಾ ನದಿ ಪ್ರವಾಹದ ನೀರಿನಿಂದ ಸಂಪೂರ್ಣ ಬಂದ್ ಆಗಿದೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಪಿಐ ಸಂಜಯ ಬಳಿಗಾರ ಆದೇಶದ ಮೇರೆಗೆ ನದಿ ಪಾತ್ರದ ಅನೇಕ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ.ಹಿಪ್ಪರಗಿ ಜಲಾಶಯದ ನೀರನ ಮಟ್ಟ: ಹಿಪ್ಪರಗಿ ಜಲಾಶಯದಲ್ಲಿ ಒಳಹರಿವು ೨,೭೭,೮೭೦ ಕ್ಯುಸೆಕ್ ಇದ್ದರೆ, ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಆಲಮಟ್ಟಿ ಜಲಾಶಯದ ಒಳಹರಿವು ೨,೭೧,೩೮೫ ಕ್ಯುಸೆಕ್‌ ಇದ್ದು, ೩,೧೫,೯೩೩ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ ಎಂದು ಜಮಖಂಡಿ ಎಸಿ ಶ್ವೇತಾ ಬೀಡಕರ ತಿಳಿಸಿದ್ದಾರೆ. ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಎರಡು ದಿನಗಳಲ್ಲಿ ಕೃಷ್ಣಾನದಿ ಪ್ರವಾಹದಲ್ಲಿಯೂ ಇಳಿಮುಖವಾಗುವ ಸಾಧ್ಯತೆ ಇದೆ